ಸಂಗ್ರಹ ಚಿತ್ರ 
ವಿದೇಶ

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನ

ನಮ್ಮ ಹುತಾತ್ಮರು ಮತ್ತು ಗಾಯಗೊಂಡವರ ರಕ್ತ ವ್ಯರ್ಥವಾಗಿ ಹೋಗಬಾರದು. ಇಸ್ರೇಲ್ ನಡೆಸಿದ ದಾಳಿಗಳು ನಮ್ಮ ಹಕ್ಕನ್ನು ಪ್ರತಿಪಾದಿಸುವ ಅಗತ್ಯವನ್ನು ತೋರಿಸುತ್ತವೆ. ನಾವು ಕಾನೂನುಬದ್ಧವಾಗಿ ಪ್ರತಿರೋಧ ಮಾಡುವ ಹಕ್ಕು ಹೊಂದಿದ್ದೇವೆ.

ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಭೀಕರ ದಾಳಿಗಳ ಬೆನ್ನಲ್ಲೇ ಪ್ರತೀಕಾರಕ್ಕೆ ಹಿಜ್ಬುಲ್ಲಾ ಮುಂದಾಗಿದ್ದು, ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಲೆಬನಾನ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ಇಸ್ರೇಲ್ ದಾಳಿಗಳಲ್ಲಿ 112 ಜನರು ಸಾವಿಗೀಡಾಗಿದ್ದು, 837 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ದಾಳಿಗಳು ಲೆಬನಾನ್‌ನ ವಿವಿಧ ಪ್ರದೇಶಗಳಲ್ಲಿ, ಮುಖ್ಯವಾಗಿ ಬಿಯರೂಟ್ ರಾಜಧಾನಿಯಲ್ಲಿಯೂ ನಡೆದಿದ್ದು ನಾಗರಿಕರಿಗೆ ಭಾರೀ ಹಾನಿಯನ್ನು ಉಂಟುಮಾಡಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಹಿಜ್ಬುಲ್ಲಾ ಹೇಳಿಕೆ ನೀಡಿದ್ದು, "ನಮ್ಮ ಹುತಾತ್ಮರು ಮತ್ತು ಗಾಯಗೊಂಡವರ ರಕ್ತ ವ್ಯರ್ಥವಾಗಿ ಹೋಗಬಾರದು. ಇಸ್ರೇಲ್ ನಡೆಸಿದ ದಾಳಿಗಳು ನಮ್ಮ ಹಕ್ಕನ್ನು ಪ್ರತಿಪಾದಿಸುವ ಅಗತ್ಯವನ್ನು ತೋರಿಸುತ್ತವೆ ಮತ್ತು ನಾವು ಕಾನೂನುಬದ್ಧವಾಗಿ ಪ್ರತಿರೋಧ ಮಾಡುವ ಹಕ್ಕು ಹೊಂದಿದ್ದೇವೆ ಎಂದು ಹೇಳಿದೆ. ದಾಳಿ ಮೂಲಕ ತನ್ನ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದೆ.

ಈ ನಡುವೆ ಅಮೆರಿಕಾ. ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಲೆಬನಾನ್ ಹಾಗೂ ಹಿಜ್ಬಲ್ಲಾ ಸಂಘರ್ಷದ ಮೇಲೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಲೆಬನಾನ್‌ನ ಪರಿಸ್ಥಿತಿ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಪ್ರತ್ಯೇಕ ಸಂಘರ್ಷ ಆಗಿದ್ದು, ಈ ಪ್ರದೇಶವನ್ನು ಕದನ ವಿರಾಮ ಒಪ್ಪಂದ ವ್ಯಾಪ್ತಿಗೆ ಸೇರಿಸಲು ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಲೆಬನಾನ್ ಮೇಲೆ ದಾಳಿಯನ್ನು ಖಂಡಿಸಿರುವ ಅವರು, ನಾಗರಿಕರ ಮೇಲೆ ಉಂಟಾದ ಭೀಕರ ಹಾನಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಲೆಬನಾನ್ ವಿಷಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಾಗುವುದು” ಎಂದು ತಿಳಿಸಿದ್ದಾರೆ,

ಈ ಮಾತು ಮುಂದಿನ ಹಸ್ತಕ್ಷೇಪ ಅಥವಾ ರಾಜತಾಂತ್ರಿಕ ಒತ್ತಡದ ಮೂಲಕ ನಿರ್ವಹಿಸುವ ಸೂಚನೆಗಳನ್ನು ನೀಡುವೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಲೆಬನಾನ್ ಹಾಗೂ ಇಸ್ರೇಲ್ ನಡುವೆ ಹಿಜ್ಬಲ್ಲಾ ಸಕ್ರಿಯ ಪ್ರತಿರೋಧದ ಕಾರಣ ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ. ಈ ಸಂಘರ್ಷವು ಶಾಂತಿ ಸ್ಥಾಪನೆಗೆ ಹತ್ತಿರವಾಗಿರುವ ಪ್ರಯತ್ನಗಳನ್ನು ತಡೆಯುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ಪ್ರತ್ಯೇಕ ಮಧ್ಯಸ್ಥಿಕೆ ಮತ್ತು ತಕ್ಷಣದ ರಾಜಕೀಯ ಒಪ್ಪಂದದ ಅಗತ್ಯವಿರುವುದನ್ನು ತೋರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!