ಸಾಂದರ್ಭಿಕ ಚಿತ್ರ 
ವಿದೇಶ

'ಇರಾನ್, ಪಾಕ್ ಮೂಲಕ ಚೀನಾದ ಕ್ಷಿಪಣಿಗಳನ್ನು ಬಳಸುತ್ತಿರುವುದು ಯುದ್ಧದ ಕೃತ್ಯ'

ಒಂದು ಕಡೆ ದುರ್ಬಲವಾದ ತಾತ್ಕಾಲಿಕ ಕದನ ವಿರಾಮದ ನಡುವೆ ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಗೆ ಪಾಕಿಸ್ತಾನದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ಮಧ್ಯವರ್ತಿಯಾಗಿರುವ ಪಾಕಿಸ್ತಾನದ ಪ್ರಾಮಾಣಿಕತೆಯ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ.

ವಾಷಿಂಗ್ಟನ್: ಒಂದು ಕಡೆ ದುರ್ಬಲವಾದ ತಾತ್ಕಾಲಿಕ ಕದನ ವಿರಾಮದ ನಡುವೆ ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಗೆ ಪಾಕಿಸ್ತಾನದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ಮಧ್ಯವರ್ತಿಯಾಗಿರುವ ಪಾಕಿಸ್ತಾನದ ಪ್ರಾಮಾಣಿಕತೆಯ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ.

ಚೀನಾ ಸರಬರಾಜು ಮಾಡಿದ ಕ್ಷಿಪಣಿಗಳನ್ನು ಇರಾನ್‌ಗೆ ಪೂರೈಸುವಲ್ಲಿ ಇಸ್ಲಾಮಾಬಾದ್ ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗೆ "ಪ್ರಾಮಾಣಿಕ ಮಧ್ಯವರ್ತಿ"ಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಮೈಕ್ ಫ್ಲಿನ್ ಅವರು ಶುಕ್ರವಾರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಜನರಲ್ ಫ್ಲಿನ್ ಸೇವೆ ಸಲ್ಲಿಸಿದ್ದರು.

ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಲು ಇರಾನ್ ಬಳಸಿದ ಕ್ಷಿಪಣಿಗಳು ಚೀನೀ ಕಮ್ಯುನಿಸ್ಟ್ ಪಕ್ಷ(CCP)ದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡಲ್ಪಟ್ಟವು ಮತ್ತು ಕಳುಹಿಸಲ್ಪಟ್ಟವು ಎಂದು X ನಲ್ಲಿ ಪೋಸ್ಟ್ ಮಾಡಲಾದ ಸುದ್ದಿಗೆ ಫ್ಲಿನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಮೊಸಾದ್ ವ್ಯಾಖ್ಯಾನದ X ಪೋಸ್ಟ್‌ಗೆ ಪ್ರತಿಕ್ರಿಯಿಸಿದ, ಫ್ಲಿನ್, "CCP ಪಾಕಿಸ್ತಾನದ ಮೂಲಕ ಇರಾನ್‌ಗೆ ಕ್ಷಿಪಣಿಗಳನ್ನು ಪೂರೈಸಿದೆ ಎಂಬ ಈ ವರದಿ ನಿಜವಾಗಿದ್ದರೆ, ಇದು ಯುದ್ಧದ ಕೃತ್ಯ ಮತ್ತು ಚೀನಾ(ಮತ್ತು ಪಾಕಿಸ್ತಾನ)ವನ್ನು ತಕ್ಷಣವೇ ಗಮನಿಸಬೇಕು ಮತ್ತು CCP ನಮ್ಮ US ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಹೋಗಲು ಇನ್ನೂ 500,000 ವಿದ್ಯಾರ್ಥಿಗಳನ್ನು ಕಳುಹಿಸಲು ಅನುಮತಿಸಬಾರದು ಎಂದಿದ್ದಾರೆ.

"ಇದು ನಿಜವಾಗಿದ್ದರೆ, ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಕದನ ವಿರಾಮ ಅಥವಾ ದೀರ್ಘಾವಧಿಯ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಪಾಕಿಸ್ತಾನದ "ಪ್ರಾಮಾಣಿಕ ಮಧ್ಯವರ್ತಿ"ಯೇ? ಯಾರಾದರೂ ವಾಸ್ತವವನ್ನು ಪರಿಶೀಲಿಸಬೇಕಾಗಿದೆ" ಫ್ಲಿನ್ ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ಘೋಷಿಸಿದ ಎರಡು ವಾರಗಳ ಕದನ ವಿರಾಮದ ಮಧ್ಯೆ ಜನರಲ್ ಫ್ಲಿನ್ ಅವರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ