ಜೆಡಿ ವ್ಯಾನ್ಸ್ 
ವಿದೇಶ

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಳಿಸಲು ಮತ್ತು ಎರಡು ವಾರಗಳ ಕಾಲ ಯುಎಸ್ ಮತ್ತು ಇರಾನ್ ನಡುವೆ ತಕ್ಷಣದ ಕದನ ವಿರಾಮ ಒಪ್ಪಂದದ ನಂತರ ಈ ಮಾತುಕತೆ ನಡೆಯುತ್ತಿದೆ.

ವಾಷಿಂಗ್ಟನ್: ಇರಾನ್‌ ಜೊತೆಗಿನ ಮಹತ್ವದ ಮಾತುಕತೆಗಾಗಿ ಯುಎಸ್ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಶುಕ್ರವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ತೆರಳಿದರು. ಇರಾನ್ ನಿಂದ ಯಾವುದೇ ಪ್ರಾಮಾಣಿಕತೆಯ ಕೊರತೆಯ ವಿರುದ್ಧ ಎಚ್ಚರಿಕೆ ಜೊತೆಗೆ ಆಶಾವಾದವನ್ನು ವ್ಯಕ್ತಪಡಿಸಿದರು.

ಇಸ್ಲಾಮಾಬಾದ್ ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವ್ಯಾನ್ಸ್, ಇರಾನ್ ಒಳ್ಳೆಯ ನಂಬಿಕೆಯಿಂದ ಚರ್ಚಿಸಿದರೆ ಅಮೆರಿಕ ರಚನಾತ್ಮಕ ಮಾತುಕತೆಗೆ ಮುಕ್ತವಾಗಿದೆ. ನಾವು ಅಂತಹ ಮಾತುಕತೆಗಾಗಿ ಎದುರು ನೋಡುತ್ತಿದ್ದೇವೆ. ಇದು ಫಲಪ್ರಧವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಟ್ರಂಪ್ ಹೇಳಿದಂತೆ ಇರಾನಿಯನ್ನರು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಲು ಸಿದ್ಧರಿದ್ದರೆ, ನಾವು ಖಂಡಿತವಾಗಿಯೂ ಮುಕ್ತವಾಗಿ ಚರ್ಚಿಸಲು ಸಿದ್ದರಿದ್ದೇವೆ ಎಂದು ಹೇಳಿದರು.

ಆದಾಗ್ಯೂ, ಮಾತುಕತೆಯ ವೇಳೆ ಇರಾನ್ ಕೆಟ್ಟ ನಂಬಿಕೆಯಿಂದ ವರ್ತಿಸಲು ಪ್ರಯತ್ನಿಸಿದರೆ ಅಮೆರಿಕ ಒಳ್ಳೆಯ ರೀತಿ ಪ್ರತಿಕ್ರಿಯಿಸುವುದಿಲ್ಲ. ಅವರು ನಮ್ಮೊಂದಿರುವ ಆಟವಾಡಲು ಪ್ರಯತ್ನಿಸಿದರೆ, ಸಂಧಾನದ ರಾಷ್ಟ್ರ ಅಷ್ಟು ಸ್ವೀಕಾರಾರ್ಹವಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಪ್ರಕಾರ, ವ್ಯಾನ್ಸ್, ಯುಎಸ್ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ನಿಯೋಗದ ಭಾಗವಾಗಲಿದ್ದಾರೆ. ಆ ಮಾತುಕತೆಗಳ ಮೊದಲ ಸುತ್ತು ಸ್ಥಳೀಯ ಕಾಲಮಾನ ಶನಿವಾರ ಬೆಳಿಗ್ಗೆ ನಡೆಯಲಿದೆ.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಳಿಸಲು ಮತ್ತು ಎರಡು ವಾರಗಳ ಕಾಲ ಯುಎಸ್ ಮತ್ತು ಇರಾನ್ ನಡುವೆ ತಕ್ಷಣದ ಕದನ ವಿರಾಮ ಒಪ್ಪಂದದ ನಂತರ ಈ ಮಾತುಕತೆ ನಡೆಯುತ್ತಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಲಿಬಾಫ್ ಆ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಇವರು ಸಂಘರ್ಷದ ಆರಂಭಿಕ ಹಂತದಿಂದಲೂ ಕಾರ್ಯತಂತ್ರದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.

ಆದಾಗ್ಯೂ, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಂತಹ ಹಿರಿಯ ಅಧಿಕಾರಿಗಳು ಅಮೆರಿಕ ಜೊತೆಗೆ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ತೆರಳಿದ್ದಾರೆಯೇ ಎಂಬುದನ್ನು ಇರಾನ್‌ನ ರಾಜ್ಯ ಮಾಧ್ಯಮವು ಇನ್ನೂ ಖಚಿತಪಡಿಸಿಲ್ಲ. ಈ ಮಧ್ಯೆ, ನಾಳೆ ನಡೆಯಲಿರುವ ಮಾತುಕತೆಗೆ ಇರಾನ್ ನಿಯೋಗದ ಆಗಮನವನ್ನು ಪಾಕಿಸ್ತಾನಿ ಮಾಧ್ಯಮಗಳು ಖಚಿತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel