ಜೆಡಿ ವ್ಯಾನ್ಸ್ - ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶನಿವಾರ ಇಸ್ಲಾಮಾಬಾದ್‌ನಲ್ಲಿ 21 ಗಂಟೆಗಳ ಕಾಲ ನಡೆದ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶ ಇಲ್ಲದೆಯೇ ಕೊನೆಗೊಂಡಿದೆ ಎಂದು ವ್ಯಾನ್ಸ್ ಇಂದು ಮುಂಜಾನೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ನವದೆಹಲಿ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಾಬಾದ್‌ನಲ್ಲಿ ಭೌತಿಕವಾಗಿ ಇರಲಿಲ್ಲ, ಆದರೆ ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸುವ ಆಶಯದೊಂದಿಗೆ ಶಾಂತಿ ಮಾತುಕತೆಯಲ್ಲಿ ತೊಡಗಿರುವ ತಮ್ಮ ತಂಡದೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗವು ಪಾಕಿಸ್ತಾನದಲ್ಲಿ ಇರಾನ್ ಜೊತೆ ನಡೆದ ಹಲವು ಸುತ್ತಿನ ಮಾತುಕತೆಗಳ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ 'ಡಜನ್'ಗೂ ಅಧಿಕ ಬಾರಿ ಟ್ರಂಪ್ ಜೊತೆಗೆ ಮಾತನಾಡಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶನಿವಾರ ಇಸ್ಲಾಮಾಬಾದ್‌ನಲ್ಲಿ 21 ಗಂಟೆಗಳ ಕಾಲ ನಡೆದ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶ ಇಲ್ಲದೆಯೇ ಕೊನೆಗೊಂಡಿದೆ ಎಂದು ವ್ಯಾನ್ಸ್ ಇಂದು ಮುಂಜಾನೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಮಾತುಕತೆ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಕೇಳಿದಾಗ ವ್ಯಾನ್ಸ್, 'ನಾವು ಅಧ್ಯಕ್ಷರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೆವು. ಕಳೆದ 21 ಗಂಟೆಗಳಲ್ಲಿ ನಾವು ಅವರೊಂದಿಗೆ ಎಷ್ಟು ಬಾರಿ ಮಾತನಾಡಿದ್ದೇವೆ ಎಂದರೆ, ಅರ್ಧ ಡಜನ್ ಅಥವಾ ಒಂದು ಡಜನ್ ಬಾರಿ ಎಂಬುದು ನನಗೆ ತಿಳಿದಿಲ್ಲ' ಎಂದರು.

ಅಮೆರಿಕದ ನಿಯೋಗವು ಅಡ್ಮಿರಲ್ ಬ್ರಾಡ್ ಕೂಪರ್, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಇಡೀ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಮಾತನಾಡಿದೆ. ನಾವು ಸ್ಕಾಟ್ ಬೆಸೆಂಟ್ (ಖಜಾನೆ ಕಾರ್ಯದರ್ಶಿ) ಅವರೊಂದಿಗೂ ಹಲವಾರು ಬಾರಿ ಮಾತನಾಡಿದ್ದೇವೆ ಎಂದು ವ್ಯಾನ್ಸ್ ಹೇಳಿದರು.

'ಇರಾನ್ ಜೊತೆಗಿನ ಶಾಂತಿ ಮಾತುಕತೆಯ ಉದ್ದಕ್ಕೂ ತಮ್ಮ ತಂಡದೊಂದಿಗೆ ಅವರು ನಿಯಮಿತವಾಗಿ ಸಂಪರ್ಕದಲ್ಲಿದ್ದರು. ನಾವು ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದೇವೆ. ನಾವು ಈಗ ಸ್ಪಷ್ಟ, ಅಂತಿಮ ಪ್ರಸ್ತಾಪವನ್ನು ಮಂಡಿಸಿದ್ದೇವೆ. ಇದು ನಮ್ಮ ಅತ್ಯುತ್ತಮ ಒಪ್ಪಂದವಾಗಿದ್ದು, ಬದಲಾಗುವ ಸಾಧ್ಯತೆಯಿಲ್ಲ' ಎಂದು ತಿಳಿಸಿದರು.

ಅಮೆರಿಕ-ಇರಾನ್ ಮಾತುಕತೆ ವಿಫಲ

'ಸರಳವಾದ ಸಂಗತಿಯೆಂದರೆ, ಅವರು ಪರಮಾಣು ಶಸ್ತ್ರಾಸ್ತ್ರ ಮಾಡುವ ಸಾಧನಗಳನ್ನು ಹುಡುಕುವುದಿಲ್ಲ ಮತ್ತು ಅಭಿವೃದ್ಧಿಪಡಿಸುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನಾವು ನೋಡಬೇಕಾಗಿದೆ. ಇದು ಅಧ್ಯಕ್ಷರ (ಡೊನಾಲ್ಡ್ ಟ್ರಂಪ್) ಪ್ರಮುಖ ಗುರಿಯಾಗಿದೆ ಮತ್ತು ನಾವು ಮಾತುಕತೆಗಳ ಮೂಲಕ ಸಾಧಿಸಲು ಪ್ರಯತ್ನಿಸಿದ್ದು ಅದನ್ನೇ' ಎಂದು ಹೇಳಿದರು.

'ಇರಾನಿಯನ್ನರು ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸದಿರಲು ಮೂಲಭೂತ ಇಚ್ಛೆಯ ಬದ್ಧತೆಯನ್ನು ಅಮೆರಿಕವು ದೀರ್ಘಾವಧಿಯಲ್ಲಿ ಬಯಸಿದೆ. ಆದರೆ, ಆ ಬದ್ಧತೆ ನಮಗಿನ್ನೂ ಸಿಕ್ಕಿಲ್ಲ. ನಾವು ಅದನ್ನು ಸಾಧಿಸುತ್ತೇವೆ ಎಂದು ನಾವು ಭಾವಿಸುತ್ತೇವೆ' ಎಂದು ವ್ಯಾನ್ಸ್ ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಇಸ್ಲಾಮಾಬಾದ್ ಮಾತುಕತೆಗಳಲ್ಲಿನ ಬಿಕ್ಕಟ್ಟಿಗೆ ಅಮೆರಿಕದ 'ಅಸಮಂಜಸ ಬೇಡಿಕೆಗಳು' ಕಾರಣ ಎಂದು ಇರಾನ್ ರಾಜ್ಯ ಪ್ರಸಾರಕ IRIB ಭಾನುವಾರ ತಿಳಿಸಿದೆ.

'ಇರಾನ್‌ನ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಇರಾನಿನ ನಿಯೋಗವು 21 ಗಂಟೆಗಳ ಕಾಲ ನಿರಂತರವಾಗಿ ಮತ್ತು ತೀವ್ರವಾಗಿ ಮಾತುಕತೆ ನಡೆಸಿತು; ಇರಾನಿನ ನಿಯೋಗದ ವಿವಿಧ ಉಪಕ್ರಮಗಳ ಹೊರತಾಗಿಯೂ, ಅಮೆರಿಕದ ಕಡೆಯ ಅಸಮಂಜಸ ಬೇಡಿಕೆಗಳು ಮಾತುಕತೆಗಳ ಪ್ರಗತಿಯನ್ನು ತಡೆಯಿತು. ಹೀಗಾಗಿ ಮಾತುಕತೆಗಳು ಕೊನೆಗೊಂಡವು' ಎಂದು IRIB ಟೆಲಿಗ್ರಾಮ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT