ಹಾರ್ಮುಜ್ ಜಲಸಂಧಿಯಲ್ಲಿ ಕ್ಯೂನಲ್ಲಿ ನಿಂತಿರುವ ಹಡಗುಗಳು 
ವಿದೇಶ

ಅಮೆರಿಕಕ್ಕೆ ಸೆಡ್ಡು: 'ನೌಕಾ ದಿಗ್ಬಂಧನ' ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಇರಾನ್‌ ನ ಎರಡು ಹಡಗುಗಳು!

ಅಮೆರಿಕದ ದಿಗ್ಬಂಧನ ಜಾರಿಗೆ ಬಂದ ನಂತರ ಇರಾನ್‌ಗೆ ಸಂಬಂಧಿಸಿದ ನಾಲ್ಕು ಹಡಗುಗಳು ಈ ಮಾರ್ಗವನ್ನು ಬಳಸಿವೆ ಎಂದು ಕಡಲ ದತ್ತಾಂಶ ಪೂರೈಕೆದಾರ ಕೆಪ್ಲರ್ (Kpler) ಹೇಳಿದೆ.

ಟೆಹರಾನ್: ಅಮೆರಿಕಕ್ಕೆ ಇರಾನ್ ಮತ್ತೊಂದು ಸೆಡ್ಡು ಹೊಡೆದಿದೆ. ಅಮೆರಿಕದ ಮಿಲಿಟರಿ ದಿಗ್ಬಂಧನದ ನಡುವೆಯೂ ಇರಾನ್ ಬಂದರುಗಳಿಂದ ಎರಡು ಹಡಗುಗಳು ಸೋಮವಾರ ಹಾರ್ಮುಜ್ ಜಲಸಂಧಿಯನ್ನು ದಾಟಿರುವುದನ್ನು ಕಡಲ ಟ್ರ್ಯಾಕಿಂಗ್ ಡೇಟಾ ಮಂಗಳವಾರ ತಿಳಿಸಿದೆ.

ಅಮೆರಿಕದ ದಿಗ್ಬಂಧನ ಜಾರಿಗೆ ಬಂದ ನಂತರ ಇರಾನ್‌ಗೆ ಸಂಬಂಧಿಸಿದ ನಾಲ್ಕು ಹಡಗುಗಳು ಈ ಮಾರ್ಗವನ್ನು ಬಳಸಿವೆ ಎಂದು ಕಡಲ ದತ್ತಾಂಶ ಪೂರೈಕೆದಾರ ಕೆಪ್ಲರ್ (Kpler) ಹೇಳಿದೆ.

ಲೈಬೀರಿಯಾ ಧ್ವಜವನ್ನು ಹೊಂದಿರುವ ಬೃಹತ್ ಹಡಗು ಕ್ರಿಸ್ಟಿಯಾನ್ನಾ ಇರಾನಿನ ಬಂದರು ಇಮಾಮ್ ಖೊಮೇನಿ ಬಂದರಿನಲ್ಲಿ 74,000 ಟನ್ ಜೋಳವನ್ನು ಆನ್ ಲೋಡ್ ಮಾಡಿದ ನಂತರ ಸೋಮವಾರ ಸುಮಾರು 4 ಗಂಟೆ ಸುಮಾರಿಗೆ ಜಲಸಂಧಿಯಲ್ಲಿ ಇರಾನ್‌ನ ಲಾರಕ್ ದ್ವೀಪವನ್ನು ದಾಟಿತು ಎಂದು ಕೆಪ್ಲರ್ ಡೇಟಾ ತೋರಿಸಿದೆ.

ಎರಡನೇ ಹಡಗು, ಕೊಮೊರೊಸ್ ಧ್ವಜವನ್ನು ಹೊಂದಿರುವ ಟ್ಯಾಂಕರ್ ಎಲ್ಪಿಸ್, ಸುಮಾರು 11 ಗಂಟೆ ಸುಮಾರಿಗೆ ಲಾರಕ್ ದ್ವೀಪದ ಬಳಿ ಇತ್ತು. ಸುಮಾರು 4 ಗಂಟೆ ವೇಳೆ ಜಲಸಂಧಿಯನ್ನು ದಾಟಿತು. ಮಾರ್ಚ್ 31 ರಂದು ಇರಾನಿನ ಬುಶೆಹರ್ ಬಂದರಿನಿಂದ ಹೊರಟಿದ್ದ ಈ ಹಡಗು 31,000 ಟನ್ ಮೆಥನಾಲ್‌ನಿಂದ ತುಂಬಿತ್ತು ಎಂದು ಕೆಪ್ಲರ್ ದತ್ತಾಂಶ ತೋರಿಸಿದೆ.

ದಿಗ್ಬಂಧನ ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲಾ ರಾಷ್ಟ್ರಗಳ ಹಡಗುಗಳನ್ನು ಗುರಿಯಾಗಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿತ್ತು.

ಚೀನಾದ ಟ್ಯಾಂಕರ್, ರಿಚ್ ಸ್ಟಾರಿ, ಸೋಮವಾರದಿಂದ ಮಂಗಳವಾರದವರೆಗೆ ರಾತ್ರಿಯಿಡೀ ಲಾರಕ್ ದ್ವೀಪದ ದಕ್ಷಿಣಕ್ಕೆ ಇರಾನಿನ ಅನುಮೋದಿತ ಪರಿಶೀಲನಾ ಮಾರ್ಗದ ಮೂಲಕ ಜಲಸಂಧಿಯನ್ನು ದಾಟಿತು. ಈ ಹಡಗು 31,500 ಟನ್ ಮೆಥನಾಲ್ ಒಮಾನ್‌ನ ಸೊಹಾರ್‌ಗೆ ಸಾಗಿಸುತಿತ್ತು ಎಂದು ಕೆಪ್ಲರ್ ಹೇಳಿದೆ. ಚೀನಾದ ಹಡುಗು ಹಾರ್ಮುಜ್ ಜಲ ಸಂಧಿ ದಾಟಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಿಗ್ಬಂಧನದ "ಪರೀಕ್ಷೆ ಎಂದು ಜರ್ನಲ್ ಲಾಯ್ಡ್ಸ್ ಲಿಸ್ಟ್ ಸೇರಿದಂತೆ ಮತ್ತಿತರ ಮಾಧ್ಯಮಗಳು ಹೇಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ನಮ್ಮ ಬೆಕ್ಕು ಪ್ರೆಗ್ನೆಂಟ್ ಆಗಲು ನಿಮ್ಮ ಗಂಡು ಬೆಕ್ಕೇ ಕಾರಣ; ಮಾರಾಮಾರಿ! Video ನೋಡಿ

ಶಾಹಿದ್ ಅಫ್ರಿದಿ ನನ್ನ ಕ್ರಶ್: 'ಧುರಂಧರ್' ನಿರ್ದೇಶಕನ ಪತ್ನಿ ಯಾಮಿ ಹೇಳಿಕೆ ವೈರಲ್; ರಾಷ್ಟ್ರೀಯವಾದ ಬೂಟಾಟಿಕೆ ಎಂದ ನೆಟ್ಟಿಗರು

ಬಿಹಾರ: ನಿತೀಶ್ ಆಡಳಿತ ಅಂತ್ಯ; ಮೊದಲ ಬಿಜೆಪಿ CM ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

"ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ಪಗಡಿ ತೆಗೆಯುತ್ತೇನೆ": ಕೊನೆಗೂ ಶಪಥ ಈಡೇರಿಸಿಕೊಂಡ ಸಾಮ್ರಾಟ್ ಚೌಧರಿ!

SCROLL FOR NEXT