ವಾಫಿಕ್ ಸಫಾ, ಹೆಜ್ಬೊಲ್ಲಾ ರಾಜಕೀಯ ಮಂಡಳಿಯ ಉನ್ನತ ಶ್ರೇಣಿಯ ಸದಸ್ಯ 
ವಿದೇಶ

ಲೆಬನಾನ್-ಇಸ್ರೇಲ್ ಮಾತುಕತೆ: ಏನೇ ಒಪ್ಪಂದ ಮಾಡಿಕೊಂಡರೂ ನಮಗೆ ಸಂಬಂಧವಿಲ್ಲ; ಹಿಜ್ಬುಲ್ಲಾ ಸ್ಪಷ್ಟನೆ

ಲೆಬನಾನ್ ಮತ್ತು ಇಸ್ರೇಲ್ ನಡುವೆ ನಡೆಯುವ ಈ ಮಾತುಕತೆಗಳ ಫಲಿತಾಂಶಗಳ ಬಗ್ಗೆ ನಮಗೆ ಯಾವುದೇ ಆಸಕ್ತಿ ಇಲ್ಲ. ಅವರು ಏನು ಒಪ್ಪಂದ ಮಾಡಿಕೊಂಡರೂ ಅದಕ್ಕೆ ನಾವು ಬದ್ಧರಾಗುವುದಿಲ್ಲ.

ಲೆಬನಾನ್‌ನ ಶಸ್ತ್ರಸಜ್ಜಿತ ಸಂಘಟನೆ ಹಿಜ್ಬುುಲ್ಲಾ ಅಮೆರಿಕಾದಲ್ಲಿ ನಡೆಯಲಿರುವ ಲೆಬನಾನ್–ಇಸ್ರೇಲ್ ನೇರ ಮಾತುಕತೆಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆ ಮಾತುಕತೆಗಳಿಂದ ಹೊರಬರುವ ಯಾವುದೇ ಒಪ್ಪಂದಕ್ಕೂ ತಾವು ಬದ್ಧರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿಜ್ಬುುಲ್ಲಾ ಸಂಘಟನೆ ಹಿರಿಯ ನಾಯಕ ವಾಫಿಕ್ ಸಫಾ ಮಾತನಾಡಿದ್ದು, ಲೆಬನಾನ್ ಮತ್ತು ಇಸ್ರೇಲ್ ನಡುವೆ ನಡೆಯುವ ಈ ಮಾತುಕತೆಗಳ ಫಲಿತಾಂಶಗಳ ಬಗ್ಗೆ ನಮಗೆ ಯಾವುದೇ ಆಸಕ್ತಿ ಇಲ್ಲ. ಅವರು ಏನು ಒಪ್ಪಂದ ಮಾಡಿಕೊಂಡರೂ ಅದಕ್ಕೆ ನಾವು ಬದ್ಧರಾಗುವುದಿಲ್ಲ” ಎಂದು ಹೇಳಿದ್ದಾರೆ.

ಅಮೆರಿಕಾದಲ್ಲಿ ನಡೆಯಲಿರುವ ಈ ಮಾತುಕತೆಗಳಲ್ಲಿ ಲೆಬನಾನ್ ಮತ್ತು ಇಸ್ರೇಲ್ ರಾಯಭಾರಿಗಳು ಹಲವು ದಶಕಗಳ ಬಳಿಕ ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ.

ಈ ಎರಡು ರಾಷ್ಟ್ರಗಳಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳೇ ಇಲ್ಲದಿರುವುದರಿಂದ, ಈ ಸಭೆ ಐತಿಹಾಸಿಕವೆಂದು ಪರಿಗಣಿಸಲಾಗುತ್ತಿದೆ.

ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಜ್ಬುಲ್ಲಾ ಶಸ್ತ್ರತ್ಯಾಗ ಮಾಡಬೇಕು ಎಂಬುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಇಸ್ರೇಲ್ ಪರವಾಗಿ ಕದನ ವಿರಾಮದ ಬಗ್ಗೆ ಯಾವುದೇ ಸಡಿಲಿಕೆ ಇಲ್ಲ ಎಂಬ ಸಂದೇಶವನ್ನೂ ನೀಡಲಾಗಿದ್ದು, ಇದರಿಂದ ಮಾತುಕತೆಗಳು ಸುಲಭವಾಗುವುದಿಲ್ಲ ಎಂಬ ಸೂಚನೆ ಸಿಗುತ್ತಿದೆ.

ಇದಕ್ಕೂ ಮುನ್ನ ಪಾಕಿಸ್ತಾನದಲ್ಲಿ ನಡೆದ ಅಮೆರಿಕಾ–ಇರಾನ್ ಮಾತುಕತೆಗಳ ವೇಳೆ, ಇರಾನ್ ಲೆಬನಾನ್ ವಿಚಾರವನ್ನೂ ಸೇರಿಸಲು ಯತ್ನಿಸಿದ್ದರೆ, ಅಮೆರಿಕಾ ಮತ್ತು ಇಸ್ರೇಲ್ ಅದನ್ನು ತಿರಸ್ಕರಿಸಿದ್ದವು.

ಈ ನಡುವೆ, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆ ಆದ ಕೆಲವೇ ಗಂಟೆಗಳ ನಂತರ, ಇಸ್ರೇಲ್ ಲೆಬನಾನ್‌ನಲ್ಲಿ 100ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿತ್ತು. ವಿಶೇಷವಾಗಿ ಬೈರೂತ್ ನಗರದ ನಾಗರೀಕ ಪ್ರದೇಶಗಳು ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ನಡೆದಿತ್ತು.

ಇತ್ತೀಚಿನ ಮಾತುಕತೆಗಳ ಪರಿಣಾಮವಾಗಿ ಬೈರೂತ್ ನಗರ ಮತ್ತು ಅದರ ದಕ್ಷಿಣ ಭಾಗ (ಡಾಹಿಯೆ ಪ್ರದೇಶ)ದಲ್ಲಿ ದಾಳಿಗಳು ತಾತ್ಕಾಲಿಕವಾಗಿ ನಿಂತಿವೆ. ಆದರೂ ದಕ್ಷಿಣ ಲೆಬನಾನ್ ಭಾಗದಲ್ಲಿ ಯುದ್ಧ ತೀವ್ರವಾಗಿಯೇ ಮುಂದುವರಿದಿದೆ.

ಒಟ್ಟಾರೆ, ಅಮೆರಿಕಾದಲ್ಲಿ ನಡೆಯಲಿರುವ ಲೆಬನಾನ್–ಇಸ್ರೇಲ್ ಮಾತುಕತೆಗಳು ಶಾಂತಿಯತ್ತ ಹೆಜ್ಜೆಯಾಗಬಹುದೆಂಬ ನಿರೀಕ್ಷೆ ಇದ್ದರೂ, ಹಿಜ್ಬುಲ್ಲಾ ನೀಡಿರುವ ಸ್ಪಷ್ಟ ವಿರೋಧದಿಂದ ಈ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ: ನಿತೀಶ್ ಆಡಳಿತ ಅಂತ್ಯ, ಮೊದಲ ಬಿಜೆಪಿ CM ಆಗಿ ಸಾಮ್ರಾಟ್ ಚೌಧರಿ ಆಯ್ಕೆ!

10 ಬಾರಿ ಬಿಹಾರ CM ಆಗಿದ್ದ ನಿತೀಶ್ ಕುಮಾರ್ ಯುಗಾಂತ್ಯ: ಕೊನೆಗೂ ರಾಜೀನಾಮೆ; ನಾಳೆ BJP ಮುಖ್ಯಮಂತ್ರಿ ಪ್ರಮಾಣ

ಅಮೆರಿಕ-ಇರಾನ್ ಸಂಘರ್ಷ: ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಬ್ರೇಕ್ ಹಾಕಿದ ಇಟಲಿ!

ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮೇ 1 ರಿಂದ ಮರಾಠಿ ಕಡ್ಡಾಯ; ಕಲಿಯದಿದ್ದರೆ ಲೈಸೆನ್ಸ್ ರದ್ದು!

ಕಳಪೆ ಬ್ಯಾಟಿಂಗ್, Suryakumar Yadav ನಾಯಕತ್ವಕ್ಕೆ ಕುತ್ತು?; ಹೊಸ ಟಿ20 ನಾಯಕನ ಹುಡುಕಾಟದಲ್ಲಿ BCCI!

SCROLL FOR NEXT