ಅಮಿರ್ ಹಮ್ಜಾ 
ವಿದೇಶ

ಬೆಂಗಳೂರಿನ IISc ಸೇರಿ ದೇಶದ ಹಲವೆಡೆ ಉಗ್ರರ ದಾಳಿ ಹಿಂದಿನ ರೂವಾರಿಗೆ ಗುಂಡೇಟು; ಸ್ಥಿತಿ ಗಂಭೀರ!

ಲಾಹೋರ್ ನ ನ್ಯೂಸ್ ಚಾನೆಲ್ ಚಾನೆಲ್ ವೊಂದರ ಹೊರಗೆ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಮೂಲಗಳು ತಿಳಿಸಿವೆ.

ಇಸ್ಲಾಮಬಾದ್ : 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ( IISc) ಸೇರಿದಂತೆ ದೇಶದ ಹಲವೆಡೆ ಭಯೋತ್ಪಾದಕ ದಾಳಿ ಹಿಂದಿನ ರೂವಾರಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.

ಪಾಕ್ ಮೂಲಕ ಲಷ್ಕರ್ -ಇ- ತೋಯ್ಬಾ (LET)ಸಂಘಟನೆಯ ಸಹ ಸಂಸ್ಥಾಪಕ ಅಮೀರ್ ಹಮ್ಜಾನ ಮೇಲೆ ಲಾಹೋರ್ ನಲ್ಲಿ ಅಪರಿಚಿತ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದಾನೆ. ಸದ್ಯ ಆತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಲಾಹೋರ್ ನ ನ್ಯೂಸ್ ಚಾನೆಲ್ ಚಾನೆಲ್ ವೊಂದರ ಹೊರಗೆ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಮೂಲಗಳು ತಿಳಿಸಿವೆ. ಒಂದು ವರ್ಷದಲ್ಲಿ ಎರಡನೇ ಬಾರಿಗೆ ಹಮ್ಜಾ ಮೇಲೆ ದಾಳಿ ನಡೆದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಲಾಹೋರ್‌ನಲ್ಲಿರುವ ಆತನ ನಿವಾಸದ ಹೊರಗೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು.

ತದನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಪಾಕ್ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ, ಆದರೂ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೀರ್ ಹಮ್ಜಾ ಯಾರು?

ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾದಲ್ಲಿ ಮೇ 10, 1959 ರಂದು ಜನಿಸಿದ ಹಮ್ಜ, ಅಫ್ಘಾನ್ ಜಿಹಾದ್‌ನ ಅನುಭವಿ. ಈತ 1985 ಮತ್ತು 1986 ರ ನಡುವೆ ಭಯೋತ್ಪಾದಕ ಹಫೀಜ್ ಸಯೀದ್ ಜೊತೆಗೆ ಉಗ್ರ ಸಂಘಟನೆ ಎಲ್‌ಇಟಿ ಸ್ಥಾಪಿಸಿದ.

ಬೆಂಗಳೂರು IISC ಮೇಲೆ ದಾಳಿ

ಕಾಶ್ಮೀರದ ಹೊರಗೆ 2005 ರ ಪ್ರಮುಖ ಎಲ್‌ಇಟಿ ದಾಳಿಗಳಲ್ಲಿ ಒಂದಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂಚಿನ ರೂವಾರಿ ಎನ್ನಲಾಗಿದೆ.

ಸಯೀದ್ ನಂತರ ಎರಡನೇ ಪ್ರಮುಖ ಎಲ್‌ಇಟಿ ನಾಯಕ ಎಂದು ಪರಿಗಣಿಸಲ್ಪಟ್ಟ ಹಮ್ಜಾ, ಉಗ್ರ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾನೆ. ಅದರ ಪ್ರಚಾರ ವಿಭಾಗ ಮತ್ತು ಸಂಪರ್ಕ ಅಭಿಯಾನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯುನೈಟೆಡ್ ಸ್ಟೇಟ್ಸ್ ಖಜಾನೆ ಇಲಾಖೆಯು ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ.

66 ವರ್ಷದ ಹಮ್ಜಾ, ಎಲ್‌ಇಟಿ ಸಿದ್ಧಾಂತವಾದಿಯಾದರೂ ಅತ್ಯುತ್ತಮ ಭಾಷಣಕಾರ ಹಾಗೂ ಬರಹಗಾರನಾಗಿಯೂ ಹೆಸರುವಾಸಿಯಾಗಿದ್ದಾನೆ. ಎಲ್‌ಇಟಿಯ ಪ್ರಚಾರ ಸಾಮಗ್ರಿಗಳ ಪ್ರಸಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಭಾರೀ ದುರಂತ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸಾವು

Kohli ದಾಖಲೆ ಧೂಳಿಪಟ: T20ಯಲ್ಲಿ ಹಲವು ದಾಖಲೆ ಬರೆದ ಶ್ರೇಯಸ್ ಅಯ್ಯರ್

ಚಿಕ್ಕಬಳ್ಳಾಪುರ: ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ಮನೆಗೆ ನುಗ್ಗಿ ಕತ್ತು ಕೊಯ್ಯಲು ಯತ್ನ, ಪುಂಡರಿಂದ ಕಲ್ಲು ತೂರಾಟ!

ಜೈಲು ಪಾಲಾದ್ರೆ CM, PM ಕುರ್ಚಿ ಖಾಲಿ: ಕೇಂದ್ರದ 130ನೇ ಸಂವಿಧಾನ ತಿದ್ದುಪಡಿ ಬಿಲ್'ಗೆ ವಿಪಕ್ಷಗಳ ವಿರೋಧ; ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಹೈಡ್ರಾಮಾ ಫಿಕ್ಸ್..!

ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಐತಿಹಾಸಿಕ ಗುರುದ್ವಾರ ಧ್ವಂಸ; ಭಾರತ ಖಂಡನೆ, ತೀವ್ರ ಪ್ರತಿಭಟನೆ