ಹಾರ್ಮುಜ್ ಜಲಸಂಧಿ Photo | AP
ವಿದೇಶ

ಗಲ್ಫ್‌ನಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗಿಗೂ ನಮಗೂ ಸಂಬಂಧವಿಲ್ಲ: ಇರಾನ್​​ಗೆ ಕೆಮಿಕಲ್ಸ್ ರವಾನೆ ತಳ್ಳಿಹಾಕಿದ ಚೀನಾ

"ನನ್ನ ಪ್ರಕಾರ, ಇದು ವಿದೇಶಿ ಧ್ವಜ ಹೊಂದಿರುವ ಕಂಟೇನರ್ ಹಡಗು. ಅದಕ್ಕೆ ಯಾವುದೇ ದುರುದ್ದೇಶಪೂರಿತ ಸಂಬಂಧ ಕಲ್ಪಿಸುವುದನ್ನು ಮತ್ತು ಅಪ್ರಚಾರವನ್ನು ಚೀನಾ ವಿರೋಧಿಸುತ್ತದೆ"

ಬೀಜಿಂಗ್: ಕ್ಷಿಪಣಿಗಳನ್ನು ತಯಾರಿಸಲು ಬಳಸುವ ರಾಸಾಯನಿಕ ವಸ್ತುಗಳನ್ನು ಇರಾನ್ ಗೆ ಸಾಗಿಸುತ್ತಿದ್ದ ಚೀನಾದ ಹಡಗನ್ನು ಗಲ್ಫ್‌ನಲ್ಲಿ ಅಮೆರಿಕ ವಶಪಡಿಸಿಕೊಂಡಿದೆ ಎಂಬ ವರದಿಗಳನ್ನು ಬೀಜಿಂಗ್ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಆ ಹಡಗಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಚೀನಾ ಮಂಗಳವಾರ ಸ್ಪಷ್ಟಪಡಿಸಿದೆ.

"ನನ್ನ ಪ್ರಕಾರ, ಇದು ವಿದೇಶಿ ಧ್ವಜ ಹೊಂದಿರುವ ಕಂಟೇನರ್ ಹಡಗು. ಅದಕ್ಕೆ ಯಾವುದೇ ದುರುದ್ದೇಶಪೂರಿತ ಸಂಬಂಧ ಕಲ್ಪಿಸುವುದನ್ನು ಮತ್ತು ಅಪ್ರಚಾರವನ್ನು ಚೀನಾ ವಿರೋಧಿಸುತ್ತದೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಈ ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್‌ಗೆ ಹೋಗುತ್ತಿತ್ತು ಮತ್ತು ಕ್ಷಿಪಣಿಗಳಿಗಾಗಿ ರಾಸಾಯನಿಕ ಸಾಗಣೆ ಮಾಡಲಾಗುತ್ತಿತ್ತು. ನಿಲ್ಲಿಸುವಂತೆ ನೀಡಿದ ಆದೇಶವನ್ನು ಆ ಹಡಗು ಪದೇ ಪದೇ ನಿರಾಕರಿಸಿತು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಸದಸ್ಯೆ ನಿಕ್ಕಿ ಹ್ಯಾಲಿ ಹೇಳಿದ್ದಾರೆ.

ನಿಕ್ಕಿ ಹ್ಯಾಲೆ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಗುವೊ, ಆ ಹಡಗಿಗೂ, ಚೀನಾಗೂ ಯಾವುದೇ ಇಲ್ಲ ಎಂದು ಹೇಳಿದ್ದಾರೆ.

ಚೀನಾ ಯಾವಾಗಲೂ ಮಿಲಿಟರಿ ಉತ್ಪನ್ನಗಳ ರಫ್ತಿನ ಮೇಲೆ ವಿವೇಕಯುತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತದೆ. ರಫ್ತು ನಿಯಂತ್ರಣ ಮತ್ತು ಸರಿಯಾದ ಅಂತರರಾಷ್ಟ್ರೀಯ ಬಾಧ್ಯತೆಗಳ ಮೇಲಿನ ಚೀನಾದ ಕಾನೂನುಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ಕಟ್ಟುನಿಟ್ಟಿನ ನಿಯಂತ್ರಣವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ಚೀನಾಗೆ ಭಾರೀ ಸುಂಕ ವಿಧಿಸುವ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಆರೋಪಗಳ ಆಧಾರದ ಮೇಲೆ ಅಮೆರಿಕ ಚೀನಾದ ಮೇಲೆ ಸುಂಕ ಹೆಚ್ಚಳಕ್ಕೆ ಮುಂದಾದರೆ, ಚೀನಾ ಸಹ ಪ್ರತಿಕ್ರಮಗಳೊಂದಿಗೆ ಪ್ರತಿಕ್ರಿಯಿಸುತ್ತದೆ" ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಕ್ಷ ಇಬ್ಭಾಗದ ಭೀತಿಯ ನಡುವೆ INDI ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸಲಿರುವ ಮಮತಾ ಬ್ಯಾನರ್ಜಿ

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

India vs Afghanistan: 564 ರನ್ ಗೆ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್, 2ನೇ ದಿನದಾಟದಂತ್ಯಕ್ಕೆ ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!

ರಾಜತಾಂತ್ರಿಕ ಮಾತುಕತೆಯ ಮೂಲಕವೇ ಗಡಿ ವಿವಾದ ಬಗೆಹರಿಸಿಕೊಳ್ಳುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಭಾರತದ ಅಡುಗೆ ಅನಿಲ ಬೆಲೆ ಇನ್ನೂ ವಿಶ್ವದಲ್ಲೇ ಅಗ್ಗವಾಗಿದೆ: LPG ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

SCROLL FOR NEXT