ಯುಎಸ್ ಸೈನಿಕರೊಬ್ಬರು ಇರಾನ್ ಬಳಿಯ ಜಲಮಾರ್ಗದಲ್ಲಿರುವ ಹಡಗಿನ ಕಡೆ ಮೆಷಿನ್ ಗನ್ ಅನ್ನು ತೋರಿಸುತ್ತಿರುವುದು. 
ವಿದೇಶ

'ನೀವು ಮಿಲಿಟರಿ ದಿಗ್ಬಂಧನವನ್ನು ಪ್ರವೇಶಿಸುತ್ತಿದ್ದೀರಿ': ಮೆಷಿನ್‌ಗನ್‌ ತೋರಿಸಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಬೆದರಿಕೆ!

ಸೆಂಟ್‌ಕಾಮ್ ವಿಡಿಯೋದಲ್ಲಿ, US ಸೈನಿಕರೊಬ್ಬರು ಹಡಗಿನತ್ತ ಭಾರಿ-ಕ್ಯಾಲಿಬರ್ ಮೆಷಿನ್‌ಗನ್ ತೋರಿಸುತ್ತಾ ರೇಡಿಯೋದಲ್ಲಿ ಎಚ್ಚರಿಕೆ ನೀಡುತ್ತಿರುವುದನ್ನು ಕಾಣಬಹುದು.

ಇರಾನ್‌ನೊಂದಿಗಿನ ಯುದ್ಧದ ನಡುವೆ ಅಮೆರಿಕದ ಪಡೆಗಳು ಹೇಗೆ ಇರಾನ್‌ನ ಬಂದರುಗಳಲ್ಲಿ ದಿಗ್ಬಂಧನವನ್ನು ಜಾರಿಗೊಳಿಸುತ್ತಿವೆ ಎಂಬುದರ ಪ್ರದರ್ಶನವಾಗಿ, ಅಮೆರಿಕದ ಸೆಂಟ್ರಲ್ ಕಮಾಂಡ್ ಅಥವಾ ಸೆಂಟ್‌ಕಾಮ್, ಹೆಲಿಕಾಪ್ಟರ್‌ನಲ್ಲಿ ಮೆಷಿನ್-ಗನ್‌ ಹಿಡಿದು ಎಚ್ಚರಿಕೆ ನೀಡುವುದನ್ನು ತೋರಿಸುವ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭಗೊಂಡಿದ್ದು, ಇದಕ್ಕೆ ಪ್ರತಿಕಾರವಾಗಿ ಇರಾನ್ ಜಾಗತಿಕ ತೈಲ ವ್ಯಾಪಾರದ ಪ್ರಭಾವ ಬೀರುವ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ.

ಸೆಂಟ್‌ಕಾಮ್ ವಿಡಿಯೋದಲ್ಲಿ, US ಸೈನಿಕರೊಬ್ಬರು ಹಡಗಿನತ್ತ ಭಾರಿ-ಕ್ಯಾಲಿಬರ್ ಮೆಷಿನ್‌ಗನ್ ತೋರಿಸುತ್ತಾ ರೇಡಿಯೋದಲ್ಲಿ ಎಚ್ಚರಿಕೆ ನೀಡುತ್ತಿರುವುದನ್ನು ಕಾಣಬಹುದು.

'ಇದು ಯುನೈಟೆಡ್ ಸ್ಟೇಟ್ಸ್ ಯುದ್ಧನೌಕೆ 115. ನೀವು ಮಿಲಿಟರಿ ದಿಗ್ಬಂಧನದ ಪ್ರದೇಶವನ್ನು ಪ್ರವೇಶಿಸುತ್ತಿದ್ದೀರಿ. ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಜಾರಿಗೊಳಿಸಲಾಗಿದೆ ಮತ್ತು ಅದನ್ನು ಲೆಕ್ಕಿಸದಿರುವ ಎಲ್ಲ ಹಡಗುಗಳಿಗೆ ಇದು ಅನ್ವಯಿಸುತ್ತದೆ' ಎಂದು ರೇಡಿಯೊದಲ್ಲಿ ಎಚ್ಚರಿಕೆ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇರಾನಿನ ಬಂದರಿಗೆ ಹೋಗಲು ಅಥವಾ ದಾಟಲು ಯೋಜಿಸುವ ಯಾವುದೇ ಹಡಗನ್ನು ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಿಲ್ಲಿಸಬಹುದು ಮತ್ತು ಪರಿಶೀಲಿಸಬಹುದು. ಯಾವುದೇ ಹಡಗು ದಿಗ್ಬಂಧನವನ್ನು ತಪ್ಪಿಸಲು ಅಥವಾ ಮುರಿಯಲು ಪ್ರಯತ್ನಿಸಿದರೆ, ಅದರ ವಿರುದ್ಧ ಪ್ರಾಧಿಕಾರವು ತನ್ನ ಬಲವನ್ನು ಬಳಸುತ್ತದೆ. 'ಓವರ್' ಎಂದು ರೇಡಿಯೋ ಸಂದೇಶ ನೀಡಲಾಗಿದೆ.

'ದಿಗ್ಬಂಧನ ಪ್ರಾರಂಭವಾದಾಗಿನಿಂದ, US ಪಡೆಗಳು ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳಿಗೆ ಪ್ರವೇಶಿಸುವ ಅಥವಾ ನಿರ್ಗಮಿಸುವ 27 ಹಡಗುಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಅಲ್ಲಿಂದ ಹಿಂತಿರುಗಳು ಅಥವಾ ಇರಾನಿನ ಬಂದರಿಗೆ ತೆರಳದಂತೆ ನಿರ್ದೇಶಿಸಿವೆ' ಎಂದು CENTCOM ಹೇಳಿದೆ.

ಇರಾನ್ ಯುಎಸ್ ಜೊತೆಗಿನ ಮಾತುಕತೆಗಳಲ್ಲಿ ಒಂದು ಚೌಕಾಸಿಯ ಸಾಧನವಾಗಿ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಬಳಸುತ್ತಿದೆ. ಈ ಜಲಮಾರ್ಗದ ಮೇಲೆ ಹತೋಟಿ ಸಾಧಿಸುವುದರಿಂದ ಇಸ್ಲಾಮಿಕ್ ಗಣರಾಜ್ಯಕ್ಕೆ ಯಾವುದೇ ಅಪಾಯವಿಲ್ಲ.

ಜಾಗತಿಕವಾಗಿ ಆರ್ಥಿಕ ಸಂಕಷ್ಟ ತಂದೊಡ್ಡುವುದು ಇರಾನ್‌ಗೆ ಸಮಾಲೋಚನೆಯ ಮೇಲೆ ಹತೋಟಿಯನ್ನು ನೀಡುತ್ತದೆ. ಯುಎಸ್ ದಿಗ್ಬಂಧನವು ಪ್ರತಿದಿನ ಹತ್ತಾರು ಮಿಲಿಯನ್ ಡಾಲರ್‌ಗಳ ಮೌಲ್ಯದ ತೈಲ ರಫ್ತುಗಳನ್ನು ಸ್ಥಗಿತಗೊಳಿಸೆಯಾದರೂ, ಸಂಪೂರ್ಣವಾಗಿ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಎರಡು ವಾರಗಳ ಕದನ ವಿರಾಮ ಈ ವಾರ ಕೊನೆಗೊಳ್ಳಲಿದೆ. ಹಾರ್ಮುಜ್ ಜಲಸಂಧಿಯ ಸುತ್ತ ಮತ್ತೆ ಉದ್ವಿಗ್ನತೆ ಹೆಚ್ಚಾದರೆ, ಅದು ಹೆಚ್ಚು ಅಸ್ಥಿರತೆಯನ್ನು ಉಂಟುಮಾಡುತ್ತದೆ.

'ಜಲಸಂಧಿಯು ಇಸ್ಲಾಮಿಕ್ ಗಣರಾಜ್ಯದ ನಿಯಂತ್ರಣದಲ್ಲಿದೆ' ಎಂದು ಈಗ ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿರುವ ರೆವಲ್ಯೂಷನರಿ ಗಾರ್ಡ್ಸ್‌ನ ಅನುಭವಿ ಮೊಹಮ್ಮದ್ ಬಾಘರ್ ಗಲಿಬಾಫ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನ:ಶಾಂತಿ ಸಿಗುತ್ತದೆ:ಡಿ ಕೆ ಶಿವಕುಮಾರ್ ರೋಡ್‌ಶೋ; ಬೆಂಬಲಿಗರ ಸಂಭ್ರಮ-Video

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ ‘ಜಲಯೋಧ’ನ ಪ್ರೇರಣಾದಾಯಕ ಯಶೋಗಾಥೆ..!

ಪ್ಲಾಸ್ಟಿಕ್ ಬಾಟಲಿ ನಿಷೇಧ ಆದೇಶ ಉಲ್ಲಂಘನೆ: ಸರ್ಕಾರಿ ಕಚೇರಿಗಳಿಗೆ KSPCB ಕಠಿಣ ಎಚ್ಚರಿಕೆ, ನೋಟಿಸ್ ಜಾರಿ..!

SCROLL FOR NEXT