ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ 'ಬೇಗ ಬುದ್ಧಿ ಕಲಿಯಲಿ', ಇಲ್ಲಾಂದ್ರೆ ವಿನಾಶ: ಕೈಯಲ್ಲಿ ಅಸಾಲ್ಟ್ ರೈಫಲ್ ಹಿಡಿದು ಬೆದರಿಕೆ ಹಾಕಿದ ಟ್ರಂಪ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿದೆ. ಹಾರ್ಮುಜ್ ಮೇಲಿನ ದಿಗ್ಬಂಧನದ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿದೆ. ಹಾರ್ಮುಜ್ ಮೇಲಿನ ದಿಗ್ಬಂಧನದ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ತನ್ನ ಪರಮಾಣು ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ರಾಜತಾಂತ್ರಿಕ ಪರಿಹಾರ ಸಿಗದಿದ್ದರೆ, ಯುಎಸ್ ಇನ್ನೂ ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಎಂದು ಟ್ರಂಪ್ ಟೆಹ್ರಾನ್‌ಗೆ ಎಚ್ಚರಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಯಾದ "ಟ್ರುತ್" ನಲ್ಲಿ ತನ್ನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಟ್ರಂಪ್ ಟೆಹ್ರಾನ್‌ಗೆ ಬೆದರಿಕೆ ಹಾಕಿದ್ದಾರೆ. ಇನ್ನು ಮಿಸ್ಟರ್ ನೈಸ್ ಗೈ ಇಲ್ಲ" ಎಂದು ಬರೆದುಕೊಂಡಿದ್ದಾರೆ. ಇರಾನ್‌ನೊಂದಿಗಿನ ಮಾತುಕತೆಗಳ ನಿಧಾನಗತಿಯ ಬಗ್ಗೆ ಟ್ರಂಪ್ ನಿರಾಶೆ ವ್ಯಕ್ತಪಡಿಸಿದರು. ಅಲ್ಲದೆ ಇರಾನ್ ಗೆ ತನ್ನ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇರಾನ್ ನಾಯಕತ್ವವನ್ನು ಮತ್ತಷ್ಟು ಟೀಕಿಸಿದ ಟ್ರಂಪ್, ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕುವುದು ಹೇಗೆ ಎಂದು ತಿಳಿದಿಲ್ಲ ಎಂದು ಹೇಳಿದರು.

ಅಮೆರಿಕ ನಿಶ್ಯಸ್ತ್ರೀಕರಣ ಒಪ್ಪಂದದ ಕುರಿತು ಹೇಗೆ ಮಾತುಕತೆ ನಡೆಸಬೇಕೆಂದು ಅವರಿಗೆ ತಿಳಿದಿಲ್ಲ. ಅವರು ಶೀಘ್ರದಲ್ಲೇ ಅರ್ಥಮಾಡಿಕೊಳ್ಳುವುದು ಉತ್ತಮ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು ಬಂದಿವೆ. ಟ್ರಂಪ್ ಅವರ ಇತ್ತೀಚಿನ ಪೋಸ್ಟ್, ವಾಷಿಂಗ್ಟನ್‌ನ ಪ್ರಸ್ತಾವಿತ ಷರತ್ತುಗಳನ್ನು ಟೆಹ್ರಾನ್ ತಿರಸ್ಕರಿಸಿದರೆ ಅಮೆರಿಕವು ಹೆಚ್ಚು ಆಕ್ರಮಣಕಾರಿ ನಿಲುವನ್ನು ತಾಳುತ್ತದೆ ಎಂದು ಸೂಚಿಸುತ್ತದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಆದರೆ ಎರಡನೇ ಸುತ್ತಿನ ಮಾತುಕತೆಯ ಬಗ್ಗೆ ಅನಿಶ್ಚಿತತೆ ಉಳಿದಿದೆ. ಇತ್ತೀಚೆಗೆ, ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿದಾಗ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯಬಹುದೆಂಬ ಊಹಾಪೋಹಗಳಿದ್ದವು. ಆದಾಗ್ಯೂ, ಅರಘ್ಚಿ ಹೋದ ನಂತರ, ಟ್ರಂಪ್ ತಮ್ಮ ನಿಯೋಗದ ಪಾಕಿಸ್ತಾನ ಭೇಟಿಯನ್ನು ರದ್ದುಗೊಳಿಸಿದರು.

https://truthsocial.com/@realDonaldTrump/posts/116486959174837748

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TMC ಅಂತರ್ಯುದ್ಧ: ಸಂಸದೆ ಸತಾಬ್ದಿ ರಾಯ್ ಜೊತೆ ಸೇರಿ ಬಿಜೆಪಿ ನಾಯಕರನ್ನು ಭೇಟಿಯಾದ 20ನೇ ಬಂಡಾಯ ಸಂಸದ ಸುದೀಪ್!

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್, ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

1st ODI: ಆಫ್ಘನ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಕೊಹ್ಲಿ, ಧವನ್ ರೆಕಾರ್ಡ್ ಪತನ, ಈ ದಾಖಲೆ ಮಾಡಿದ ಮೊದಲ ಆಟಗಾರ Shubman Gill

ಕೊನೆಗೂ 131 ದಿನಗಳ ಬಳಿಕ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ನಿಗದಿ, ಯಾವಾಗ?

24 ಗಂಟೆಯಲ್ಲೇ ಅಮೆರಿಕ ಜೊತೆ ಇರಾನ್ ಶಾಂತಿ ಒಪ್ಪಂದ ಹೇಳಿಕೆ: Pak ಪಿಎಂ ಶಹಬಾಜ್ ವಿರುದ್ಧ Iran ಕೆಂಡ!

SCROLL FOR NEXT