ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ 
ವಿದೇಶ

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಮೊಜ್ತಬಾ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಸದ್ಯ ತುಂಬಾ ಕಷ್ಟ. ಆದರೂ ಅವರ ಉಪಸ್ಥಿತಿಯೇ ನಮಗೆ ಧೈರ್ಯ ಮತ್ತು ಶಕ್ತಿ ನೀಡುತ್ತಿದೆ" ಎಂದು ಹೇಳುವ ಮೂಲಕ ಖಮೇನಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೆಹ್ರಾನ್: ಅಮೆರಿಕ–ಇಸ್ರೇಲ್ ದಾಳಿಯ ಬಳಿಕ ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಲ್ಲ. ಅವರು ರಹಸ್ಯ ತಾಣದಲ್ಲಿರುವ ಹಿನ್ನೆಲೆಯಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಈ ನಡುವೆಯೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಮೊಜ್ತಬಾ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಸದ್ಯ ತುಂಬಾ ಕಷ್ಟ. ಆದರೂ ಅವರ ಉಪಸ್ಥಿತಿಯೇ ನಮಗೆ ಧೈರ್ಯ ಮತ್ತು ಶಕ್ತಿ ನೀಡುತ್ತಿದೆ" ಎಂದು ಹೇಳುವ ಮೂಲಕ ಖಮೇನಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕ್ಷಣದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ಕಷ್ಟ. ಆದರೂ, ಅವರ ಉಪಸ್ಥಿತಿಯೇ ನಮಗೆ ಅಪಾರ ಧೈರ್ಯ ನೀಡುತ್ತದೆ. ಅದೇ ನಮ್ಮ ಹೋರಾಟವನ್ನು ಮುಂದುವರಿಸಲು ಶಕ್ತಿ ನೀಡುತ್ತಿದೆ," ಎಂದು ಹೇಳಿದರು.

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮಾಜಿ ಪರಮೋಚ್ಚ ನಾಯಕ ಮೃತಪಟ್ಟಿದ್ದು, ಅದೇ ದಾಳಿಯಲ್ಲಿ ಗಾಯಗೊಂಡಿದ್ದ ಮೊಜ್ತಬಾ ಖಾಮೆನೇಯಿ ಬಳಿಕ ದೇಶದ ಪರಮೋಚ್ಚ ನಾಯಕರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಅಧಿಕಾರ ಸ್ವೀಕರಿಸಿದ ನಂತರ ಅವರು ಸಾರ್ವಜನಿಕ ಸಭೆಯಲ್ಲಾಗಲಿ ಅಥವಾ ದೂರದರ್ಶನದಲ್ಲಾಗಲಿ ಕಾಣಿಸಿಕೊಂಡಿಲ್ಲ. ಶತ್ರು ರಾಷ್ಟ್ರಗಳು ಸಿಗ್ನಲ್ ಟ್ರ್ಯಾಕ್ ಮಾಡಬಹುದು ಎಂಬ ಭೀತಿಯಿಂದ ಅವರ ಧ್ವನಿ ಮುದ್ರಣ (Audio) ಬಿಡುಗಡೆಗೂ ಅಧಿಕಾರಿಗಳು ಕಠಿಣ ನಿರ್ಬಂಧ ಹೇರಿದ್ದಾರೆ.

ಇದರಿಂದಾಗಿ ದೇಶದ ಉನ್ನತ ಅಧಿಕಾರಿಗಳೊಂದಿಗೆ ಅವರ ಸಂಬಂಧ ಹಾಗೂ ಆಡಳಿತದಲ್ಲಿ ಅವರ ಪಾತ್ರದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ವಿಶೇಷವಾಗಿ, ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ಅವರು ಭಾಗವಹಿಸದಿರುವುದು ಈ ಅನುಮಾನಗಳಿಗೆ ಮತ್ತಷ್ಟು ಹೆಚ್ಚಿಸಿದೆ.

ಆದರೆ, ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ ಪೆಜೆಶ್ಕಿಯನ್, ಖಮೇನಿ ಅವರೊಂದಿಗೆ ಹಲವು ಬಾರಿ ಫಲಪ್ರದ ಸಭೆಗಳನ್ನು ನಡೆಸಿರುವುದಾಗಿ ಹೇಳಿದರು.

ಅವರು ನನ್ನೊಂದಿಗೆ ಸದಾ ಆತ್ಮೀಯವಾಗಿ ವರ್ತಿಸಿದ್ದಾರೆ. ಅವರ ಚಿಂತನೆ ಮತ್ತು ತಾರ್ಕಿಕತೆ ಅತ್ಯಂತ ಸ್ಪಷ್ಟ ಹಾಗೂ ದೃಢವಾಗಿದೆ. ದುರದೃಷ್ಟವಶಾತ್, ಇಂದಿನ ಪರಿಸ್ಥಿತಿಯನ್ನು ಬಳಸಿಕೊಂಡು ಕೆಲವರು ಅವರ ಬಗ್ಗೆ ತಪ್ಪು ಚಿತ್ರಣ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಇರಾನ್‌ನ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಯುದ್ಧದ ವಾತಾವರಣದ ನಡುವೆಯೂ ದೇಶದ ನಾಯಕತ್ವ ದೃಢವಾಗಿದ್ದು, ಪರಮೋಚ್ಚ ನಾಯಕರ ಮಾರ್ಗದರ್ಶನ ಮುಂದುವರಿದಿದೆ ಎಂಬ ಸಂದೇಶವನ್ನು ಅಧ್ಯಕ್ಷರು ಈ ಮೂಲಕ ನೀಡಲು ಯತ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

E20 ಪೆಟ್ರೋಲ್ ನಲ್ಲಿ ಹೆಚ್ಚು ಕ್ಲೋರೈಡ್ ಮಟ್ಟ ತೋರಿಸಿದ್ದ SIAM; ಸಚಿವಾಲಯಕ್ಕೆ ಕಳುಹಿಸಿದ್ದ ಪತ್ರ ವಾಪಸ್