ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ ‘ಅನಾಮಿಕ ಗನ್‌ಮ್ಯಾನ್‌’ 
ವಿದೇಶ

ಪಾಕ್ ನಲ್ಲಿ ಮತ್ತೆ 'ಧುರಂದರ್' ಸ್ಟೈಲ್ ಕಿಲ್ಲಿಂಗ್? ಜೈಶ್ ಉಗ್ರ Lakhvi ಸಂಬಂಧಿ ತಲೆಗೆ ಗುಂಡಿಕ್ಕಿದ ‘ಅನಾಮಿಕ ಗನ್‌ಮ್ಯಾನ್‌’! Video

ಮೃತನನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ನೇಮಕಾತಿದಾರ ಹಾಗೂ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಜಕೀ-ಉರ್‌-ರೆಹ್ಮಾನ್‌ ಲಖ್ವಿ ಸಂಬಂಧಿ ಹಫೀಜ್‌ ಜುಲ್ಫಿಕಾರ್‌ ಎಂದು ಹಲವು ಸಾಮಾಜಿಕ..

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 'ಧುರಂದರ್' ಸ್ಟೈಲ್ ಕಿಲ್ಲಿಂಗ್ ಮುಂದುವರೆದಿದ್ದು, ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮತ್ತೋರ್ವ ಉಗ್ರನನ್ನು ‘ಅನಾಮಿಕ ಗನ್‌ಮ್ಯಾನ್‌’ ಗುಂಡಿಕ್ಕಿ ಕೊಂದು ಹಾಕಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನನ್ನು ಅಪರಿಚಿತ ಬಂದೂಕುಧಾರಿ ಗುಂಡಿಕ್ಕಿ ಹತ್ಯೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಮೃತನನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ನೇಮಕಾತಿದಾರ ಹಾಗೂ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಜಕೀ-ಉರ್‌-ರೆಹ್ಮಾನ್‌ ಲಖ್ವಿ ಸಂಬಂಧಿ ಹಫೀಜ್‌ ಜುಲ್ಫಿಕಾರ್‌ ಎಂದು ಹಲವು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಹೇಳಿಕೊಂಡಿವೆ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಫೀಜ್‌ ಜುಲ್ಫಿಕಾರ್‌ ನನ್ನು ಹಿಂಬಾಲಿಸಿದ ಅನಾಮಿಕ ವ್ಯಕ್ತಿ ನೋಡ ನೋಡುತ್ತಲೇ ಗನ್ ತೆಗೆದು ಆತನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿದ್ದಾನೆ.

ಗುಂಡಿನ ದಾಳಿಯ ಬಳಿಕ ವ್ಯಕ್ತಿ ಸ್ಥಳದಲ್ಲೇ ಕುಸಿದು ಬೀಳುತ್ತಾನೆ. ದಾಳಿ ನಡೆಸಿದ ವ್ಯಕ್ತಿ ಅಲ್ಲಿಂದ ವೇಗವಾಗಿ ಪರಾರಿಯಾಗುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ವ್ಯಾಪಕ ವೈರಲ್ ಆಗುತ್ತಿದೆ.

ಧುರಂದರ್ ಸ್ಟೈಲ್ ಕಿಲ್ಲಿಂಗ್

ಕೆಲವರು ಈ ಘಟನೆಯನ್ನು ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಮೇಲಿನ ಮತ್ತೊಂದು ‘ಅನಾಮಿಕ ಗನ್‌ಮ್ಯಾನ್‌’ ದಾಳಿ ಅಥವಾ ಧುರಂದರ್ ಸ್ಟೈಲ್ ಹತ್ಯೆ ಎಂದು ಬಣ್ಣಿಸಿದ್ದಾರೆ.

ಪಾಕಿಸ್ತಾನದಲ್ಲಿ ಈ ಹಿಂದೆಯೂ ಕೂಡ ಇಂತಹ ಹಲವು ಹತ್ಯೆಗಳು ನಡೆದಿತ್ತು. ಹಲವು ಉಗ್ರ ಸಂಘಟನೆಗಳ ಕಮಾಂಡರ್ ಗಳು ಇದೇ ರೀತಿಯ ಅನಾಮಿಕ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗಿದ್ದರು.

ಮಾಜಿ ಸೇನಾಧಿಕಾರಿ ವಿಡಿಯೋ ಹಂಚಿಕೆ

ಮಾಜಿ ಲೆಫ್ಟಿನೆಂಟ್‌ ಜನರಲ್‌ ಡಿ.ಪಿ. ಪಾಂಡೆ ಕೂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “No place to hide, Dead is best” ಎಂದು ಬರೆದಿದ್ದಾರೆ. ಅವರ ಈ ಪೋಸ್ಟ್‌ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವರೆಂದು ಆರೋಪಿಸಲಾದ ವ್ಯಕ್ತಿಗಳನ್ನು ಉಲ್ಲೇಖಿಸಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಯಾರು ಜುಲ್ಫಿಕರ್?

ಇದೇ ವೇಳೆ, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಮೃತ ವ್ಯಕ್ತಿ ಹಫೀಜ್‌ ಜುಲ್ಫಿಕಾರ್‌ ಎಂದು ಹೇಳಿಕೊಂಡಿದ್ದಾರೆ. ಆತ ಜೈಶ್‌-ಎ-ಮೊಹಮ್ಮದ್‌ನ ನೇಮಕಾತಿದಾರ ಹಾಗೂ 26/11 ಮುಂಬೈ ದಾಳಿ ಸಂಚಿನ ಪ್ರಮುಖ ಆರೋಪಿ ಜಕೀ-ಉರ್‌-ರೆಹ್ಮಾನ್‌ ಲಖ್ವಿಯ ಸಂಬಂಧಿ ಎಂದು ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈ ದಾಳಿ ರೂವಾರಿ ಜಕೀ-ಉರ್‌-ರೆಹ್ಮಾನ್‌ ಲಖ್ವಿ

ಜಕೀ-ಉರ್‌-ರೆಹ್ಮಾನ್‌ ಲಖ್ವಿ ಪಾಕಿಸ್ತಾನ ಮೂಲದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಹೆಸರುಗಳಲ್ಲಿ ಒಬ್ಬ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ದಾಖಲೆಗಳ ಪ್ರಕಾರ, ಆತ ಸಂಘಟನೆಯ ಕಾರ್ಯಾಚರಣಾ ಮುಖ್ಯಸ್ಥ ಹಾಗೂ ಮಿಲಿಟರಿ ಕಮಾಂಡರ್‌ ಆಗಿ ಕಾರ್ಯನಿರ್ವಹಿಸಿದ್ದ ಮತ್ತು ಹಲವು ಭಯೋತ್ಪಾದಕ ಚಟುವಟಿಕೆಗಳ ನಿರ್ದೇಶನದಲ್ಲಿ ಭಾಗಿಯಾಗಿದ್ದ ಎಂದು ಉಲ್ಲೇಖಿಸಲಾಗಿದೆ.

2008ರ ನವೆಂಬರ್‌ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂಚು ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಪೈಕಿ ಲಖ್ವಿಯೂ ಒಬ್ಬನಾಗಿದ್ದಾನೆ. 10 ಉಗ್ರರು ಸಮುದ್ರ ಮಾರ್ಗವಾಗಿ ಮುಂಬೈಗೆ ಆಗಮಿಸಿ ನಗರದ ವಿವಿಧೆಡೆ ಸಂಘಟಿತ ದಾಳಿ ನಡೆಸಿದ್ದರು. ಮೂರು ದಿನಗಳ ಕಾಲ ನಡೆದ ಈ ಭೀಕರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ವೈರಲ್ ವಿಡಿಯೋ ಬಗ್ಗೆ ಪರಿಶೀಲನ ಅಗತ್ಯ ಎಂದ ಅಧಿಕಾರಿಗಳು

ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿನ ವ್ಯಕ್ತಿ ನಿಜವಾಗಿಯೂ ಹಫೀಜ್‌ ಜುಲ್ಫಿಕಾರ್‌ನೇ ಅಥವಾ ಈ ಘಟನೆ ಜೈಶ್‌-ಎ-ಮೊಹಮ್ಮದ್‌ ಸಂಪರ್ಕಕ್ಕೆ ಸಂಬಂಧಿಸಿದ್ದೇ ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗಳನ್ನು ಖಚಿತ ಸುದ್ದಿಯಾಗಿ ಪರಿಗಣಿಸುವ ಮುನ್ನ ಹೆಚ್ಚಿನ ಅಧಿಕೃತ ಮಾಹಿತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ!

Toxic Box Office Collection: ಕುಸಿತದ ನಡುವೆ 5ನೇ ದಿನ 200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’

ತಾಯಿ ಸ್ಮರಣಾರ್ಥ ಸುದೀಪ್ ಮಹತ್ವದ ಕಾರ್ಯ: ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಆಟೋ ನೀಡಿದ ಕಿಚ್ಚ!