ಮೃತದೇಹ ಸಾಗಿಸುತ್ತಿರುವ ಪ್ಯಾಲೆಸ್ಟೀನಿಯರು 
ವಿದೇಶ

ಗಾಜಾ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ: ಮಕ್ಕಳು ಸೇರಿದಂತೆ 32 ಪ್ಯಾಲೆಸ್ಟೀನಿಯರು ಸಾವು

ಇಸ್ರೇಲ್ ಮತ್ತು ಹಮಾಸ್ ಎರಡೂ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಪರಸ್ಪರ ಆರೋಪಿಸಿಕೊಂಡಿವೆ.

ಗಾಜಾ: ಇಸ್ರೇಲ್ ಸೇನೆ ಶನಿವಾರ ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಅಮೆರಿಕ ಮಧ್ಯಸ್ಥಿಕೆಯ ಕದನ ವಿರಾಮ ಎರಡನೇ ಹಂತಕ್ಕೆ ಪ್ರವೇಶಿಸಿದ್ದರೂ, ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಇಸ್ರೇಲ್ ದಾಳಿ ಮುಂದುವರೆಸಿದೆ. ಇಸ್ರೇಲ್ ಮತ್ತು ಹಮಾಸ್ ಎರಡೂ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಪರಸ್ಪರ ಆರೋಪಿಸಿಕೊಂಡಿವೆ.

"ಜನರ ಸೀಮಿತ ಸಂಚಾರಕ್ಕಾಗಿ" ಗಾಜಾ ಮತ್ತು ಈಜಿಪ್ಟ್ ನಡುವಿನ ನಿರ್ಣಾಯಕ ರಫಾ ಕ್ರಾಸಿಂಗ್ ಅನ್ನು ಭಾನುವಾರ ಮತ್ತೆ ಓಪನ್ ಮಾಡುವುದಾಗಿ ಇಸ್ರೇಲ್ ಘೋಷಿಸಿದ ನಂತರ ಮತ್ತೆ ರಕ್ತಪಾತ ನಡೆದಿದೆ.

"ಇಂದು ಬೆಳಗಿನ ಜಾವ ಸಾವಿನ ಸಂಖ್ಯೆ 32 ಕ್ಕೆ ಏರಿದೆ, ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ" ಎಂದು ಹಮಾಸ್ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಯಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

"ವಸತಿ ಅಪಾರ್ಟ್‌ಮೆಂಟ್‌ಗಳು, ಡೇರೆಗಳು, ಶೆಲ್ಟರ್ ಗಳು ಮತ್ತು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡರು" ದಾಳಿ ನಡೆಸಲಾಗಿದೆ ಎಂದು ಏಜೆನ್ಸಿ ವಕ್ತಾರ ಮಹ್ಮದ್ ಬಸ್ಸಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ನೀವು ಯಾವ ಕದನ ವಿರಾಮದ ಬಗ್ಗೆ ಮಾತನಾಡುತ್ತಿದ್ದೀರಿ? ಎಲ್ಲರೂ ಎಲ್ಲರನ್ನೂ ಮೋಸ ಮಾಡುತ್ತಿದ್ದಾರೆ" ಎಂದು ಮೃತರ ಸಂಬಂಧ ನೇಲ್ ಅಲ್-ಅತ್ಬಾಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಚ್ಚು: ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್‌; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ!

'ನೀ ನನಗೆ ಇಷ್ಟ ಇಲ್ಲ': ಮದುವೆಯಾದ ಮೊದಲ ದಿನವೇ ಪತ್ನಿಗೆ ಶಾಕ್​​ ಕೊಟ್ಟ ಪತಿ; ಪ್ರಭಾವಿ ಸಚಿವರ PAಯಿಂದಲೇ ದೋಖಾ?

'ಮಲ್ಲಿಕಾರ್ಜುನ ಖರ್ಗೆಯಿಂದ ಸದಾ ಒತ್ತಡಕ್ಕೆ ಒಳಗಾಗಿರುತ್ತೇನೆ': ರಾಜ್ಯಸಭೆ ಸಭಾಪತಿ ಸಿಪಿ ರಾಧಾಕೃಷ್ಣನ್

ನೀಟ್ ರದ್ದುಗೊಳಿಸುವಂತೆ ಆಗ್ರಹಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಜಾರ್ಖಂಡ್‌ ಪರೀಕ್ಷೆ ವಿವಾದ: 18ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: BJPಯಿಂದ ರಾಜ್ಯವ್ಯಾಪಿ ಬಂದ್, ABVP ಕಾರ್ಯಕರ್ತರು ವಶಕ್ಕೆ..!