ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ  
ವಿದೇಶ

ರಷ್ಯಾ ತೈಲ ಖರೀದಿಯನ್ನು ಭಾರತ ನಿಲ್ಲಿಸಲಿದೆ, ಅಮೆರಿಕದಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ: ಶ್ವೇತ ಭವನ

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಹೇಳಿಕೆ ನೀಡಿದ್ದು, ಅಧ್ಯಕ್ಷರು ಭಾರತದೊಂದಿಗೆ ಮತ್ತೊಂದು ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡರು. ಅವರು ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದು, ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದರು.

ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದವನ್ನು ಅಮೆರಿಕ ಶಕ್ತಿಕೇಂದ್ರ ಶ್ವೇತಭವನ ಶ್ಲಾಘಿಸಿದ್ದು, ಭಾರತ ದೇಶವು ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸದಿರಲು ಬದ್ಧವಾಗಿದೆ ಎಂದು ಹೇಳಿದೆ, ಪ್ರಧಾನಿ ನರೇಂದ್ರ ಮೋದಿ ಕೂಡ ಅಮೆರಿಕದ ಪ್ರಮುಖ ವಲಯಗಳಲ್ಲಿ 500 ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಗಳಿಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಹೇಳಿಕೆ ನೀಡಿದ್ದು, ಅಧ್ಯಕ್ಷರು ಭಾರತದೊಂದಿಗೆ ಮತ್ತೊಂದು ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡರು. ಅವರು ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದು, ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದರು.

ಭಾರತವು ಇನ್ನು ಮುಂದೆ ರಷ್ಯಾದ ತೈಲವನ್ನು ಖರೀದಿಸದಿರಲು ಮಾತ್ರವಲ್ಲದೆ, ಅಮೆರಿಕದಿಂದ ಮತ್ತು ಸಂಭಾವ್ಯವಾಗಿ ವೆನೆಜುವೆಲಾದಿಂದಲೂ ತೈಲವನ್ನು ಖರೀದಿಸಲು ಬದ್ಧವಾಗಿದೆ. ಇದರಿಂದ ಅಮೆರಿಕಾದ ಜನರಿಗೆ ನೇರ ಪ್ರಯೋಜನ ಸಿಗುತ್ತದೆ ಎಂದರು.

ಸಾರಿಗೆ, ಇಂಧನ ಮತ್ತು ಕೃಷಿ ಕ್ಷೇತ್ರಗಳನ್ನು ಒಳಗೊಂಡಂತೆ ಅಮೆರಿಕದಲ್ಲಿ 500 ಶತಕೋಟಿ ಡಾಲರ್ ಹೂಡಿಕೆಗಳಿಗೆ ಪ್ರಧಾನಿ ಮೋದಿ ಬದ್ಧರಾಗಿದ್ದಾರೆ ಎಂದು ಲೀವಿಟ್ ಹೇಳಿದರು.

ಇದಕ್ಕೂ ಮೊದಲು, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಲೀವಿಟ್, ಸೋಮವಾರ ಇಬ್ಬರು ನಾಯಕರು ಉತ್ತಮ ಮಾತುಕತೆ ನಡೆಸಿದ್ದಾರೆ ನಂತರ ದ್ವಿಪಕ್ಷೀಯ ಒಪ್ಪಂದವನ್ನು ಘೋಷಿಸಲಾಯಿತು ಎಂದು ಹೇಳಿದರು.

ಭಾರತದ ಪ್ರಧಾನಿ ಮೋದಿ ವಿಷಯಕ್ಕೆ ಬಂದರೆ, ಅಧ್ಯಕ್ಷರು ತಮ್ಮ ಸಂಬಂಧವನ್ನು ವಿಶೇಷವಾಗಿ ಆನಂದಿಸುತ್ತಾರೆ, ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

ಉಭಯ ನಾಯಕರು ಉತ್ತಮ ಮಾತುಕತೆ ನಡೆಸಿದರು. ಇದು ಬಹಳ ಉತ್ಪಾದಕವಾಗಿತ್ತು, ಅವರು ಮಾಡಿಕೊಂಡ ಒಪ್ಪಂದದಲ್ಲಿ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಹೆಚ್ಚಿನ ಅಮೇರಿಕನ್ ತೈಲವನ್ನು ಮತ್ತು ಬಹುಶಃ ವೆನೆಜುವೆಲಾದಿಂದ ತೈಲವನ್ನು ಖರೀದಿಸಲು ಒಪ್ಪಿಕೊಂಡಿತು ಎಂದರು.

ಡೊನಾಲ್ಡ್ ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ವೆನೆಜುವೆಲಾದ ತೈಲ ವಾಣಿಜ್ಯ ಮತ್ತು ಮಾರಾಟವನ್ನು ಈಗ ನಿರ್ದೇಶಿಸುತ್ತಿದೆ ಎಂದು ಲೀವಿಟ್ ಹೇಳಿದರು.

ಭಾರತದ ಮೇಲಿನ ಅಮೆರಿಕದ ಸುಂಕವು ಈಗ ಶೇಕಡಾ 18 ರಷ್ಟಿರುತ್ತದೆ, ಭಾರತಕ್ಕೆ ಅಮೆರಿಕದ ರಫ್ತುಗಳು ಶೂನ್ಯ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಲೀವಿಟ್ ಹೇಳಿದರು, ಇದು ಅಮೆರಿಕದ ಕಾರ್ಮಿಕರು, ವ್ಯವಹಾರಗಳು ಮತ್ತು ಗ್ರಾಹಕರಿಗೆ ಒಂದು ದೊಡ್ಡ ಗೆಲುವು" ಎಂದು ಕರೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ರಷ್ಯಾ ಬಿಟ್ಟು ವೆನೆಜುವೆಲಾದಿಂದ ಭಾರತ ತೈಲ ಖರೀದಿಸಲಿದೆ" - ಟ್ರಂಪ್ ಹೇಳಿಕೆ ಬಗ್ಗೆ ರಷ್ಯಾ ಹೇಳಿದ್ದೇನು?

ವಿಬಿ-ಜಿ ರಾಮ್ ಜಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಆಂಥ್ರೊಪಿಕ್‌ನ ಹೊಸ AI ಟೂಲ್ ನಿಂದ ಭಾರತೀಯ ಐಟಿ ಷೇರುಗಳ ಕುಸಿತ

'ಜವಾಬ್ದಾರಿಯಿಂದ ಪ್ರಧಾನಿ ಮೋದಿ ನುಣುಚಿಕೊಂಡರು': ಸಂಸತ್ ಹೊರಗೆ ನರವಾಣೆ ಆತ್ಮಚರಿತ್ರೆ ಪ್ರದರ್ಶಿಸಿದ Rahul Gandhi; Video

ಮಾತು ನಿಲ್ಲಿಸಿದ್ದಕ್ಕೆ ಪ್ರೇಮಿಯನ್ನು ಇರಿದುಕೊಂದ ಮಹಿಳೆ!

SCROLL FOR NEXT