ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳ ನಿಯೋಜಿಸಿದ ರಷ್ಯಾ 
ವಿದೇಶ

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

ತೈಲ ಟ್ಯಾಂಕರ್ ಗಳ ರಕ್ಷಣೆಗೆ ರಷ್ಯಾ ನೇರವಾಗಿ ತನ್ನ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನೇ ನಿಯೋಜಿಸಿ ಅಮೆರಿಕ ವಿರುದ್ದ ತೊಡೆ ತಟ್ಟಿ ನಿಂತಿದೆ.

ಮಾಸ್ಕೋ: ವೆನೆಜುವೆಲಾ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ ಅಮೆರಿಕಕ್ಕೆ ರಷ್ಯಾ ಹೊಸ ಸವಾಲೆಸೆದಿದ್ದು, ತೈಲ ಟ್ಯಾಂಕರ್ ಗಳ ರಕ್ಷಣೆಗೆ ತನ್ನ ಅತ್ಯಾಧುನಿ ಅಣ್ವಸ್ತ್ರ ನೌಕೆಗಳನ್ನು ನಿಯೋಜಿಸಿದೆ.

ಹೌದು.. ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ಅಮೆರಿಕ ಸೇನೆ ವಶಪಡಿಸಿಕೊಂಡ ನಂತರ, ರಷ್ಯಾ ತೈಲ ಟ್ಯಾಂಕರ್ ಗಳಿಗೆ ಅಭೂತಪೂರ್ವ ರಕ್ಷಣಾ ವ್ಯವಸ್ಥೆ ಕಲ್ಪಿಸಿದೆ.

ತೈಲ ಟ್ಯಾಂಕರ್ ಗಳ ರಕ್ಷಣೆಗೆ ರಷ್ಯಾ ನೇರವಾಗಿ ತನ್ನ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನೇ ನಿಯೋಜಿಸಿ ಅಮೆರಿಕ ವಿರುದ್ದ ತೊಡೆ ತಟ್ಟಿ ನಿಂತಿದೆ.

ಉತ್ತರ ಅಟ್ಲಾಂಟಿಕ್‌ನಲ್ಲಿ ಪಾಳುಬಿದ್ದ ತೈಲ ಟ್ಯಾಂಕರ್‌ಗೆ ರಕ್ಷಣೆ ನೀಡಲು ರಷ್ಯಾ ಒಂದು ಜಲಾಂತರ್ಗಾಮಿ ಮತ್ತು ಇತರ ನೌಕಾಪಡೆ ಸ್ವತ್ತುಗಳನ್ನು ನಿಯೋಜಿಸಿದೆ. ಇದು ಮಾಸ್ಕೋ ಮತ್ತು ವಾಷಿಂಗ್ಟನ್ ನಡುವಿನ ಹೊಸ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ತಾಣವಾಗಿ ಪರಿವರ್ತಿಸಿದೆ.

ಅಮೆರಿಕ ಹಡಗುಗಳ ಮುಳುಗಿಸಿ

ಈ ನಡುವೆ ರಷ್ಯಾದ ಹಿರಿಯ ಶಾಸಕರೊಬ್ಬರು ವಾಷಿಂಗ್ಟನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಅಮೆರಿಕದ ಹಡುಗಗಳ ಮೇಲೆ ದಾಳಿ ಮಾಡಿ ಮುಳುಗಿಸಿ ಎಂದು ಕರೆ ನೀಡಿದ್ದಾರೆ.

ರಷ್ಯಾದಲ್ಲಿ ರಕ್ಷಣಾ ಕುರಿತಾದ ರಾಜ್ಯ ಡುಮಾ ಸಮಿತಿಯ ಮೊದಲ ಉಪಾಧ್ಯಕ್ಷ ಮತ್ತು ರಷ್ಯಾದ ಸಂಸತ್ತಿನ ಹಿರಿಯ ಸದಸ್ಯ ಅಲೆಕ್ಸಿ ಜುರಾವ್ಲೆವ್ ಈ ಬಗ್ಗೆ ಮಾತನಾಡಿ, 'ಅಮೆರಿಕ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಒತ್ತಾಯಿಸಬಾರದು. ಅಂತೆಯೇ ಬುಧವಾರ ಟ್ಯಾಂಕರ್ ವಶಪಡಿಸಿಕೊಂಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸುವಂತೆ ಅವರು ಸೂಚಿಸಿದರು.

ಕಡಲ್ಗಳ್ಳತನ

ಜನವರಿ 7 ರಂದು ಅಮೆರಿಕ ಪಡೆಗಳು ಟ್ಯಾಂಕರ್ ಮರಿನೆರಾ - ಹಿಂದೆ ಬೆಲ್ಲಾ 1 - ಅನ್ನು ನಿಷೇಧಿಸಿರುವುದನ್ನು "ಸಂಪೂರ್ಣ ಕಡಲ್ಗಳ್ಳತನ" ಎಂದು ಕರೆದ ಅವರು, ಹಡಗು ರಷ್ಯಾದ ಧ್ವಜವನ್ನು ಹೊಂದಿದ್ದರೂ ಅದರ ಮೇಲೆ ದಾಳಿ ಮಾಡಲಾಗಿದೆ. ಇದು ರಷ್ಯಾದ ಮೇಲಿನ ದಾಳಿಗೆ ಸಮಾನ. ಹೀಗಾಗಿ ಅಮೆರಿಕ ವಿರುದ್ಧವೂ ರಷ್ಯಾ ಮಿಲಿಟರಿ ಕ್ರಮ ಕೈಗೊಳ್ಳಬೇಕು. ಅಣ್ವಸ್ತ್ರ ಕ್ರಮಗಳಿಂದ ಮಾತ್ರ ಅಮೆರಿಕವನ್ನು ತಡೆಯಬಹುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ಬಾರಿ ಫೆ.1ರ ಭಾನುವಾರ ಕೇಂದ್ರ ಬಜೆಟ್, ಜ. 29ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆ!

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಪದೇ ಪದೇ ದಾಳಿ: ಭಾರತ ಹೇಳಿದ್ದೇನು?

ದ್ವೇಷ ಭಾಷಣ ಬಿಟ್ಟು 19 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಎರಡು ಮಸೂದೆ ವಾಪಸ್

ಕಾವೇರಿ ನದಿ ಸಂರಕ್ಷಣೆಗೆ ಹಣ ಮೀಸಲಿಡಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಒಡೆಯರ್ ಪತ್ರ!

SCROLL FOR NEXT