ಡೊನಾಲ್ಡ್ ಟ್ರಂಪ್-ಎಮಾನ್ಯುಯಲ್ ಮ್ಯಾಕ್ರನ್ 
ವಿದೇಶ

ಫ್ರಾನ್ಸ್ ಜೊತೆಗೂ Donald Trump ಗಲಾಟೆ; ಶೇ.200ರಷ್ಟು ಸುಂಕ ಹೇರಿಕೆ, ಖಾಸಗಿ ಮೆಸೇಜ್ ವೈರಲ್!

ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ವಾಷಿಂಗ್ಟನ್: ವೆನೆಜುವೆಲಾ, ಕ್ಯೂಬಾ, ಗ್ರೀನ್ ಲ್ಯಾಂಡ್ ವಿರುದ್ಧ ಕತ್ತಿ ಮಸೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಫ್ರಾನ್ಸ್ ಜೊತೆಗೂ ಗಲಾಟೆ ಮಾಡಿಕೊಂಡಿದ್ದಾರೆ.

ತಾವು ಪ್ರಸ್ತಾವಿಸಿದ್ದ "ಶಾಂತಿ ಮಂಡಳಿ" (Borad of Peace)ಗೆ ಸೇರಲು ಫ್ರಾನ್ಸ್ ನಿರಾಕರಿಸಿದ ಹಿನ್ನಲೆಯಲ್ಲಿ ಆ ದೇಶದ ವಿರುದ್ಧ ಅಸಮಾಧಾನಗೊಂಡಿರುವ ಟ್ರಂಪ್, ಬರೊಬ್ಬರಿ ಶೇ.200ರಷ್ಟು ಸುಂಕ ಘೋಷಣೆ ಮಾಡಿದ್ದಾರೆ. ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಟ್ರಂಪ್ ಡೆನ್ಮಾರ್ಕ್‌ನ ಭಾಗವಾಗಿರುವ ಆರ್ಕ್ಟಿಕ್ ಪ್ರದೇಶದ ಮೇಲೆ ಏಕೆ ಕಣ್ಣಿಟ್ಟಿದ್ದಾರೆ ಎಂಬ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಸಮರ್ಥನೆಯನ್ನು ಪ್ಯಾರಿಸ್ ಅಣಕಿಸಿದ ಬೆನ್ನಲ್ಲೇ ಫ್ರಾನ್ಸ್ ಮೇಲೆ ಟ್ರಂಪ್ ಅವರ ಸುಂಕ ದಾಳಿ ನಡೆದಿದೆ.

ಔಷಧಿಗಳ ಮೇಲೆ ಸುಂಕ ವಿಧಿಸಿದ ಬಳಿಕ, ಇದೀಗ ಮದ್ಯ ಉದ್ಯಮವನ್ನೇ ಟ್ರಂಪ್ ಗುರಿಯಾಗಿಸಿಕೊಂಡಿದ್ದಾರೆ. ಟ್ರಂಪ್ ರ ಈ ನಿರ್ಧಾರದಿಂದ ಅಮೆರಿಕದಲ್ಲಿರುವ ಮದ್ಯಪ್ರಿಯರಿಗೆ ದೊಡ್ಡ ಶಾಕ್‌ ಎದುರಾಗಿದೆ.

ಖಾಸಗಿ ಸಂದೇಶ ಹಂಚಿಕೊಂಡ ಟ್ರಂಪ್

ಇಷ್ಟು ಮಾತ್ರವಲ್ಲದೇ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಸ್ವೀಕರಿಸಿದ ಖಾಸಗಿ ಸಂದೇಶವನ್ನು ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಫ್ರೆಂಚ್ ಅಧ್ಯಕ್ಷರು ಟ್ರಂಪ್‌ಗೆ ಇರಾನ್ ಮತ್ತು ಸಿರಿಯಾದ ವಿಷಯಗಳ ಬಗ್ಗೆ ಇಬ್ಬರೂ ಒಪ್ಪುತ್ತಾರೆ ಎಂದು ಹೇಳಿದರು. ಆದರೆ ಟ್ರಂಪ್ "ಗ್ರೀನ್ಲ್ಯಾಂಡ್‌ನಲ್ಲಿ ಏನು ಮಾಡುತ್ತಿದ್ದಾರೆ" ಎಂದು ಅವರಿಗೆ "ಅರ್ಥವಾಗುತ್ತಿಲ್ಲ" ಎಂದು ಹೇಳಿದರು.

ಟ್ರಂಪ್ ಹೇಳಿದ್ದೇನು?

"ನಾನು ಅವರ ವೈನ್‌ಗಳು ಮತ್ತು ಷಾಂಪೇನ್‌ಗಳ ಮೇಲೆ ಶೇ.200 ರಷ್ಟು ಸುಂಕ ವಿಧಿಸುತ್ತೇನೆ. ನಮ್ಮ ಪ್ರಸ್ತಾಪಕ್ಕೆ ಅವರು ಸೇರಬಹುದು ಅಥವಾ ಸೇರದೇ ಇರಬಹುದು ಎಂದು ಟ್ರಂಪ್ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಉಲ್ಲೇಖಿಸಿ ಹೇಳಿದರು.

ಅಂತೆಯೇ ಯುದ್ಧ-ಹಾನಿಗೊಳಗಾದ ಗಾಜಾದ ಪುನರ್ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಅಮೆರಿಕ-ಪ್ರಸ್ತಾಪಿತ ಮಂಡಳಿಯನ್ನು ಮೂಲತಃ ಕಲ್ಪಿಸಲಾಗಿತ್ತು. ಆದರೆ ಚಾರ್ಟರ್ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಕ್ಕೆ ಅದರ ಪಾತ್ರವನ್ನು ಸೀಮಿತಗೊಳಿಸುವುದಿಲ್ಲ.

ಫ್ರೆಂಚ್ ಅಧ್ಯಕ್ಷರು ಡಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಹೊರತಾಗಿ ಟ್ರಂಪ್ ಮತ್ತು ಇತರ G7 ನಾಯಕರನ್ನು ಭೇಟಿ ಮಾಡಲು ಮುಂದಾದರು, ಉಕ್ರೇನಿಯನ್ನರು, ಡೇನ್ಸ್, ಸಿರಿಯನ್ನರು ಮತ್ತು ರಷ್ಯನ್ನರನ್ನು ಸಹ ಆಹ್ವಾನಿಸಬಹುದು ಎಂದು ಟ್ರಂಪ್ ಹೇಳಿದರು.

ಮ್ಯಾಕ್ರನ್ ಹೆಚ್ಚು ದಿನ ಅಧಿಕಾರದಲ್ಲಿ ಇರಲ್ಲ

ಇದೇ ವೇಳೆ ಟ್ರಂಪ್ ಎಮ್ಯಾನ್ಯುಯಲ್ ಮ್ಯಾಕ್ರಾನ್ ವಿರುದ್ಧವೂ ಕಿಡಿಕಾರಿದ್ದು, 'ಅವರು ಶೀಘ್ರದಲ್ಲೇ ಅಧಿಕಾರ ಕಳೆದುಕೊಳ್ಳಲಿದ್ದಾರೆ, ಯಾರಿಗೂ ಅವರ ಅಗತ್ಯವಿಲ್ಲ ಎಂದು ಹೇಳಿದರು.

ಇದು ಟ್ರಂಪ್ ನೀಡಿರುವ ಮೊದಲ ಬೆದರಿಕೆ ಅಲ್ಲ. ಕಳೆದ 11 ತಿಂಗಳಲ್ಲಿ ಇದು ಎರಡನೇ ಬಾರಿ ಯುರೋಪಿಯನ್ ಮದ್ಯ ಉತ್ಪನ್ನಗಳ ಮೇಲೆ ಶೇ.200 ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಯುರೋಪಿಯನ್ ಒಕ್ಕೂಟ ಅಮೆರಿಕನ್ ವಿಸ್ಕಿಯ ಮೇಲೆ ಶೇ.50 ಸುಂಕ ವಿಧಿಸುವುದಾಗಿ ಘೋಷಿಸಿದ್ದೇ ಈ ವ್ಯಾಪಾರ ಸಂಘರ್ಷಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗಳು ಅಮೆರಿಕ–ಯುರೋಪ್ ನಡುವಿನ ವ್ಯಾಪಾರ ಬಿಕ್ಕಟ್ಟನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ. ಫ್ರಾನ್ಸ್ ಸರ್ಕಾರವು ಈ ರೀತಿಯ ಸುಂಕ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮದ್ಯ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu: ರಾಜ್ಯಪಾಲರಿಗೆ ಸಿಎಂ Stalin ತಿರುಗೇಟು, ವಾರ್ಷಿಕ ಭಾಷಣ ರದ್ದತಿಗೆ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯ!

ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ರಾಷ್ಟ್ರಗೀತೆಗೆ ಸ್ಪೀಕರ್ ಅಪಮಾನ, ಭಾಷಣ ಮಾಡದೇ ಹೊರಟ ರಾಜ್ಯಪಾಲ

ಗ್ರೀನ್‌ಲ್ಯಾಂಡ್ ಯುಎಸ್ ಪ್ರಾಂತ್ಯ; 2026 ರಲ್ಲಿ ಸ್ಥಾಪನೆ: ಅಮೆರಿಕದ ನಕ್ಷೆ ಹೊಸ ನಕ್ಷೆ ಬಿಡುಗಡೆ ಮಾಡಿದ ಟ್ರಂಪ್!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾಗೌಡಗೆ ಹೈಕೋರ್ಟ್ ಶಾಕ್, 'ಎಲ್ಲರೂ ಸಮಾನರೇ..' ಮನೆ ಊಟ ರದ್ದು!

'ಅಧಿಕಾರ ಶಾಶ್ವತವಲ್ಲ, ತಾಳ್ಮೆಯೂ ಶಾಶ್ವತ ಅಲ್ಲ, ನಮ್ಮಣ್ಣನ ಹಣೆಬರಹದಲ್ಲಿ ಇದ್ದರೆ ಸಿಎಂ ಆಗ್ತಾರೆ': ಡಿ ಕೆ ಸುರೇಶ್

SCROLL FOR NEXT