ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಅಮೆರಿಕಾ ಅಧ್ಯಕ್ಷನ ಹತ್ಯೆಗೆ Iran ಭಾರೀ ಸಂಚು? Israel ರಹಸ್ಯ ಮಾಹಿತಿ; ಕೊನೆ ಕ್ಷಣದಲ್ಲಿ ವಿಮಾನ ಬದಲಿಸಿ 'Air Force One'ನಲ್ಲೇ ಪ್ರಯಾಣಿಸಿದ Trump..!

ಟ್ರಂಪ್ ಹತ್ಯೆಗೆ ಸಂಬಂಧಿಸಿದ ಹಲವು ಗುಪ್ತಚರ ಮಾಹಿತಿಗಳನ್ನು ಅಮೆರಿಕ ಈಗಾಗಲೇ ಗಮನಿಸುತ್ತಿತ್ತು. ಆದರೆ, ಇಸ್ರೇಲ್ ಹಂಚಿಕೊಂಡಿರುವ ಈ ಮಾಹಿತಿ ಹೊಸದಾಗಿದ್ದು, ನಿರ್ದಿಷ್ಟ ಹತ್ಯೆಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಭಾರೀ ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಇಸ್ರೇಲ್ ಗುಪ್ತಚರ ಸಂಸ್ಥೆಗಳು ಅಮೆರಿಕಾದೊಂದಿಗೆ ಹಂಚಿಕೊಂಡಿದ್ದು, ಈ ಸುದ್ದಿ ಈಗ ತೀವ್ರ ಸಂಚಲನ ಮೂಡಿಸಿದೆ.

ಇರಾನ್‌ನಿಂದ ಟ್ರಂಪ್‌ಗೆ ಇರುವ ಹಳೆಯ ಬೆದರಿಕೆಗಳಿಗಿಂತ ಈ ಪ್ಲಾನ್ ಸಂಪೂರ್ಣ ಭಿನ್ನವಾಗಿದ್ದು, ಅತ್ಯಂತ ನಿಖರವಾದ ಮತ್ತು ಹೊಸದಾದ ಕಾರ್ಯಾಚರಣೆಯಾಗಿದೆ ಎಂದು ಇಸ್ರೇಲ್ ಎಚ್ಚರಿಸಿದೆ.

ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ನಡೆದ ದಾಳಿಗಳ ಬಳಿಕ ಎರಡೂ ರಾಷ್ಟ್ರಗಳ ನಡುವೆ ಮತ್ತೆ ಪೂರ್ಣ ಪ್ರಮಾಣದ ಸಂಘರ್ಷ ಉಂಟಾಗುವ ಆತಂಕ ಹೆಚ್ಚಿರುವ ಸಮಯದಲ್ಲಿ ಈ ವರದಿಗಳು ಮಹತ್ವ ಪಡೆದುಕೊಂಡಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಟ್ರಂಪ್ ಹತ್ಯೆಗೆ ಸಂಬಂಧಿಸಿದ ಹಲವು ಗುಪ್ತಚರ ಮಾಹಿತಿಗಳನ್ನು ಅಮೆರಿಕ ಈಗಾಗಲೇ ಗಮನಿಸುತ್ತಿತ್ತು. ಆದರೆ, ಇಸ್ರೇಲ್ ಹಂಚಿಕೊಂಡಿರುವ ಈ ಮಾಹಿತಿ ಹೊಸದಾಗಿದ್ದು, ನಿರ್ದಿಷ್ಟ ಹತ್ಯೆಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಾಲ್ ಸ್ಟ್ರೀಟ್ ಜರ್ನಲ್ ಸಹ ಇದೇ ರೀತಿಯ ವರದಿ ಪ್ರಕಟಿಸಿದ್ದು, ಇರಾನ್‌ನಿಂದ ಟ್ರಂಪ್ ವಿರುದ್ಧ ಹೊಸ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಮಾಹಿತಿ ಸೂಚಿಸಿದೆ ಎಂದು ಹೇಳಿದೆ.

ಈ ಎಚ್ಚರಿಕೆ ಬೆನ್ನಲ್ಲೇ ನ್ಯಾಟೊ (NATO) ಶೃಂಗಸಭೆ ಮುಗಿಸಿ ಟರ್ಕಿಯಿಂದ ವಾಪಸ್ಸಾಗುವ ವೇಳೆ ಟ್ರಂಪ್ ಕೊನೆ ಕ್ಷಣದಲ್ಲಿ ತಮ್ಮ ವಿಮಾನವನ್ನು ಬದಲಾಯಿಸಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

2020ರ ಜನವರಿಯಲ್ಲಿ ತಮ್ಮ ಮೊದಲ ಅವಧಿಯ ಅಧ್ಯಕ್ಷರಾಗಿದ್ದ ವೇಳೆ ಟ್ರಂಪ್ ಅವರ ಆದೇಶದ ಮೇರೆಗೆ ಇರಾನ್‌ನ ಉನ್ನತ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಅವರನ್ನು ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.

ಈ ಘಟನೆಯ ನಂತರ ಟ್ರಂಪ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹಲವು ಬಾರಿ ಎಚ್ಚರಿಕೆ ನೀಡುತ್ತಾ ಬಂದಿದೆ. ಅಮೆರಿಕದ ಭದ್ರತಾ ಸಂಸ್ಥೆಗಳು ಕೂಡ ಟ್ರಂಪ್ ವಿರುದ್ಧ ಇರಾನ್‌ನಿಂದ ಅಪಾಯವಿರುವ ಸಾಧ್ಯತೆಯನ್ನು ಹಲವು ವರ್ಷಗಳಿಂದ ಗಮನಿಸುತ್ತಿವೆ.

ಈ ವರದಿಗಳ ಕುರಿತು ಎಎಫ್‌ಪಿ ಶ್ವೇತಭವನವನ್ನು ಸಂಪರ್ಕಿಸಿದಾಗ, ಅಧಿಕಾರಿಯೊಬ್ಬರು ಟ್ರಂಪ್ ಅವರು ಬುಧವಾರ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು.

ನ್ಯಾಟೊ ಶೃಂಗಸಭೆ ಮುಗಿಸಿ ಅಮೆರಿಕಕ್ಕೆ ಮರಳುವ ವೇಳೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಅವರು ಅಮೆರಿಕದ ನಾಯಕನನ್ನು, ಅಂದರೆ ನನ್ನನ್ನು ಹತ್ಯೆ ಮಾಡಲು ಬಯಸುತ್ತಿದ್ದಾರೆ. ಅವರ ಗುರಿ ಪಟ್ಟಿಯಲ್ಲೂ ನನ್ನ ಹೆಸರಿದೆ. ಇಂದು ಬೆಳಿಗ್ಗೆ ನೋಡಿದಾಗ ಪ್ರತಿಯೊಂದು ಪಟ್ಟಿಯಲ್ಲೂ ನನ್ನ ಹೆಸರಿದೆ ಎಂದು ತಿಳಿಯಿತು" ಎಂದು ಹೇಳಿದ್ದರು.

ಈ ಬೆಳವಣಿಗೆಯ ನಡುವೆ ಟ್ರಂಪ್ ಅವರ ವಿದೇಶ ಪ್ರವಾಸದ ವೇಳೆ ನಡೆದ ಮತ್ತೊಂದು ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಟರ್ಕಿಯಲ್ಲಿ ನಡೆದ ನ್ಯಾಟೊ ಶೃಂಗಸಭೆಗೆ ತೆರಳಿದ್ದ ಟ್ರಂಪ್, ಅಮೆರಿಕಕ್ಕೆ ಮರಳುವಾಗ ಹೊಸದಾಗಿ ಬಳಕೆಗೆ ಬಂದಿದ್ದ ಕತಾರ್ ಉಡುಗೊರೆಯ ವಿಮಾನದಲ್ಲಿ ನೇರವಾಗಿ ಪ್ರಯಾಣಿಸದೇ, ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ಬಳಸಿದರು. ಹೊಸ ವಿಮಾನವನ್ನು ಮೊದಲು ಬ್ರಿಟನ್‌ಗೆ ಕಳುಹಿಸಲಾಗಿದ್ದು, ಬಳಿಕ ಅಲ್ಲಿಂದ ಮತ್ತೊಂದು ವಿಮಾನಕ್ಕೆ ಬದಲಾಗಿ ವಾಷಿಂಗ್ಟನ್‌ಗೆ ತೆರಳಿದರು.

ಈ ಕ್ರಮದಿಂದ ಹೊಸ ವಿಮಾನದ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ವಿಶೇಷವಾಗಿ ಟರ್ಕಿಗೆ ಹೊಂದಿಕೊಂಡಿರುವ ಇರಾನ್ ವಿರುದ್ಧ ಅಮೆರಿಕ ಇತ್ತೀಚೆಗೆ ಹೊಸ ದಾಳಿಗಳನ್ನು ನಡೆಸಿದ್ದ ಹಿನ್ನೆಲೆ, ಟ್ರಂಪ್ ಅವರ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಈ ವಿಮಾನ ಬದಲಾವಣೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಸೂಚನೆಯ ಮೇರೆಗೆ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದೆ. ಆದರೆ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಿದಾಗ ಟ್ರಂಪ್ ಯಾವುದೇ ನೇರ ಉತ್ತರ ನೀಡಲಿಲ್ಲ. ಬದಲಾಗಿ, ತಮ್ಮ ವಿರುದ್ಧ ಈ ಹಿಂದೆ ಕೂಡ ಇರಾನ್‌ನಿಂದ ಹತ್ಯೆಯ ಯತ್ನಗಳಿದ್ದವು ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ವರದಿಗಳು ಹೊರಬಿದ್ದಿವೆ. ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳು ಪರಸ್ಪರ ದಾಳಿಗಳನ್ನು ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಪೂರ್ಣ ಪ್ರಮಾಣದ ಸಂಘರ್ಷ ಭುಗಿಲೇಳುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ಆದಾಗ್ಯೂ, ಇಸ್ರೇಲ್ ಹಂಚಿಕೊಂಡಿದೆ ಎನ್ನಲಾದ ಗುಪ್ತಚರ ಮಾಹಿತಿಯ ಕುರಿತು ಅಮೆರಿಕ ಸರ್ಕಾರ ಅಥವಾ ಇಸ್ರೇಲ್ ಸರ್ಕಾರ ಅಧಿಕೃತವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹಾಗೆಯೇ ಇರಾನ್ ಕೂಡ ಈ ವರದಿಗಳ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದ ರಾಮ ಮಂದಿರ ದೇಣಿಗೆ ಹಣ ಷೇರುಗಳಲ್ಲಿ ಹೂಡಿಕೆ: 30 ಬ್ಯಾಂಕ್ ಖಾತೆಗಳ ಸ್ಥಗಿತ, ತನಿಖೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ !

ಸಿದ್ದು ಆಶೀರ್ವಾದದಿಂದ ಸಚಿವರಾಗ್ತಾರಾ ಬಿ.ಕೆ.ಹರಿಪ್ರಸಾದ್? ಸಚಿವ ಸಂಪುಟ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷರ ಹೆಸರು ಮುನ್ನೆಲೆಗೆ..!

ರಾಜ್ಯದ ಅಭಿವೃದ್ಧಿಗೆ ಕೈಜೋಡಿಸೋಣ: ಕರ್ನಾಟಕದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ; ರಾಜ್ಯ ಸರ್ಕಾರಕ್ಕೆ HDK ಮನವಿ

'ಕೇಂದ್ರ ಸಚಿವರಾಗಿದ್ದು ಸಾಕು, ರಾಜೀನಾಮೆ ಕೊಟ್ಟು ಬನ್ನಿ: ನೀವು ಬಂದರಷ್ಟೇ ರೈತರು- ಬಡವರು- ಜನಸಾಮಾನ್ಯರು ಉಳಿಯೋಕೆ ಸಾಧ್ಯ'

ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ: ರಾಮ ನಮ್ಮ ಬಳಿ ಇಲ್ಲವೇ ; ಸಿಎಂ ಡಿ ಕೆ ಶಿವಕುಮಾರ್