ವಿಮಾನ ಪತನ  
ವಿದೇಶ

ಬಹಾಮಾಸ್‌ನಲ್ಲಿ ಫ್ಲೆಮಿಂಗೊ ಏರ್ ವಿಮಾನ ಪತನ: 10 ಮಂದಿ ದುರ್ಮರಣ; Video

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹಾಮಾಸ್ ಪೊಲೀಸ್ ಆಯುಕ್ತೆ ಶಾಂತಾ ನೋಲ್ಸ್, ವಿಮಾನದಲ್ಲಿ ಒಂಬತ್ತು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದರು. ರಕ್ಷಣಾ ಸಿಬ್ಬಂದಿ ಅಪಘಾತ ಸ್ಥಳದಲ್ಲಿ ಬದುಕಿದ್ದರೂ, ಬಳಿಕ ಅವರು ಕೂಡ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ ಎಂದು ಹೇಳಿದರು.

ನಸ್ಸೌ (ಕ್ಸಿನ್ಹುವಾ): ಬಹಾಮಾಸ್ ರಾಜಧಾನಿ ನಸ್ಸೌ ನಗರದ ಪಶ್ಚಿಮ ಭಾಗದಲ್ಲಿರುವ ನಾರ್ತ್ ಆಂಡ್ರೋಸ್ ದ್ವೀಪದಲ್ಲಿ ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸಣ್ಣ ವಿಮಾನ ಸ್ಧಳೀಯ ಕಾಲಮಾನ ನಿನ್ನೆ ಶುಕ್ರವಾರ ಸಾಯಂಕಾಲ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹಾಮಾಸ್ ಪೊಲೀಸ್ ಆಯುಕ್ತೆ ಶಾಂತಾ ನೋಲ್ಸ್, ವಿಮಾನದಲ್ಲಿ ಒಂಬತ್ತು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದರು. ರಕ್ಷಣಾ ಸಿಬ್ಬಂದಿ ಅಪಘಾತ ಸ್ಥಳದಲ್ಲಿ ಬದುಕಿದ್ದರೂ, ಬಳಿಕ ಅವರು ಕೂಡ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ ಎಂದು ಹೇಳಿದರು.

ಅಪಘಾತದ ತನಿಖೆಗಾಗಿ ಪೊಲೀಸ್ ತನಿಖಾಧಿಕಾರಿಗಳನ್ನು ಆಂಡ್ರೋಸ್ ದ್ವೀಪಕ್ಕೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಹಾಮಾಸ್ ವಿಮಾನ ಅಪಘಾತ ತನಿಖಾ ಪ್ರಾಧಿಕಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪ್ರಾಥಮಿಕ ಮಾಹಿತಿಯಂತೆ ವಿಮಾನವು ಲಿಂಡೆನ್ ಪಿಂಡ್ಲಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸ್ಯಾನ್ ಆಂಡ್ರೋಸ್ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ಲ್ಯಾಂಡಿಂಗ್‌ಗೆ ಮುನ್ನ ತಾಂತ್ರಿಕ ತೊಂದರೆ ಎದುರಾಗಿ, ವಿಮಾನವು ಪೊದೆಗಳ ಮಧ್ಯೆ ಪತನಗೊಂಡಿದೆ.

ಕೆರಿಬಿಯನ್ ಸಮುದ್ರದ ಉತ್ತರ ಹಾಗೂ ಪಶ್ಚಿಮ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಬಹಾಮಾಸ್, 700ಕ್ಕೂ ಹೆಚ್ಚು ದ್ವೀಪಗಳು ಮತ್ತು 2,400ಕ್ಕೂ ಹೆಚ್ಚು ಸಣ್ಣ ದ್ವೀಪಗಳನ್ನು ಹೊಂದಿದೆ. ಈ ದ್ವೀಪಗಳ ನಡುವಿನ ಸಂಚಾರಕ್ಕೆ ಸಣ್ಣ ವಿಮಾನಗಳೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್