ಮೊಜ್ತಾಬಾ ಖಮೇನಿ 
ವಿದೇಶ

ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಶಪಥ!

ಇರಾನ್‌ನ ಸೇಡು "ಅನಿವಾರ್ಯವಾಗಿ ನಡೆಯಲೇಬೇಕು. ಈ ವಿಷಯವು ಅವರ ವೈಯಕ್ತಿಕ ಅಸ್ತಿತ್ವ ಅಥವಾ ಇತರ ಅಧಿಕಾರಿಗಳ ಅಸ್ತಿತ್ವವನ್ನು ಅವಲಂಬಿಸಿಲ್ಲ. ನಾವು ಇದ್ದರೂ ಇಲ್ಲದಿದ್ದರೂ ಅದು ನಿಜವಾಗುತ್ತದೆ ಎಂದು ಖಮೇನಿ ಬರೆದುಕೊಂಡಿದ್ದಾರೆ.

ಟೆಹರಾನ್: ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಫೆಬ್ರವರಿ 28 ರಂದು ಹತರಾದ ಎಲ್ಲಾ ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದು, ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಬೇಡಿಕೆಯಾಗಿದೆ. ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ ಎಂದು ಹೇಳಿದ್ದಾರೆ.

ಇರಾನ್‌ನ ಸೇಡು "ಅನಿವಾರ್ಯವಾಗಿ ನಡೆಯಲೇಬೇಕು. ಈ ವಿಷಯವು ಅವರ ವೈಯಕ್ತಿಕ ಅಸ್ತಿತ್ವ ಅಥವಾ ಇತರ ಅಧಿಕಾರಿಗಳ ಅಸ್ತಿತ್ವವನ್ನು ಅವಲಂಬಿಸಿಲ್ಲ. ನಾವು ಇದ್ದರೂ ಇಲ್ಲದಿದ್ದರೂ ಅದು ನಿಜವಾಗುತ್ತದೆ ಎಂದು ಖಮೇನಿ ಬರೆದುಕೊಂಡಿದ್ದಾರೆ.

ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈಶಾನ್ಯ ಇರಾನ್ ನ ಮಶಾದ್ ಪಟ್ಟಣದಲ್ಲಿ ಭಾರಿ ಜನಸ್ತೋಮದ ನಡುವೆ ಅಂತಿಮ ಯಾತ್ರೆ ನಂತರ ಶಿಯಾ ಮುಸ್ಲಿಂ ನಾಯಕ ಇಮಾಮ್ ರೆಜಾ ಅವರ ಸಮಾಧಿ ಸ್ಥಳದಲ್ಲೇಆಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲಾಯಿತು ಎಂದು ಮೂಲಗಲು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ