ಸಾಂದರ್ಭಿಕ ಚಿತ್ರ 
ವಿದೇಶ

ಇರಾನ್ ಜಲ ಪ್ರದೇಶದಲ್ಲಿ 28 ಭಾರತೀಯ ಸಿಬ್ಬಂದಿಯಿದ್ದ LPG ಟ್ಯಾಂಕರ್ ಮೇಲೆ ದಾಳಿ!

ರಾಯಭಾರ ಕಚೇರಿ ಅಧಿಕೃತ ಹೇಳಿಕೆಯಲ್ಲಿ ಎಲ್‌ಪಿಜಿ ಟ್ಯಾಂಕರ್ 'ದಿಶಾ' (IMO ಸಂಖ್ಯೆ: 8818219) ಗೆ ಸಂಬಂಧಿಸಿದ ಘಟನೆಯನ್ನು ದೃಢಪಡಿಸಿದೆ

ಟೆಹ್ರಾನ್: ಇರಾನ್‌ನ ಜಲಪ್ರದೇಶದಲ್ಲಿ 28 ಭಾರತೀಯ ಸಿಬ್ಬಂದಿಯಿದ್ದ LPG ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ಮೊಜಾಂಬಿಕ್ ಧ್ವಜವನ್ನು ಹೊಂದಿರುವ ಎಲ್‌ಪಿಜಿ (LPG)ಟ್ಯಾಂಕರ್ 'ದಿಶಾ' (DISHA)ದಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಖಚಿತಪಡಿಸಿದೆ.

ರಾಯಭಾರ ಕಚೇರಿ ಅಧಿಕೃತ ಹೇಳಿಕೆಯಲ್ಲಿ ಎಲ್‌ಪಿಜಿ ಟ್ಯಾಂಕರ್ 'ದಿಶಾ' (IMO ಸಂಖ್ಯೆ: 8818219) ಗೆ ಸಂಬಂಧಿಸಿದ ಘಟನೆಯನ್ನು ದೃಢಪಡಿಸಿದೆ ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.

"ಈ ಹಡಗಿನಲ್ಲಿ 28 ಭಾರತೀಯ ಸಿಬ್ಬಂದಿ ಇದ್ದಾರೆ. ರಾಯಭಾರ ಕಚೇರಿಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದೆ.

ಅಲ್ಲದೆ, ರಾಜತಾಂತ್ರಿಕ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಮತ್ತು ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ.ಆದರೆ, ದಾಳಿಯ ಸ್ವರೂಪ ಅಥವಾ ಹಡಗಿನ ಸ್ಥಿತಿಗತಿ ಕುರಿತಾದ ವಿವರಗಳನ್ನು ಈ ಹೇಳಿಕೆಯಲ್ಲಿ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ಪರೀಕ್ಷೆ ನಡೆಸುವ NTA ನಲ್ಲಿ ಮೇಜರ್ ಸರ್ಜರಿ: 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ!

ಉಪವಾಸ ಸತ್ಯಾಗ್ರಹ ಅಂತ್ಯ: ಸೋನಮ್ ವಾಂಗ್‌ಚುಕ್ ವಿರುದ್ಧ ಹೆಚ್ಚಾದ ಟೀಕೆ, ಪತ್ನಿ ಗೀತಾಂಜಲಿ ಗರಂ!

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಸೇನಾ ಚೆಕ್‌ಪಾಯಿಂಟ್‌ ಧ್ವಂಸ; 15 Pak ಸೈನಿಕರು ಬಲಿ, 12 ಉಗ್ರರು ಸಾವು!

'ಇನ್‌ಸ್ಟಾಗ್ರಾಮ್‌ನಲ್ಲಿ ಯುವಕರೊಂದಿಗೆ ತೊಡಗಿಸಿಕೊಳ್ಳಿ, ರೀಲ್‌ಗಳನ್ನು ಪೋಸ್ಟ್ ಮಾಡಿ': ಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ

ಪರೀಕ್ಷಾ ಅಕ್ರಮಗಳ ವಿರುದ್ಧ ಕಾಂಗ್ರೆಸ್ ನಾಳೆ ದೇಶಾದ್ಯಂತ ಮೊಂಬತ್ತಿ ಮೆರವಣಿಗೆ, ಸತ್ಯಾಗ್ರಹ!