ಪ್ರಧಾನಿ ಮೋದಿ 
ವಿದೇಶ

ತಂತ್ರಜ್ಞಾನ ಸುಲಭವಾಗಿ ಎಲ್ಲರಿಗೂ ದೊರೆತಾಗ ಮಾತ್ರ ಪ್ರಗತಿ ಸಾಧ್ಯ: VivaTech ನಲ್ಲಿ ಪ್ರಧಾನಿ ಮೋದಿ!

ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಏಳು ದಿನಗಳ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ, ಪ್ಯಾರಿಸ್‌ನಲ್ಲಿ ನಡೆದ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ನವೋದ್ಯಮ ಕಾರ್ಯಕ್ರಮವಾದ ವಿವಾಟೆಕ್ ಶೃಂಗಸಭೆ 2026 ರಲ್ಲಿ ಈ ಹೇಳಿಕೆ ನೀಡಿದ್ದಾರೆ.

ಪ್ಯಾರಿಸ್: ತಂತ್ರಜ್ಞಾನ ಎಲ್ಲರಿಗೂ ಸುಲಭವಾಗಿ ದೊರೆತಾಗ ಮಾತ್ರ ಪ್ರಗತಿಗೆ ಕಾರಣವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಆದರೆ ಭಾರತ ತಾಂತ್ರಿಕ ಪ್ರಗತಿಯಿಂದ ತ್ವರಿತ ಬದಲಾವಣೆಯತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಏಳು ದಿನಗಳ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ, ಪ್ಯಾರಿಸ್‌ನಲ್ಲಿ ನಡೆದ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ನವೋದ್ಯಮ ಕಾರ್ಯಕ್ರಮವಾದ ವಿವಾಟೆಕ್ ಶೃಂಗಸಭೆ 2026 ರಲ್ಲಿ ಈ ಹೇಳಿಕೆ ನೀಡಿದ್ದಾರೆ.

ವಿದೇಶಿ ಪ್ರಜೆಗಳಿಗೆ ಆಂಥ್ರೊಪಿಕ್‌ನ ಇತ್ತೀಚಿನ ಕೃತಕ ಬುದ್ಧಿಮತ್ತೆ (AI) ಮಾದರಿಗಳ ಬಳಕೆಯನ್ನು ಅಮೆರಿಕ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ವಿವಾಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಾರತಕ್ಕಾಗಿ AI ಎಂದರೆ ಎಲ್ಲರನ್ನೂಳಗೊಂಡದ್ದು ಎಂದರ್ಥ ಎಂದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ ಅರ್ಧದಷ್ಟು ದೇಶದಲ್ಲಿ ನಡೆಯುತ್ತಿದೆ.ತಂತ್ರಜ್ಞಾನವು ಸಮಾಜದಲ್ಲಿ ಎಲ್ಲರಿಗೂ ಸುಲಭವಾಗಿ ದೊರಕಿದಾಗ ಮಾತ್ರ ದೇಶ ಪ್ರಗತಿಯಾಗಲಿದೆ. ಕಳೆದ ದಶಕದಲ್ಲಿ ಭಾರತವು ತಂತ್ರಜ್ಞಾನದಿಂದ ತ್ವರಿತಗತಿಯಲ್ಲಿ ಬದಲಾವಣೆಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು.

"ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ರಚಿಸುವುದರಿಂದ ಹಿಡಿದು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಗಳವರೆಗೆ, ಆರ್ಥಿಕ ಸೇರ್ಪಡೆ, ಶಿಕ್ಷಣ, ಟೆಲಿಮೆಡಿಸಿನ್ ಗಾಗಿ ಬೃಹತ್ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಿವಾಟೆಕ್ ಯುರೋಪಿನ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಸಭೆಯಾಗಿದ್ದು, ಭಾರತವು ಇದರಲ್ಲಿ ಅತಿದೊಡ್ಡ ಪೆವಿಲಿಯನ್ ಸ್ಥಾಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

ಸಿದ್ದರಾಮಯ್ಯ ಮಾತಿಗೆ ಯಾವುದೇ ಬೆಲೆ ಇಲ್ಲ, ಅವರ ಆಪ್ತನಾಗಿದ್ದಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ: CM ಡಿಕೆಶಿ ವಿರುದ್ಧ ಸುಧಾಕರ್ ಕಿಡಿ

Crass, cheap and derogatory': ನಟಿ ತ್ರಿಶಾಗೆ ಅಸಭ್ಯ, ಕೀಳುಮಟ್ಟದಲ್ಲಿ ಅಪಮಾನ, ಉದಯನಿಧಿ ಸ್ಟಾಲಿನ್ ಕ್ಷಮೆಯಾಚನೆಗೆ ಖುಷ್ಬೂ ಸುಂದರ್ ಒತ್ತಾಯ!

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!