ಹಾಸ್ಯ ನಟ ಪ್ರಣಿತ್ ಮೋರ್, ಹಿಮಾಂಶು ಜಾಂಗ್ರಾ 
ವಿದೇಶ

370 ರೂ ಬಿರಿಯಾನಿ ಹೇಳಿಕೆ ವಿವಾದ: ಹಾಸ್ಯ ನಟ ಪ್ರಣಿತ್ ಮೋರ್, ಹಿಮಾಂಶು ಜಾಂಗ್ರಾ NCW ಮುಂದೆ ವಿಚಾರಣೆಗೆ ಹಾಜರು!

ಈ ಪ್ರಕರಣ ಸಂಬಂಧ ಪ್ರಣಿತ್ ಮೋರ್ ಮತ್ತು ಜಾಂಗ್ರಾ ಓಖ್ಲಾದ NCW ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.

ನವದೆಹಲಿ: ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ಟ್ಯಾಂಡ್-ಅಪ್ ಕಾಮಿಡಿ ನಟ ಪ್ರಣಿತ್ ಮೋರ್, ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಾಂಗ್ರಾ ಮತ್ತು ಹಾಸ್ಯನಟ ಮಧುರ್ ವಿರ್ಲಿ ಸೋಮವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ವಿಚಾರಣೆಗೆ ಹಾಜರಾದರು.

ಗುರುಗ್ರಾಮದಲ್ಲಿ ನಡೆದ ಶೋ ವೇಳೆಯಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವಾಗ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ 22 ವರ್ಷದ ಹಿಮಾಂಶು ಜಾಂಗ್ರಾ ಅವರ 370 ರೂ. ಬಿರಿಯಾನಿ ಹೇಳಿಕೆಯ ಹೇಳಿಕೆ ವಿಡಿಯೋವನ್ನು ಪ್ರಣಿತ್ ಮೋರ್ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಈ ಪ್ರಕರಣ ಸಂಬಂಧ ಪ್ರಣಿತ್ ಮೋರ್ ಮತ್ತು ಜಾಂಗ್ರಾ ಓಖ್ಲಾದ NCW ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವೈರಲ್ ವೀಡಿಯೊದ ವಿಷಯ ಮತ್ತು ಪ್ರೇಕ್ಷಕರ ಮುಂದೆ ಮನರಂಜನೆಯಾಗಿ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ಬಗ್ಗೆ ಆಯೋಗವು ಜೂನ್ 11 ರಂದು ಗಂಭೀರ ಕಳವಳ ವ್ಯಕ್ತಪಡಿಸಿತ್ತು.

ಅಲ್ಲದೇ ಈ ಸಂಬಂಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ NCW ಅಧ್ಯಕ್ಷೆ ವಿಜಯಾ ರಹತ್ಕರ್ ಪತ್ರ ಬರೆದಿದ್ದರು.

ಇದಲ್ಲದೆ, ಸಾರ್ವಜನಿಕ ಮನರಂಜನಾ ವೇದಿಕೆಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಮಹಿಳೆಯರ ಘನತೆಯನ್ನು ಉಲ್ಲಂಘಿಸುವ, ಲೈಂಗಿಕ ಕಿರುಕುಳ, ಬಲವಂತ ಅಥವಾ ನಡವಳಿಕೆಯನ್ನು ಉತ್ತೇಜಿಸುವ, ಪ್ರೋತ್ಸಾಹದ ವಿರುದ್ಧ ರಾಜ್ಯ ಪೊಲೀಸರು ಪ್ರಸ್ತಾಪಿಸಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಆಯೋಗ ಕೋರಿತ್ತು.

ಮಹಿಳೆಯರ ಬಗ್ಗೆ ಅಗೌರವ, ಹಾಸ್ಯ ಅಥವಾ ಮನರಂಜನೆಯಾಗಿ ಬಿಂಬಿಸುವ ಯಾವುದೇ ಪ್ರಯತ್ನವು ಸ್ವೀಕಾರಾರ್ಹವಲ್ಲ ಮತ್ತು ಭಾರತದ ಸಂವಿಧಾನ ಮತ್ತು ಕಾನೂನುಗಳ ಅಡಿಯಲ್ಲಿ ಮಹಿಳೆಯರಿಗೆ ಖಾತರಿಪಡಿಸಲಾದ ಸಮಾನತೆ, ಘನತೆ ಮತ್ತು ಸುರಕ್ಷತೆಯ ತತ್ವಗಳಿಗೆ ವಿರುದ್ಧವಾಗಿದೆ" ಎಂದು ಆಯೋಗ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್