ಟೆಕ್ಸಾಸ್: ಮೈಕ್ರೋಸಾಫ್ಟ್, ಗೂಗಲ್, ಯೂಟ್ಯೂಬ್ ಮತ್ತು ಕ್ರೂಸ್ ಸೇರಿದಂತೆ ಕಂಪನಿಗಳಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ತಂತ್ರಜ್ಞರೊಬ್ಬರು, ಅಮೆರಿಕದ ಟೆಕ್ಸಾಸ್‌ನಲ್ಲಿ ಹಲಾಲ್ ಬಾರ್ಬೆಕ್ಯೂ (BBQ) ರೆಸ್ಟೋರೆಂಟ್ ತೆರೆಯಲು ವರ್ಷಕ್ಕೆ 4.25 ಕೋಟಿ ($450,000) ರೂಪಾಯಿಗಳ ಕೆಲಸವನ್ನು ತೊರೆದಿದ್ದಾರೆ.
35 ವರ್ಷದ ಸಲಾಹೋದೀನ್ ಅಬ್ದುಲ್-ಕಾಫಿ, ಉದ್ಯಮದ ಬಗ್ಗೆ 'ಭ್ರಮನಿರಸನಗೊಂಡಿದ್ದರಿಂದ' ತಮ್ಮ ಹೆಚ್ಚಿನ ಸಂಬಳದ ಕೆಲಸವನ್ನು ತೊರೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಏಕೆಂದರೆ ಕೆಲಸವು ಜನರ ಜೀವನವನ್ನು ಸುಧಾರಿಸುವುದಕ್ಕಿಂತ ಹಣ ಗಳಿಸುವುದರ ಮೇಲೆ ಹೆಚ್ಚು ಗಮನಹರಿಸುತ್ತದೆ ಎಂದು ತಮ್ಮದೇ ಉದ್ಯಮ ಸ್ಥಾಪಿಸಿರುವ ಅಬ್ದುಲ್ ಕಾಫಿ ಹೇಳಿದ್ದಾರೆ.
ಶೇ.50 ಕ್ಕಿಂತ ಹೆಚ್ಚು ವೇತನ ಕಡಿತವನ್ನು ಪಡೆದು, ಸ್ಯಾನ್ ಫ್ರಾನ್ಸಿಸ್ಕೋವನ್ನು ತೊರೆದ ನಂತರ ಅಬ್ದುಲ್-ಕಾಫಿ ಧಾರ್ಮಿಕ ಲಾಭರಹಿತ ಸಂಸ್ಥೆಯನ್ನು ಸೇರಿದರು. ದಿನದ ಕೆಲಸದ ಜೊತೆಗೆ, ಅಬ್ದುಲ್ ಕಾಫಿ ಔತಣಕೂಟಗಳನ್ನು ಮತ್ತು ಬಾರ್ಬೆಕ್ಯೂ ಮಾಡುವುದನ್ನು ಸ್ನೇಹಿತರಿಗಾಗಿ ಆಯೋಜಿಸಲು ಪ್ರಾರಂಭಿಸಿದರು, ಅವರ ಸ್ನೇಹಿತರು ನಿಮ್ಮ ಅಡುಗೆ ಶೈಲಿಗೆ ಹೋಲುವ ಯಾವುದನ್ನೂ ನಾವು ನೋಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಟೆಕ್ಸಾಸ್ ಬಾರ್ಬೆಕ್ಯೂನಲ್ಲಿ ಈಗಾಗಲೇ ಇಲ್ಲದಿರುವ ಯಾವುದನ್ನಾದರೂ ಮಾಡಲು ಸಾಧ್ಯವಿದೆಯೇ ಎಂದು ನಾನು ಯೋಚಿಸಲು ಪ್ರಾರಂಭಿಸಿದೆ" ಎಂದು ಅಬ್ದುಲ್-ಕಾಫಿ ಬಿಸಿನೆಸ್ ಇನ್ಸೈಡರ್‌ಗೆ ತಿಳಿಸಿದ್ದಾರೆ.
"ಕಾಫಿ ಬಾರ್ಬೆಕ್ಯೂ ಡಿಸೆಂಬರ್ 2024 ರಲ್ಲಿ ಪ್ರಾರಂಭವಾಯಿತು. ನಾವು ಮೂರು ದಿನಗಳವರೆಗೆ ಸಾಕಷ್ಟು ಬಾರ್ಬೆಕ್ಯೂ ತಯಾರಿಸಿದ್ದೇವೆ, ಆದರೆ ಮೊದಲ ದಿನವೇ ನಾವು ಎಲ್ಲವನ್ನೂ ಮಾರಾಟ ಮಾಡಿದೆವು. ಅದೇ ರಾತ್ರಿ ನಾವು ಮತ್ತೆ ಅಡುಗೆ ಮಾಡಲು ಪ್ರಾರಂಭಿಸಿದೆವು."
ರಾಜ್ಯ ಮತ್ತು ದೇಶಾದ್ಯಂತ ಶೀಘ್ರ ಜನಪ್ರಿಯತೆಯನ್ನು ಗಳಿಸಿದ ಅಬ್ದುಲ್-ಕಾಫಿ, ಈ ವರ್ಷ ತಮ್ಮ ರೆಸ್ಟೋರೆಂಟ್ 37.8 ಕೋಟಿ ($4 ಮಿಲಿಯನ್) ಆದಾಯವನ್ನು ಗಳಿಸುವ ಹಾದಿಯಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ.
"ಕಳೆದ ವರ್ಷ, ನಾವು ರೂ. (21.7 ಕೋಟಿ) $2.3 ಮಿಲಿಯನ್ ಆದಾಯವನ್ನು ಗಳಿಸಿದ್ದೇವೆ ಮತ್ತು ಈ ವರ್ಷ ನಾವು (ರೂ.37.8 ಕೋಟಿ) $4 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಆದಾಗ್ಯೂ, ನಾನು ಉದ್ಯಮ ತೆರೆದಾಗಿನಿಂದ ಇನ್ನೂ ಒಂದೇ ಒಂದು ಡಾಲರ್ ವೇತನ ಪಡೆದಿಲ್ಲ ಮತ್ತು ಈ ವರೆಗೂ ನನ್ನ ಉಳಿತಾಯದಿಂದ ಬದುಕುತ್ತಿದ್ದೇನೆ" ಎಂದು ಅವರು ಹೇಳಿದರು.
ಹೆಚ್ಚಿನ ನಿರ್ವಹಣಾ ವೆಚ್ಚ
ರೆಸ್ಟೋರೆಂಟ್‌ನ ನಿರೀಕ್ಷೆಗೂ ಮೀರಿದ ಯಶಸ್ಸಿನ ಹೊರತಾಗಿಯೂ, ಅಬ್ದುಲ್-ಕಾಫಿ ಭವಿಷ್ಯದ ಬಗ್ಗೆ ಎಚ್ಚರಿಕೆಯಿಂದ ಆಶಾವಾದಿಯಾಗಿದ್ದಾರೆ. ಈ ಉದ್ಯಮ ಲಾಭದಾಯಕವಾಗಿದ್ದರೂ, ಸುಮಾರು $1 ಮಿಲಿಯನ್ ವೆಚ್ಚವಾದ ಆರಂಭಿಕ ಹೂಡಿಕೆಯನ್ನು ಅವರು ಇನ್ನೂ ಪಾವತಿಸಿಲ್ಲ ಎಂದು ಅವರು ಗಮನಸೆಳೆದರು.
ರೆಸ್ಟೋರೆಂಟ್ ನಡೆಸುವ ಹೆಚ್ಚಿನ ವೆಚ್ಚದ ಬಗ್ಗೆ ಮಾತನಾಡಿರುವ ಅಬ್ದುಲ್-ಕಾಫಿ, ಮಾಸಿಕ ವೆಚ್ಚಗಳು $215,000 ಮೀರಿದೆ ಎಂದು ಗಮನಿಸಿದರು. ಇದರಲ್ಲಿ ಆಹಾರಕ್ಕಾಗಿ $125,000, ಕಾರ್ಮಿಕರಿಗೆ $50,000 ಮತ್ತು ಬಾಡಿಗೆಗೆ $15,000 ಸೇರಿವೆ, ಜೊತೆಗೆ ಮಾರ್ಕೆಟಿಂಗ್ ಮತ್ತು ಇತರ ಚಟುವಟಿಕೆಗಳಿಗೆ ಸಾವಿರಾರು ಡಾಲರ್ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.