ಇರಾನ್ ಮೇಲೆ ದಾಳಿ  
ವಿದೇಶ

ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ಯುದ್ಧ: ಭಾರತ ಸೇರಿ ವಿಶ್ವದ ಬೇರೆ ದೇಶಗಳ ಮೇಲೆ ಪರಿಣಾಮವೇನು?

ಈ ದಾಳಿಯಷ್ಟೇ ಅದರ ಸಮಯವೂ ಪರಿಣಾಮಕಾರಿ. ನವೀಕೃತ ಅಣು ಮಾತುಕತೆಗಳ ನಡುವೆ ನಿನ್ನೆಯ ದಾಳಿ ನಡೆದಿರುವುದರಿಂದ, ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ರಕ್ಷಣೆಯನ್ನು ಒದಗಿಸುವುದಿಲ್ಲ ಎಂಬ ಭಾವನೆಯನ್ನು ಇರಾನ್ ಬಲಪಡಿಸಿದೆ.

ನವದೆಹಲಿ: ಇರಾನ್ ಮೇಲೆ ಜಂಟಿ ದಾಳಿ ನಡೆಸಿ ಟೆಹ್ರಾನ್ ಆಡಳಿತವನ್ನು ಕೆಡವಲು ಬಹಿರಂಗವಾಗಿ ಬೆಂಬಲ ಸೂಚಿಸುವ ಮೂಲಕ ಅಮೆರಿಕಾ ಮತ್ತು ಇಸ್ರೇಲ್ ಸಂಘರ್ಷವನ್ನು ಅತ್ಯಂತ ಅಪಾಯಕಾರಿ ದಿಕ್ಕಿನಲ್ಲಿ ಮುನ್ನಡೆಸಿವೆ.

ಸಮಯದ ಮಹತ್ವ

ಈ ದಾಳಿಯಷ್ಟೇ ಅದರ ಸಮಯವೂ ಪರಿಣಾಮಕಾರಿ. ನವೀಕೃತ ಅಣು ಮಾತುಕತೆಗಳ ನಡುವೆ ನಿನ್ನೆಯ ದಾಳಿ ನಡೆದಿರುವುದರಿಂದ, ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ರಕ್ಷಣೆಯನ್ನು ಒದಗಿಸುವುದಿಲ್ಲ ಎಂಬ ಭಾವನೆಯನ್ನು ಇರಾನ್ ಬಲಪಡಿಸಿದೆ. ಹೀಗಾಗಿ ಭವಿಷ್ಯದ ಅಣು ನಿಯಂತ್ರಣ ಕ್ರಮಗಳು ದೇಶದ ರಾಜಕೀಯದಲ್ಲಿ ಪರಿಸ್ಥಿತಿ ವಿಷಮಯವಾಗುವ ಸಾಧ್ಯತೆಯಿದೆ.

ಯುದ್ಧ ದೀರ್ಘಗೊಳ್ಳುವಂತಾದರೆ ಮತ್ತು ಮಾತುಕತೆಗಳ ವೇದಿಕೆ ತಕ್ಷಣ ನಿರ್ಮಿಸಲ್ಪಡದಿದ್ದರೆ, ವಿಶ್ವಾಸ ಕಡಿಮೆಯಾಗುವುದು ಜಾಗತಿಕ ಪರಿಣಾಮಗಳನ್ನುಂಟುಮಾಡಲಿದೆ. ಯುರೇನಿಯಂ ಸಮೃದ್ಧೀಕರಣದ ಮೇಲೆ ಒಪ್ಪಂದಾತ್ಮಕ ತಾತ್ಕಾಲಿಕ ಸ್ಥಗಿತ, ಕಠಿಣ ಪರಿಶೀಲನೆಗಳು ಮತ್ತು ಉದ್ವಿಗ್ನತೆ ತಗ್ಗಿಸುವ ಕ್ರಮಗಳು ಈಗ ದೂರದ ಕನಸಿನಂತಿವೆ.

ಸ್ಟ್ರೇಟ್ ಆಫ್ ಹೋರ್ಮುಜ್ (ಹೋರ್ಮುಜ್ ಜಲಸಂಧಿ)

ಇದು ಇರಾನ್ ಮತ್ತು ಓಮಾನ್ ನಡುವೆ ಇರುವ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಭಾಗ ಇದೇ ಜಲಸಂಧಿಯಿಂದ ಸಾಗುತ್ತದೆ. ಜಾಗತಿಕ ಅಪಾಯ ಹೋರ್ಮುಜ್ ಕಣಿವೆಯಲ್ಲಿದೆ — ವಿಶ್ವದ ಪೆಟ್ರೋಲಿಯಂ ಸರಬರಾಜಿನ ಸುಮಾರು 5 ಶೇಕಡಾ ಭಾಗ ಸಾಗುವ ಈ ಸಮುದ್ರ ಮಾರ್ಗ ಅತ್ಯಂತ ಮಹತ್ವದ್ದು.

ಭಾರತದ ಮೇಲೆ ಏನು ಪರಿಣಾಮ?

ಭಾರತದ ದೃಷ್ಟಿಯಿಂದ ಅಪಾಯ ಗಂಭೀರ. ದೇಶದ ತಿಂಗಳಿಗೆ ಆಮದುಗೊಳ್ಳುವ ಕಚ್ಚಾ ತೈಲದ ಸುಮಾರು ಅರ್ಧ ಭಾಗ — ದಿನಕ್ಕೆ ಸುಮಾರು 2.6 ಮಿಲಿಯನ್ ಬ್ಯಾರೆಲ್ — ಇದೇ ಮಾರ್ಗದಿಂದ ಸಾಗುತ್ತದೆ. ಸಂಪೂರ್ಣ ನಿರ್ಬಂಧವಿಲ್ಲದಿದ್ದರೂ ವ್ಯತ್ಯಯ ಉಂಟಾದರೆ ತೈಲ ಬೆಲೆಗಳು ಏರಿಕೆಯಾಗುತ್ತವೆ, ವಿಮಾ ಪ್ರೀಮಿಯಂಗಳು ಹೆಚ್ಚುತ್ತವೆ, ಸಾಗಣೆ ಮಾರ್ಗಗಳು ಉದ್ದಗೊಳ್ಳುತ್ತವೆ ಮತ್ತು ಇಂಧನ ಆಮದು ಮಾಡುವ ಆರ್ಥಿಕತೆಗಳಲ್ಲಿ ದರ ಏರಿಕೆಯ ಒತ್ತಡ ಹೆಚ್ಚುತ್ತದೆ. ತನ್ನ ಕಚ್ಚಾ ತೈಲದ 80 ಶೇಕಡಾಕ್ಕಿಂತ ಹೆಚ್ಚು ಆಮದು ಮಾಡುವ ಭಾರತಕ್ಕೆ ವ್ಯಾಪಾರ ಕೊರತೆ ವಿಸ್ತರಿಸುವುದರ ಜೊತೆಗೆ ರೂಪಾಯಿ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

ಇದರಿಂದ ಜಾಗತಿಕ ಸರಬರಾಜು ಸರಪಳಿಗಳ ಮೇಲೂ ಪರಿಣಾಮ ಬೀಳಬಹುದು. ಈಗಾಗಲೇ ಅಸ್ಥಿರವಾಗಿರುವ ಸಾಗಣೆ ವ್ಯವಸ್ಥೆಗಳು ಹೆಚ್ಚಿದ ಸಾಗಾಟ ವೆಚ್ಚವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬಂಡವಾಳ ಅಸ್ಥಿರತೆ ಕಾಣಿಸಬಹುದು. ಏಷ್ಯಾ ಮತ್ತು ಯೂರೋಪಿನ ಇಂಧನ ಆಮದು ದೇಶಗಳು ಪರ್ಯಾಯ ಸರಬರಾಜಿಗೆ ಸ್ಪರ್ಧೆ ನಡೆಸಬೇಕಾಗುತ್ತದೆ.

ಅಮೆರಿಕಾ ನೆಲೆಗಳಿಂದ ಸುತ್ತುವರಿದ ಪ್ರದೇಶದ ಅಪಾಯ

ಅಮೆರಿಕಾ ಸೈನಿಕ ನೆಲೆಗಳು ತಮ್ಮ ಗುರಿಯ ಪ್ರದೇಶಗಳೆಂದು ಇರಾನ್ ಸೂಚಿಸಿದೆ. ಬಹರೈನ್, ಕತಾರ್, ಕುವೈತ್, ಯುಎಇ, ಇರಾಕ್ ಮತ್ತು ಸೌದಿ ಅರೇಬಿಯಾದಲ್ಲಿರುವ ನೆಲೆಗಳ ಮೇಲೆ ನೇರ ದಾಳಿ ನಡೆದರೆ ದ್ವಿಪಕ್ಷೀಯ ಸಂಘರ್ಷವು ಪ್ರಾದೇಶಿಕ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಇದೆ.

ಪ್ರತೀಕಾರವು ಸಮಪ್ರಮಾಣದಲ್ಲಿರಬೇಕೆಂಬ ನಿಯಮವಿಲ್ಲ. ಇರಾನ್ ಕ್ಷಿಪಣಿ ದಾಳಿಗಳು, ಸೈಬರ್ ಯುದ್ಧಗಳನ್ನು ಬಳಸಬಹುದು. ನಿಯಂತ್ರಿತ ದಾಳಿಗಳೂ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿ ಪ್ರತಿದಾಳಿಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಅಮೆರಿಕಾ ಸೈನಿಕರು ಸಾವಿಗೀಡಾದರೆ ಪರಿಸ್ಥಿತಿ ತೀವ್ರವಾಗಿ ಹದಗೆಡುವ ಅಪಾಯವಿದೆ.

ಭಾರತದ ಸೂಕ್ಷ್ಮ ಸಮತೋಲನ

ಪಶ್ಚಿಮ ಏಷ್ಯಾದಾದ್ಯಂತ 10 ಮಿಲಿಯನ್‌ಕ್ಕಿಂತ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಎಚ್ಚರಿಕೆ ಸೂಚನೆಗಳು ಮೊದಲ ಹೆಜ್ಜೆ ಮಾತ್ರ; ಗುಂಡಿನ ದಾಳಿ ನಡುವೆ ಸ್ಥಳಾಂತರ ಕಾರ್ಯಾಚರಣೆ ಇನ್ನಷ್ಟು ಕಷ್ಟಕರ. ಇಸ್ರೇಲ್‌ನೊಂದಿಗೆ ಬಲವಾದ ಸಂಬಂಧ, ಗಲ್ಫ್ ದೇಶಗಳ ಮೇಲೆ ಇಂಧನ ಅವಲಂಬನೆ ಮತ್ತು ಇರಾನ್‌ನೊಂದಿಗೆ ಸಂಪರ್ಕ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದು ಭಾರತದ ಮುಂದೆ ದೊಡ್ಡ ಸವಾಲಾಗಿದೆ. ದೀರ್ಘ ಯುದ್ಧವು ರಾಜತಾಂತ್ರಿಕ ಅವಕಾಶಗಳನ್ನು ಸೀಮಿತಗೊಳಿಸಿ, ಇಂಧನ ಸರಬರಾಜು ಮತ್ತು ಭಾರತೀಯ ವಲಸಿಗರ ಸುರಕ್ಷತೆಯನ್ನು ಕಾಪಾಡುತ್ತಲೇ ಜಾಗರೂಕ ತಟಸ್ಥತೆಯನ್ನು ಪಾಲಿಸುವಂತೆ ಒತ್ತಾಯಿಸಬಹುದು.

ಆಡಳಿತ ಬದಲಾವಣೆ ಸ್ಪಷ್ಟ ಯುದ್ಧ ಗುರಿಯಾಗಿದರೆ ಪರಿಣಾಮಗಳು ಇರಾನ್‌ನಾಚೆಗೆ ವಿಸ್ತರಿಸಬಹುದು. ಪ್ರಾದೇಶಿಕ ರಾಷ್ಟ್ರಗಳು ಸೈನಿಕ ಆಧುನೀಕರಣ ಅಥವಾ ಅಣು ನಿರೋಧಕ ಕ್ರಮಗಳನ್ನು ವೇಗಗೊಳಿಸಬಹುದು. ಅಣು ಪ್ರಸರಣ ವಿರೋಧಿ ಮಾನದಂಡಗಳು ದುರ್ಬಲಗೊಳ್ಳಬಹುದು.

ಅತಿಯಾದ ಗುರಿಗಳೊಂದಿಗೆ ಆರಂಭವಾದ ಯುದ್ಧಗಳು ಸುಲಭವಾಗಿ ಅಂತ್ಯಗೊಳ್ಳುವುದಿಲ್ಲ. ಇರಾನ್ ಉಳಿದರೆ ಅದು ತಾನು ಎದುರಿಸಿದ ಸವಾಲಿನ ಮೇಲೆ ಜಯ ಸಾಧಿಸಿದ್ದಾಗಿ ಹೇಳಿಕೊಳ್ಳುತ್ತದೆ; ಆಡಳಿತ ಕುಸಿದರೆ ಅಸ್ಥಿರತೆ ಮುಂದುವರಿಯಬಹುದು. ಯಾವ ಪರಿಸ್ಥಿತಿಯಲ್ಲೂ ಪ್ರದೇಶವು ದೀರ್ಘಕಾಲದ ಅಶಾಂತಿಯನ್ನು ಎದುರಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್-Video

‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ

ಸಂಪುಟ ಸಭೆಯಲ್ಲೂ ಸದ್ದು ಮಾಡಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ವಿರುದ್ಧ ಕ್ರಮಕ್ಕೆ ಸಚಿವರೇ ಆಕ್ಷೇಪ !

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

SCROLL FOR NEXT