ನಟಾಂಜ್ ಪರಮಾಣು ಸ್ಥಾವರ 
ವಿದೇಶ

ಅಮೆರಿಕ ದಾಳಿಯಿಂದ ಇರಾನ್‌ನ ನಟಾಂಜ್ ಪರಮಾಣು ಸ್ಥಾವರಕ್ಕೆ ಹಾನಿ: ದೃಢಪಡಿಸಿದ IAEA

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ನಟಾಂಜ್‌ನಲ್ಲಿರುವ ಭೂಗತ ಪರಮಾಣು ಸೌಲಭ್ಯದ ಪ್ರವೇಶ ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಉಪಗ್ರಹ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು IAEA ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಮಂಗಳವಾರ ಇರಾನ್​ನ ಇಸ್ಫಹಾನ್​ ಪ್ರಾಂತ್ಯದಲ್ಲಿನ ನಟಾಂಜ್​ ಪರಮಾಣು ಸ್ಥಾವರ(ಶಾಹಿದ್​ ಅಹ್ಮದಿ ರೋಶನ್​)ಕ್ಕೆ ಹಾನಿಯಾಗಿದೆ ಎಂದು ದೃಢಪಡಿಸಿದೆ. ಆದರೆ ಅಮೆರಿಕ ದಾಳಿಯಿಂದ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಹೇಳಿದೆ.

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ನಟಾಂಜ್‌ನಲ್ಲಿರುವ ಭೂಗತ ಪರಮಾಣು ಸೌಲಭ್ಯದ ಪ್ರವೇಶ ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಉಪಗ್ರಹ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು IAEA ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಆದಾಗ್ಯೂ, ಜೂನ್‌ನಲ್ಲಿ ನಡೆದ ಸಂಘರ್ಷದ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾದ ಮುಖ್ಯ ಇಂಧನ ಪುಷ್ಟೀಕರಣ ಸ್ಥಾವರದಲ್ಲಿ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಮತ್ತು ಯಾವುದೇ ಹೆಚ್ಚುವರಿ ಪರಿಣಾಮ ಪತ್ತೆಯಾಗಿಲ್ಲ ಎಂದು ಅದು ಹೇಳಿದೆ.

ಇದಕ್ಕೂ ಮೊದಲು, ನಟಾಂಜ್ ಯುರೇನಿಯಂ ಸಂಸ್ಕರಣ ಘಟಕವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿವೆ ಎಂದು ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ ವರದಿ ಮಾಡಿತ್ತು.

ವಿಶ್ಲೇಷಣೆಯ ಪ್ರಕಾರ, ದಾಳಿಯಲ್ಲಿ ಕನಿಷ್ಠ ಮೂರು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ 'Spy' ಜೊತೆ ಪ್ರೀತಿ: Nvidia ಸಿಇಒ ಜೆನ್ಸನ್ ಹುವಾಂಗ್‌ಗೆ ಸಂಕಷ್ಟ; FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್, ಷೇರು ಮೌಲ್ಯದಲ್ಲಿ ಭಾರೀ ಕುಸಿತ..!

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಆದರೂ 'ಅತ್ಯಂತ ಕಳಪೆ' ಸ್ಥಿತಿ ಮುಂದುವರಿಕೆ, ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ: ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

Sting operation ಸುಳಿಯಲ್ಲಿ 'ಕೈ' ಪಾಳಯ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದು; ದಿಢೀರ್ ಸಿದ್ದು ಭೇಟಿಯಾದ ಡಿಕೆಶಿ, ಒಂದೂವರೆ ಗಂಟೆ ರಹಸ್ಯ ಮಾತುಕತೆ..!

BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!