ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

ಶನಿವಾರ, ಸಂಯೋಜಿತ ಕಾರ್ಯಾಚರಣೆಯಲ್ಲಿ ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ಕ್ಷಿಪಣಿಗಳ ಮಳೆಗೈದು ದಾಳಿ ನಡೆಸಿದ್ದು, ಇದರಿಂದ ಇಸ್ಲಾಮಿಕ್ ದೇಶ ಇರಾನ್ ನ ಪರಮೋನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ.

ಆಪರೇಶನ್ ಎಪಿಕ್ ಫ್ಯೂರಿ ಪ್ರಾರಂಭವಾದ ನಂತರ ದೇಶವನ್ನು ಉದ್ದೇಶಿಸಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನ ಅಣು ಅಭಿವೃದ್ಧಿ ಹಾಗೂ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ತಡೆಯುವ ಉದ್ದೇಶದಿಂದ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ಸೈನ್ಯಕ್ಕೆ ಆದೇಶ ನೀಡಿದ್ದಾಗಿ ತಿಳಿಸಿದ್ದಾರೆ.

ಶನಿವಾರ, ಸಂಯೋಜಿತ ಕಾರ್ಯಾಚರಣೆಯಲ್ಲಿ ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ಕ್ಷಿಪಣಿಗಳ ಮಳೆಗೈದು ದಾಳಿ ನಡೆಸಿದ್ದು, ಇದರಿಂದ ಇಸ್ಲಾಮಿಕ್ ದೇಶ ಇರಾನ್ ನ ಪರಮೋನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಸೌದಿ ಅರೇಬಿಯಾ ಮತ್ತು ಸೈಪ್ರಸ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿತು.


ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮುಖ್ಯ ಕಾರಣ ಇರಾನ್ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದು ಮತ್ತು ಅದರ ದೀರ್ಘ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯನ್ನು ಅಡ್ಡಿಪಡಿಸುವುದಾಗಿತ್ತು ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಾಳಿ ಮಾಡದೇ ಹೋಗಿದ್ದರೆ ಇರಾನ್‌ಗೆ ಅಮೆರಿಕದವರೆಗೆ ತಲುಪುವ ಅಣು ಸಾಮರ್ಥ್ಯ ಉಂಟಾಗುತ್ತಿತ್ತು ಎಂದು ಅವರು ಕಾರ್ಯಾಚರಣೆಯ ಕುರಿತು ಮಾತನಾಡುತ್ತಾ ಹೇಳಿದರು.

ಇರಾನ್ ವಿರುದ್ಧದ ಕಾರ್ಯಾಚರಣೆಗಳು ನಾಲ್ಕರಿಂದ ಐದು ವಾರಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ, ಅದಕ್ಕಿಂತಲೂ ಹೆಚ್ಚು ಕಾಲ ಮುಂದುವರಿಸಲು ನಾನು ಸಿದ್ಧನಿದ್ದೇನೆ ಎಂದು ಟ್ರಂಪ್ ಹೇಳಿದರು. ಇರಾನ್ ಮೇಲೆ ದಾಳಿ ನಡೆಸಲು ಇದು ತಮ್ಮ ಅತ್ಯುತ್ತಮ ಅವಕಾಶ ಎಂದು ವ್ಯಾಖ್ಯಾನಿಸಿದರು.

ಈ ರೋಗಗ್ರಸ್ತ ಮತ್ತು ದುಷ್ಟ ಆಡಳಿತದಿಂದ ಉಂಟಾಗಿರುವ ಅಸಹನೀಯ ಬೆದರಿಕೆಗಳನ್ನು ನಿರ್ಮೂಲ ಮಾಡಲು ಈಗ ನಾವು ಮಾಡುತ್ತಿರುವುದು ನಮ್ಮ ಕೊನೆಯ ಮತ್ತು ಅತ್ಯುತ್ತಮ ಅವಕಾಶ ಎಂದು ಟ್ರಂಪ್ ಹೇಳಿದರು. ಅಮೆರಿಕವು 10 ಇರಾನ್ ಹಡಗುಗಳನ್ನು ನಾಶಮಾಡಿದೆ, ಈ ಅಭಿಯಾನ ಉತ್ತಮವಾಗಿ ಸಾಗುತ್ತಿದೆ ಎಂದು ವಿಶ್ವಾಸದಿಂದ ನುಡಿದರು.

ಇಂದು ಅಮೆರಿಕದ ಸೈನ್ಯವು ಈ ಭಯಾನಕ ಉಗ್ರ ಆಡಳಿತದಿಂದ ಅಮೆರಿಕಕ್ಕೆ ಉಂಟಾಗಿರುವ ಗಂಭೀರ ಬೆದರಿಕೆಗಳನ್ನು ನಿವಾರಿಸಲು ಇರಾನ್‌ನಲ್ಲಿ ವಿಶಾಲ ಪ್ರಮಾಣದ ಯುದ್ಧ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿದೆ ಎಂದು ಟ್ರಂಪ್ ಹೇಳಿದರು.

ಯುದ್ಧದ ಉದ್ದೇಶಗಳಲ್ಲಿ ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ನಾಶಮಾಡುವುದು, ಅವರ ನೌಕಾಪಡೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು ಹಾಗೂ ಅವರಿಗೆ ಅಣ್ವಸ್ತ್ರ ಹೊಂದುವುದನ್ನು ತಡೆಯುವುದು ಸೇರಿವೆ. ಈ ಪ್ರದೇಶದ ಇತರೆ ಭಾಗಗಳಲ್ಲಿ ಸಶಸ್ತ್ರ ಗುಂಪುಗಳಿಗೆ ಇರಾನ್ ಬೆಂಬಲ ನೀಡುವುದನ್ನು ತಡೆಯುವುದೂ ಅಮೆರಿಕದ ದೀರ್ಘಕಾಲೀನ ಗುರಿಯಾಗಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ವಿವಾದ: ‘Cockroach Janta Party’ ಪ್ರತಿಭಟನೆಗೆ ಭಾರೀ ಬೆಂಬಲ; ಜಂತರ್ ಮಂತರ್‌ನಲ್ಲಿ ನೂರಾರು ವಿದ್ಯಾರ್ಥಿಗಳ ಧರಣಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’, ಸುಳ್ಳು ಪ್ರಚಾರದಿಂದ ಸತ್ಯ ಬದಲಾಗದು: ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಗುಡುಗಿದ ಭಾರತ

US-Iran war: ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ ಹೆಚ್ಚಳ..!

Mango Pachcha Movie Review: ದುಡ್ಡಿನ ಹಿಂದೆ ಓಡಿ ಡ್ರಗ್ಸ್ ದಂಧೆಗಿಳಿಯುವ ಪ್ರಶಾಂತ್: ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ ಸಂಚಿತ್; ಮಾಸ್ ಹೀರೋಗಳ ಸಾಲಿನಲ್ಲಿ ಕಿಚ್ಚನ ಅಳಿಯ ಪಚ್ಚ!

ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ ಸಂಧಾನ ಯಶಸ್ವಿ?: ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ..!

SCROLL FOR NEXT