ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ವಾಷಿಂಗ್ಟನ್‌ನ ಪೆಂಟಗನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  
ವಿದೇಶ

'ಯುದ್ಧ ಆರಂಭಿಸಿದ್ದು ಇರಾನ್, ನಾವಲ್ಲ, ಸಂಘರ್ಷವನ್ನು Donald Trump ಅಂತ್ಯಗೊಳಿಸುತ್ತಾರೆ': ಅಮೆರಿಕ

ಈ ದಾಳಿಯ ಉದ್ದೇಶ ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಧ್ವಂಸಗೊಳಿಸುವುದು ಮತ್ತು 1979ರ ಕ್ರಾಂತಿಯ ಬಳಿಕ ಅಧಿಕಾರಕ್ಕೆ ಬಂದ ಇಸ್ಲಾಮಿಕ್ ಆಡಳಿತವನ್ನು ಪತನಗೊಳಿಸುವುದಾಗಿದೆ ಎಂದು ಅವರು ತಿಳಿಸಿದರು.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಸೋಮವಾರ ಇರಾನ್‌ನೊಂದಿಗೆ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಕುರಿತು ಅಮೆರಿಕಾದ ಉದ್ದೇಶಗಳನ್ನು ವಿವರಿಸಿದರು. ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ನಾವು ಇದನ್ನು ಅಂತ್ಯಗೊಳಿಸುತ್ತೇವೆಎಂದು ಹೇಳಿದರು.

ಬಾಂಬ್ ದಾಳಿ ಆರಂಭವಾದ ತಕ್ಷಣ, ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಎಂಟು ನಿಮಿಷಗಳ ವೀಡಿಯೊ ಸಂದೇಶವನ್ನು ಹಂಚಿಕೊಂಡು, ಅಮೆರಿಕವು ಇರಾನ್ ವಿರುದ್ಧ ವಿಶಾಲ ಮತ್ತು ಮುಂದುವರಿಯುತ್ತಿರುವ ದಾಳಿಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಈ ದಾಳಿಯ ಉದ್ದೇಶ ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಧ್ವಂಸಗೊಳಿಸುವುದು ಮತ್ತು 1979ರ ಕ್ರಾಂತಿಯ ಬಳಿಕ ಅಧಿಕಾರಕ್ಕೆ ಬಂದ ಇಸ್ಲಾಮಿಕ್ ಆಡಳಿತವನ್ನು ಪತನಗೊಳಿಸುವುದಾಗಿದೆ ಎಂದು ಅವರು ತಿಳಿಸಿದರು.

ಪೆಂಟಗನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಗ್ಸೆತ್, ‘ಆಪರೇಶನ್ ಎಪಿಕ್ ಫ್ಯೂರಿ’ ಎಂದು ಕರೆಯಲ್ಪಡುವ ಈ ಸೈನಿಕ ಕಾರ್ಯಾಚರಣೆ ಆಡಳಿತ ಬದಲಾವಣೆ ಅಥವಾ ರಾಷ್ಟ್ರ ನಿರ್ಮಾಣಕ್ಕಾಗಿ ಅಲ್ಲ, ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ನೌಕಾಪಡೆ ಸಂಪತ್ತುಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ಟೆಹ್ರಾನ್ ಅಣ್ವಸ್ತ್ರಗಳನ್ನು ಪಡೆಯುವುದನ್ನು ತಡೆಯುವುದೇ ಗುರಿ ಎಂದು ಸ್ಪಷ್ಟಪಡಿಸಿದರು.

ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಅಧ್ಯಕ್ಷ ಟ್ರಂಪ್ ಅವರ ಅಧೀನದಲ್ಲಿ ಇದನ್ನು ಅಂತ್ಯಗೊಳಿಸುತ್ತೇವೆ ಎಂದು ಹೆಗ್ಸೆತ್ ಹೇಳಿದರು.

ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯ ಬಳಿಕ, ಇರಾನ್ ಜನತೆ ಬದಲಾವಣೆಗೆ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಇರಾನ್ ಜನರು ಈ ಅದ್ಭುತ ಅವಕಾಶವನ್ನು ಬಳಸಿಕೊಳ್ಳಲಿ ಎಂದು ನಾವು ಆಶಿಸುತ್ತೇವೆ. ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ, ಇದು ನಿಮ್ಮ ಸಮಯ ಎಂದು ಹೆಗ್ಸೆತ್ ಹೇಳಿದರು.

ಅಮೆರಿಕದ ಮಿಷನ್ ಸ್ಪಷ್ಟ ಮತ್ತು ನಿರ್ಣಾಯಕವಾಗಿದೆ, ನಮ್ಮ ಗುರಿ ಇರಾನ್‌ನ ಕ್ಷಿಪಣಿಗಳನ್ನು, ನೌಕಾಪಡೆಯನ್ನು ನಾಶಮಾಡುವುದು ಮತ್ತು ಟೆಹ್ರಾನ್‌ಗೆ ಅಣ್ವಸ್ತ್ರಗಳನ್ನು ನಿರಾಕರಿಸುವುದು. ನಾವು ನಿಖರತೆಯಿಂದ ಭಾರೀ ಪ್ರಮಾಣದಲ್ಲಿ ಮತ್ತು ನಿರ್ಭಯವಾಗಿ ದಾಳಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಹೆಗ್ಸೆತ್ ಈ ಕಾರ್ಯಾಚರಣೆಯನ್ನು ಮಧ್ಯಪ್ರಾಚ್ಯದಲ್ಲಿನ ಹಿಂದಿನ ಅಮೆರಿಕದ ಯುದ್ಧಗಳಿಂದ ವಿಭಿನ್ನವೆಂದು ವಿವರಿಸಿದರು. ಇದು ಇರಾಕ್ ಅಲ್ಲ. ಇದು ಅಂತ್ಯವಿಲ್ಲದ ಯುದ್ಧವೂ ಅಲ್ಲ ಎಂದು ಹೇಳಿದರು. ಹಿಂದಿನ ಸಂಘರ್ಷಗಳ ನಂತರ ನಡೆದ ರಾಷ್ಟ್ರ ನಿರ್ಮಾಣ ಗೊಂದಲಗಳನ್ನು ತಪ್ಪಿಸಲಾಗುತ್ತದೆ ಎಂದು ಅವರು ಹೇಳಿದರು. ಇದು ಅದರ ವಿರುದ್ಧ — ಸ್ಪಷ್ಟ, ವಿನಾಶಕಾರಿ ಮತ್ತು ನಿರ್ಣಾಯಕ ಮಿಷನ್: ಕ್ಷಿಪಣಿ ಬೆದರಿಕೆಯನ್ನು ನಾಶಮಾಡಿ, ನೌಕಾಪಡೆಯನ್ನು ಧ್ವಂಸಗೊಳಿಸಿ, ಅಣ್ವಸ್ತ್ರಗಳಿಗೆ ಅವಕಾಶ ಕೊಡಬೇಡಿ ಎಂದರು.

ಸೈನಿಕ ಕಾರ್ಯಾಚರಣೆಗೆ ಮಾನವೀಯ ಬೆಲೆ ಕಟ್ಟಬೇಕಾಗುತ್ತದೆ ಎಂಬುದನ್ನೂ ಅವರು ಒಪ್ಪಿಕೊಂಡರು. ಇರಾನ್ ಕಾರ್ಯಾಚರಣೆಯಲ್ಲಿ ಹಾನಿಗಳು ಸಂಭವಿಸಬಹುದು ಎಂದರು.

ಯುದ್ಧದ ಸ್ವರೂಪದ ಬಗ್ಗೆ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಹೆಗ್ಸೆತ್, ಈ ಕಾರ್ಯಾಚರಣೆ ಇರಾನ್‌ನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ನಿರ್ಮಾಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. “ಯಾವ ಮೂರ್ಖ ನಿಯಮಗಳೂ ಇಲ್ಲ, ರಾಷ್ಟ್ರ ನಿರ್ಮಾಣದ ಗೊಂದಲವೂ ಇಲ್ಲ, ಪ್ರಜಾಸತ್ತಾತ್ಮಕ ಅಭ್ಯಾಸವೂ ಇಲ್ಲ. ರಾಜಕೀಯವಾಗಿ ಸರಿಯಾದ ಯುದ್ಧಗಳಿಲ್ಲ. ನಾವು ಗೆಲ್ಲಲು ಹೋರಾಡುತ್ತೇವೆ; ಸಮಯ ಮತ್ತು ಜೀವಗಳನ್ನು ವ್ಯರ್ಥ ಮಾಡಲ್ಲ ಎಂದರು.

ಇರಾನ್‌ನಿಂದ ಅಮೆರಿಕದ ಮೇಲೆ ದೀರ್ಘಕಾಲದ ದಾಳಿಗಳು ನಡೆದಿದ್ದು, ಅದು ಅಮೆರಿಕ ವಿರುದ್ಧ ಏಕಪಕ್ಷೀಯ ಯುದ್ಧವನ್ನೇ ನಡೆಸಿದಂತಾಗಿದೆ. ಪ್ರಸ್ತುತ ಕಾರ್ಯಾಚರಣೆಗಳು ಅಮೆರಿಕ ಮತ್ತು ಅದರ ಮಿತ್ರರ ಹಿತಾಸಕ್ತಿಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕೃತವಾಗಿವೆ ಎಂದರು.

2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ, ಟ್ರಂಪ್ ಜಾಗತಿಕ ಸಂಘರ್ಷಗಳನ್ನು ಅಂತ್ಯಗೊಳಿಸಲು ತಮ್ಮ ಮಾತುಕತೆ ಕೌಶಲ್ಯಗಳನ್ನು ಬಳಸುವುದಾಗಿ ಹೇಳಿದ್ದರು. 2024ರ ನವೆಂಬರ್‌ನಲ್ಲಿ ನಡೆದ ವಿಜಯ ಭಾಷಣದಲ್ಲಿ, ನಾನು ಯುದ್ಧವನ್ನು ಆರಂಭಿಸುವುದಿಲ್ಲ. ನಾನು ಯುದ್ಧಗಳನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

US-Israel-Iran War: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ; ಕೇಂದ್ರ ಸರ್ಕಾರ ಭರವಸೆ

West Asia conflict: ಇರಾನ್ ಮೇಲಿನ ಯುದ್ಧ ಇನ್ನು 4-5 ವಾರಗಳ ಕಾಲ ನಡೆಯಲಿದೆ- ಡೊನಾಲ್ಡ್ ಟ್ರಂಪ್

ಇದು ಅಂತ್ಯವಿಲ್ಲದ ಯುದ್ಧವಲ್ಲ; ಯುದ್ಧ ಶುರು ಮಾಡಿದ್ದು ಇರಾನ್, ನಾವು ಮುಗಿಸುತ್ತೇವೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ!

SCROLL FOR NEXT