ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ 
ವಿದೇಶ

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

ಇರಾನ್‌ನ ಹೊಸ ಸರ್ವೋಚ್ಛ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಸೇರಿದ್ದ ಕಟ್ಟಡವನ್ನು ಮಂಗಳವಾರ ಇಸ್ರೇಲ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ದುಬೈ: ಇರಾನ್ ದೇಶದ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ಯಾರನ್ನೇ ಆಯ್ಕೆ ಮಾಡಿದರೂ ಅವರನ್ನು ನಾವು ನಿರ್ಮೂಲನೆ ಮಾಡುತ್ತೇವೆ ಎಂದು ಬುಧವಾರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದಾರೆ.

ಇಸ್ರೇಲ್ ಕಾಟ್ಜ್ X ನಲ್ಲಿ ಹೇಳಿಕೆ ನೀಡಿದ್ದು, 'ಇಸ್ರೇಲ್ ಅನ್ನು ನಾಶಮಾಡಲು ಪ್ರಯತ್ನಿಸುವುದು, ಅಮೆರಿಕ ಮತ್ತು ಇತರ ದೇಶಗಳಿಗೆ ಬೆದರಿಕೆ ಒಡ್ಡುವ ಅಥವಾ ಇರಾನಿನ ಜನರನ್ನು ದಮನಿಸುವ ಕಾರ್ಯವನ್ನು ಮುಂದುವರಿಸುವ ಇರಾನ್‌ನ ಭಯೋತ್ಪಾದಕ ಸರ್ಕಾರವು ಯಾರನ್ನೇ ತನ್ನ ಮುಂದಿನ ಸರ್ವೋಚ್ಛ ನಾಯಕನನ್ನಾಗಿ ನೇಮಿಸಿದರೂ, ಅವರು ನಿರ್ಮೂಲನೆಗೆ ಗುರಿಯಾಗುತ್ತಾರೆ' ಎಂದು ಅವರು ಬರೆದಿದ್ದಾರೆ.

'ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲಿಯೇ ಅಡಗಿರಲಿ, ಅವನನ್ನು ಹೊಡೆದು ಉರುಳಿಸುತ್ತೇವೆ' ಎಂದಿದ್ದಾರೆ.

''ಲಯನ್ಸ್ ರೋರ್' ಎಂಬ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಯಾವುದೇ ಅಗತ್ಯ ವಿಧಾನಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲು ಎಲ್ಲ ರೀತಿಯಿಂದಲೂ ಸಿದ್ಧತೆ ಮತ್ತು ಕಾರ್ಯನಿರ್ವಹಿಸುವಂತೆ ಪ್ರಧಾನ ಮಂತ್ರಿ ಮತ್ತು ನಾನು ಐಡಿಎಫ್‌ಗೆ (ಇಸ್ರೇಲ್ ರಕ್ಷಣಾ ಪಡೆಗಳು) ಸೂಚನೆ ನೀಡಿದ್ದೇವೆ' ಎಂದಿದ್ದಾರೆ.

ಮುಂದುವರಿದು, ಇರಾನ್ ಸರ್ಕಾರದ ಮಿಲಿಟರಿ ಮತ್ತು ಕಾರ್ಯತಂತ್ರದ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವುದು ಅಥವಾ ನಾಶಮಾಡಲು, ಇರಾನಿನ ಜನರು ತಮ್ಮ ಸದ್ಯದ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ಬದಲಾಯಿಸಲು ಅನುವು ಮಾಡಿಕೊಡುವ ಪರಿಸ್ಥಿತಿಗಳನ್ನು ಸೃಷ್ಟಿಸಲು ನಾವು ಅಮೆರಿಕನ್ ಪಾಲುದಾರರೊಂದಿಗೆ ಪೂರ್ಣ ಬಲದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.

ಇರಾನ್‌ನ ಹೊಸ ಸರ್ವೋಚ್ಛ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಸೇರಿದ್ದ ಕಟ್ಟಡವನ್ನು ಮಂಗಳವಾರ ಇಸ್ರೇಲ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಸಭೆಯಲ್ಲಿ 88 ಹಿರಿಯ ಧಾರ್ಮಿಕ ಮುಖಂಡರು ಇದ್ದರು ಎನ್ನಲಾಗಿದೆ.

ಕಳೆದ ಶನಿವಾರ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕರಾಗಿದ್ದ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ನಂತರ ಪ್ರತೀಕಾರವಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel