ಕ್ಷಿಪಣಿ ದಾಳಿಯಿಂದ ದೊಡ್ಡ ಹೊಗೆ ಆವರಿಸಿರುವ ಚಿತ್ರ 
ವಿದೇಶ

ಇರಾನ್‌ನೊಂದಿಗಿನ ಯುದ್ಧ: ಇಸ್ರೇಲ್‌ಗೆ ಭಾರಿ ಆರ್ಥಿಕ ನಷ್ಟ; ವಾರಕ್ಕೆ $3 ಬಿಲಿಯನ್ ವೆಚ್ಚ!

ಸುರಕ್ಷತಾ ಪರಿಸ್ಥಿತಿಗೆ ಹೊಂದಿಕೊಳ್ಳುವ ರಕ್ಷಣಾ ನೀತಿಯನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಇದೇ ವೇಳೆ ಆರ್ಥಿಕತೆ ಬಂದ್ ನಿಂದಾಗಿ ಭಾರೀ ಆರ್ಥಿಕ ವೆಚ್ಚವನ್ನು ಹೊಂದಿದೆ" ಎಂದು ರೋಮ್ ಎಚ್ಚರಿಸಿದ್ದಾರೆ.

ಜೆರುಸೆಲೆಂ: ಇರಾನ್‌ನೊಂದಿಗೆ ಸದ್ಯ ನಡೆಯುತ್ತಿರುವ ಯುದ್ಧದಿಂದ ಪ್ರಸ್ತುತ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧ ಹೇರಲಾಗಿರುವ ಇಸ್ರೇಲ್‌ಗೆ ವಾರಕ್ಕೆ ಅಂದಾಜು NIS 9.4 ಶತಕೋಟಿ (ಸುಮಾರು 3 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಬಹುದು ಎಂದು ಇಸ್ರೇಲಿ ಹಣಕಾಸು ಸಚಿವಾಲಯ ಎಚ್ಚರಿಸಿದೆ.

ಹಣಕಾಸು ಸಚಿವಾಲಯದ ಮಹಾನಿರ್ದೇಶಕ ಇಲಾನ್ ರೋಮ್ ಅವರು ಗುರುವಾರ ಹೋಮ್ ಫ್ರಂಟ್ ಕಮಾಂಡ್ ಮುಖ್ಯಸ್ಥ, ಮೇಜರ್ ಜನರಲ್ ಶಾಯ್ ಕ್ಲಾಪ್ಪರ್ ಅವರಿಗೆ ಕಳುಹಿಸಲಾದ ಪತ್ರದಲ್ಲಿ ಹೀಗೆ ಎಚ್ಚರಿಕೆ ನೀಡಿದ್ದು, ವ್ಯವಹಾರಗಳು ಮತ್ತು ಕೆಲಸದ ಸ್ಥಳಗಳನ್ನು ಕ್ರಮೇಣವಾಗಿ, ಭಾಗಶಃ ಅಥವಾ ಪುನರ್ ತೆರೆಯಲು ಅನುಮತಿಸಲು ನಿರ್ಬಂಧಗಳನ್ನು ಸರಾಗಗೊಳಿಸುವಂತೆ ಕೇಳಿಕೊಂಡಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಸುರಕ್ಷತಾ ಪರಿಸ್ಥಿತಿಗೆ ಹೊಂದಿಕೊಳ್ಳುವ ರಕ್ಷಣಾ ನೀತಿಯನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಇದೇ ವೇಳೆ ಆರ್ಥಿಕತೆ ಬಂದ್ ನಿಂದಾಗಿ ಭಾರೀ ಆರ್ಥಿಕ ವೆಚ್ಚವನ್ನು ಹೊಂದಿದೆ" ಎಂದು ರೋಮ್ ಎಚ್ಚರಿಸಿದ್ದಾರೆ.

ಭದ್ರತೆಯ ಅಗತ್ಯತೆಗಳ ಹೆಚ್ಚಳ ಮತ್ತು ಯುದ್ಧದ ಪರಿಣಾಮಗಳ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳ ನಂತರ ಭಾರಿ ಪಾವತಿಯ ನಂತ ಹೋಮ್ ಫ್ರಂಟ್ ಮತ್ತು ಆರ್ಥಿಕತೆಯ ಅಗತ್ಯತೆಗಳೆರಡನ್ನೂ ಪರಿಹರಿಸುವ ಪರಿಹಾರದ ಅಗತ್ಯವಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಕಾರ್ಯನಿರ್ವಾಹಕ ವರದಿ ಮಾಡಿದೆ.

ಇಸ್ರೇಲ್ ಮತ್ತು ಯುಎಸ್ ಶನಿವಾರ ಬೆಳಿಗ್ಗೆ ಇರಾನ್ ವಿರುದ್ಧ ಜಂಟಿ ಆಕ್ರಮಣವನ್ನು ಪ್ರಾರಂಭಿಸಿದ ಕೂಡಲೇ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಹೋಮ್ ಫ್ರಂಟ್ ಕಮಾಂಡ್ ಅಗತ್ಯ ವ್ಯವಹಾರಗಳನ್ನು ಹೊರತುಪಡಿಸಿ ಎಲ್ಲಾ ಸಭೆಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ಕೆಲಸದ ಸ್ಥಳಗಳನ್ನು ರಾಷ್ಟ್ರವ್ಯಾಪಿ ನಿಷೇಧಿಸುವ ಮಾರ್ಗಸೂಚಿಗಳನ್ನು ಹೊರಡಿಸಿತು.

ಈ ಮಾರ್ಗಸೂಚಿಯಲ್ಲಿ ಕೆಲಸಕ್ಕೆ ಪ್ರಯಾಣವನ್ನು ಮಿತಿಗೊಳಿಸಿದ್ದು, ಮನೆಯಿಂದ ಕೆಲಸವನ್ನು ಪ್ರೋತ್ಸಾಹಿಸಲಾಗಿದೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚಿಸಿವೆ. ಸೋಮವಾರ, ಇರಾನ್‌ನೊಂದಿಗಿನ ಸಂಘರ್ಷದ ಮಧ್ಯೆ ಹೋಮ್ ಫ್ರಂಟ್ ಕಮಾಂಡ್ ಶನಿವಾರ ರಾತ್ರಿಯವರೆಗೆ ರಾಷ್ಟ್ರವ್ಯಾಪಿ ನಿರ್ಬಂಧಗಳನ್ನು ವಿಸ್ತರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂದಿನ ಮೂರು ದಿನಗಳಲ್ಲಿ ಮಾತುಕತೆ: ಡೊನಾಲ್ಡ್ ಟ್ರಂಪ್; ಅಮೆರಿಕವನ್ನು ತುದಿಗಾಲಲ್ಲಿ ನಿಲ್ಲಿಸಿದ ಇರಾನ್!

ಪ್ರಧಾನಿ ಮೋದಿ 'ಟೆರರಿಸ್ಟ್': ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್; 24 ಗಂಟೆ ಗಡುವು!

IPL 2026: RRಗೆ ಸುಲಭದ ತುತ್ತಾದ LSG, ರಿಷಬ್ ಪಂತ್ ಪಡೆಗೆ ಸತತ 4ನೇ ಸೋಲು

ಭಾರತೀಯ ಸೈನಿಕರಿಗೆ ಮತ್ತೊಂದು ಬ್ರಹ್ಮಾಸ್ತ್ರ, Drone war ಗೆಲ್ಲಲು ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ

ಅಮರಾವತಿ ಕಾಮಕಾಂಡ: 180 ಹುಡುಗಿಯರ ಜೊತೆ ಸೆಕ್ಸ್ ಪ್ರಕರಣ; ನಗರದ ರಸ್ತೆಗಳಲ್ಲಿ ಆರೋಪಿ ಅಯಾನ್ ಅಹ್ಮದ್ ಮೆರವಣಿಗೆ, Video!

SCROLL FOR NEXT