ಕುವೈತ್ ನ ವಸತಿ ಕಟ್ಟಡದ ಮೇಲಿನ ದಾಳಿಯಿಂದ ಕಪ್ಪು ಹೊಗೆ ಆವರಿಸಿರುವ ಚಿತ್ರ 
ವಿದೇಶ

ಕುವೈತ್ ನ ವಸತಿ ಕಟ್ಟಡಕ್ಕೆ ಶತ್ರು ರಾಷ್ಟ್ರದಿಂದ ಡ್ರೋನ್ ದಾಳಿ: ಭಾರಿ ಪ್ರಮಾಣದ ಹಾನಿ!

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಕುವೈತ್: ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಯುದ್ಧ 13 ದಿನಕ್ಕೆ ಕಾಲಿಟ್ಟಿರುವಂತೆಯೇ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಸಣ್ಣ ಆದರೆ ಶ್ರೀಮಂತ ಅರಬ್ ದೇಶದ ರಾಜಧಾನಿ ಕುವೈತ್ ನ ವಸತಿ ಕಟ್ಟಡವೊಂದಕ್ಕೆ ಗುರುವಾರ ವೈಮಾನಿಕ ದಾಳಿ ನಡೆದಿದೆ.

ಪರಿಣಾಮ ಭಾರಿ ಪ್ರಮಾಣದ ಸಾವು ನೋವು ಮತ್ತು ನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ. ಇಂದು ಮುಂಜಾನೆ ದಕ್ಷಿಣ ಕುವೈತ್ ನ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಶತ್ರು ರಾಷ್ಟ್ರ ಡ್ರೋನ್ ದಾಳಿ ನಡೆಸಿದೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ದಾಳಿಯಲ್ಲಿ ಕೆಲವರು ಸಾವನ್ನಪ್ಪಿರುವ ಜೊತೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಡ್ರೋನ್‌ನ ಮೂಲದ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಘಟನೆಯಲ್ಲಿ ಡಜನ್ ಗಟ್ಟಲೇ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ CBS ನ್ಯೂಸ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿಗೆ ಆಘಾತ! ಉಪಸಭಾಪತಿ ಎಂ.ಕೆ. ಪ್ರಾಣೇಶ್ ಆಯ್ಕೆ ಅಸಿಂಧು; ಮರು ಎಣಿಕೆಯಲ್ಲಿ ಕಾಂಗೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಜಯಭೇರಿ

ಕಾವೇರಿ ಜಲ ವಿವಾದ: ತಮಿಳುನಾಡು CM Vijay ಭೇಟಿಗೆ ಬ್ರೇಕ್! ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ; Video

ಕಾವೇರಿ ಹೋರಾಟ: 'ಕೈ ಮುಗಿದು ಕೇಳುತ್ತೇನೆ.. ಬಂದ್ ಬೇಡ, ರಾಜ್ಯದ ಹಿತ ಕಾಪಾಡಲು ಎಲ್ಲಾ ಕಾನೂನು ಹೋರಾಟ ನಡೆಸಿದ್ದೇವೆ'; CM ಮನವಿ; Video

CJP ಪ್ರತಿಭಟನಾಕಾರರಿಗೆ AAP ಬೆಂಬಲ; 'ಬಲಪಂಥೀಯ ಗೂಂಡಾಗಳಿಂದ' ರಕ್ಷಣೆ ನೀಡುವ ಭರವಸೆ!

19 ವರ್ಷಗಳ ಬಳಿಕ ಕೋಲ್ಕತ್ತಾಗೆ ಲೇಖಕಿ Taslima Nasrin ಎಂಟ್ರಿ!; ಬಾಂಗ್ಲಾ ತೊರೆಯಲು ಕಾರಣವಾಗಿದ್ದ 'ಲಜ್ಜಾ', Video