ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ 
ವಿದೇಶ

ರಷ್ಯಾದ ತೈಲ ಖರೀದಿಸುವಂತೆ ಭಾರತ ಸೇರಿದಂತೆ ಜಗತ್ತಿಗೆ ಅಮೆರಿಕ ಬೇಡಿಕೊಳ್ಳುತ್ತಿದೆ; ಇದು 'ಚಿಂತಾಜನಕ': ಇರಾನ್ ಸಚಿವ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮೇಲೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಹೊಸ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಒತ್ತಡ ಹೇರಿದ ನಂತರ ಫೆಬ್ರುವರಿ 28 ರಿಂದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದವು.

ದುಬೈ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಬೆದರಿಸಿದ್ದ ಅಮೆರಿಕ, ಇರಾನ್ ಜೊತೆ ಯುದ್ಧ ಮಾಡಿದ ಎರಡು ವಾರಗಳ ನಂತರ, ಇದೀಗ ಮಾಸ್ಕೋದಿಂದ ಕಚ್ಚಾ ತೈಲವನ್ನು ಖರೀದಿಸುವಂತೆ ಭಾರತ ಸೇರಿದಂತೆ ಜಗತ್ತಿಗೆ ಬೇಡಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

'ಹಲವು ತಿಂಗಳುಗಳಿಂದ ಅಮೆರಿಕವು ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸುವಂತೆ ಭಾರತಕ್ಕೆ ಬೆದರಿಕೆಯೊಡ್ಡಿತ್ತು' ಎಂದು ಅರಘ್ಚಿ ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಪೋಸ್ಟ್ ಮಾಡಿದ್ದಾರೆ.

'ಇರಾನ್ ಜೊತೆಗಿನ ಎರಡು ವಾರಗಳ ಯುದ್ಧದ ನಂತರ, ಶ್ವೇತಭವನವು ಈಗ ಭಾರತ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳನ್ನು ರಷ್ಯಾದಿಂದಲೇ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ' ಎಂದು ಅವರು ಹೇಳಿದರು.

ಮಾರ್ಚ್ 5 ರಂದು, ಅಮೆರಿಕ ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿತು. ಉಕ್ರೇನ್‌ನಲ್ಲಿನ ಯುದ್ಧದ ಕಾರಣದಿಂದಾಗಿ ಅಮೆರಿಕವು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರೂ ಸಹ, ಈ ವಿನಾಯಿತಿಯು ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತ್ತು.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಗ್ಗೆ ಯುರೋಪಿನ ನಿಲುವನ್ನು ಟೀಕಿಸಿದ ಸಚಿವರು, ಇರಾನ್ ಮೇಲಿನ ಯುದ್ಧವು 'ಕಾನೂನುಬಾಹಿರ'ವಾಗಿದೆ. ಇರಾನ್ ಮೇಲಿನ ಕಾನೂನುಬಾಹಿರ ಯುದ್ಧವನ್ನು ಬೆಂಬಲಿಸುವುದರಿಂದ ರಷ್ಯಾದ ವಿರುದ್ಧ ಅಮೆರಿಕದ ಬೆಂಬಲ ಸಿಗುತ್ತದೆ ಎಂದು ಯುರೋಪ್ ಭಾವಿಸಿದೆ ಎಂದು ಹೇಳಿದರು.

ರಷ್ಯಾದ ಕಚ್ಚಾ ತೈಲ ಖರೀದಿ ಬಗ್ಗೆ ಟ್ರಂಪ್ ಆಡಳಿತದ ಸದ್ಯದ ನಿಲುವನ್ನು ಅವರು 'ಕರುಣಾಜನಕ' ಎಂದು ಕರೆದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆಹ್ರಾನ್ ಮೇಲೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಹೊಸ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಒತ್ತಡ ಹೇರಿದ ನಂತರ ಫೆಬ್ರುವರಿ 28 ರಿಂದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದವು. ಇದರಿಂದ ಪ್ರತೀಕಾರಕ್ಕೆ ಇರಾನ್‌ ಮುಂದಾಯಿತು. ಆಗ ಇಡೀ ಗಲ್ಫ್ ಪ್ರದೇಶಕ್ಕೆ ಯುದ್ಧದ ಕಿಡಿ ಹಬ್ಬಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಬಳಿಕ ರಾಷ್ಟ್ರಪತಿಗಳ ಭೇಟಿಯಾದ ಅಮಿತ್ ಶಾ; ಹೆಚ್ಚಿದ ಕುತೂಹಲ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ?

ಶತಮಾನದ ಭೀಕರ ಭೂಕಂಪಕ್ಕೆ ನಲುಗಿದ Venezuela: 235 ಮಂದಿ ಸಾವು; ಸಾವಿರಾರು ಜನರು ನಾಪತ್ತೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಯುದ್ಧದಲ್ಲೂ ಮಕ್ಕಳ ರಕ್ಷಣೆ ಅಗತ್ಯ, ಶಾಲೆಗಳ ಗುರಿಯಾಗಿಸುವವರ ವಿರುದ್ಧ ಇಡೀ ವಿಶ್ವ ಒಗ್ಗೂಡಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಆಗ್ರಹ..!

'Happy Birthday... Please Resign'; ಧರ್ಮೇಂದ್ರ ಪ್ರಧಾನ್‌ಗೆ ವಿನೂತನವಾಗಿ ಶುಭ ಹಾರೈಸಿದ Cockroach Janta Party

RSS ಗಲಿಬಿಲಿಗೊಂಡರೆ BJP ಏಕೆ ಬುಸುಗುಡುತ್ತೆ: ಬಾಲ ಯಾರ ಕೈಯ್ಯಲ್ಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ