ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಶರಣಾಗತಿಗೆ ಟ್ರಂಪ್ ಒತ್ತಾಯ: ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಬಗ್ಗೆ ಹೇಳಿದ್ದೇನು?

NBC ನ್ಯೂಸ್‌ಗೆ ನೀಡಿದ 30-ನಿಮಿಷಗಳ ದೂರವಾಣಿ ಸಂದರ್ಶನದಲ್ಲಿ ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಸ್ಪಷ್ಟ ಆಸಕ್ತಿಯ ಹೊರತಾಗಿಯೂ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳಿಂದ ಅತೃಪ್ತರಾಗಿರುವುದಾಗಿ ಟ್ರಂಪ್ ತಿಳಿಸಿದರು.

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದಲ್ಲಿ ತಕ್ಷಣದ ಕದನ ವಿರಾಮದ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಇನ್ನು ಇರಾನ್ ನ ಹೊಸ ಸರ್ವೋಚ್ಚ ನಾಯಕ 'ಜೀವಂತವಾಗಿಲ್ಲ' ಎಂದು ಕೇಳಿದ್ದೇನೆ ಎಂದು ಹೇಳುವ ಮೂಲಕ ಇರಾನ್ 'ಶರಣಾಗತಿ'ಗೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

NBC ನ್ಯೂಸ್‌ಗೆ ನೀಡಿದ 30-ನಿಮಿಷಗಳ ದೂರವಾಣಿ ಸಂದರ್ಶನದಲ್ಲಿ ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಸ್ಪಷ್ಟ ಆಸಕ್ತಿಯ ಹೊರತಾಗಿಯೂ ಸದ್ಯ ನಡೆಯುತ್ತಿರುವ ಪರಿಸ್ಥಿತಿಗಳಿಂದ ಅತೃಪ್ತರಾಗಿರುವುದಾಗಿ ತಿಳಿಸಿದರು.

ಇರಾನ್ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತಿದೆ. ನಿಯಮಗಳು ಇನ್ನೂ ಸಾಕಷ್ಟು ಉತ್ತಮವಾಗಿಲ್ಲದ ಕಾರಣ ನಾನು ಅದನ್ನು ಮಾಡಲು ಬಯಸುವುದಿಲ್ಲ. ಯಾವುದೇ ಭವಿಷ್ಯದ ಒಪ್ಪಂದ ಉತ್ತಮವಾಗಿರಬೇಕು ಎಂದು ಅವರು ಹೇಳಿದರು.

ಶಾಂತಿ ಒಪ್ಪಂದದ ನಿರ್ದಿಷ್ಟ ಅಗತ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಅದನ್ನು ಹೇಳಲು ಬಯಸುವುದಿಲ್ಲ. ಆದಾಗ್ಯೂ, ಅದು ಇರಾನ್ ಪರಮಾಣು ಮಹತ್ವಾಕಾಂಕ್ಷೆಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದ್ಧತೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಅವರು ಒಪ್ಪಿಕೊಂಡರು.

ಇತ್ತೀಚೆಗೆ ತನ್ನ ತಂದೆಯ ಮರಣದ ನಂತರ ಸರ್ವೋಚ್ಚ ನಾಯಕನಾಗಿ ನೇಮಕವಾದ ಮೊಜ್ತಾಬಾ ಖಮೇನಿ ಜೀವಂತವಾಗಿ ಇರುವ ಬಗ್ಗೆ ಟ್ರಂಪ್ ಅನುಮಾನ ವ್ಯಕ್ತಪಡಿಸಿದರು.

ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಖಮೇನಿ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅವರು ಬದುಕಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಇಲ್ಲಿಯವರೆಗೆ, ಯಾರೂ ಕೂಡಾ ಅವರನ್ನು ತೋರಿಸಲು ಸಾಧ್ಯವಾಗಲಿಲ್ಲ. ಅವರು ಜೀವಂತವಾಗಿಲ್ಲ ಎಂಬುದನ್ನು ನಾನು ಕೇಳುತ್ತಿದ್ದೇನೆ ಮತ್ತು ಅವರು ಬದುಕಿದ್ದರೆ, ತನ್ನ ದೇಶಕ್ಕಾಗಿ ಏನಾದರೂ ತುಂಬಾ ಬುದ್ಧಿ ಉಪಯೋಗಿಸಬೇಕು. ಅದು ಶರಣಾಗತಿಯಾಗಿದೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ, ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

SCROLL FOR NEXT