ನಟಾಂಜ್ ಪರಮಾಣು ಸ್ಥಾವರ 
ವಿದೇಶ

ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ; ವಿಕಿರಣ ಸೋರಿಕೆ ಆತಂಕ

ಇಂದು ಬೆಳಗ್ಗೆ ನಟಾಂಜ್‌ನಲ್ಲಿರುವ ಇರಾನ್‌ನ ಪ್ರಮುಖ ಯುರೇನಿಯಂ-ಪುಷ್ಟೀಕರಣ ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ವರದಿ ತಿಳಿಸಿದೆ.

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಭೀಕರ ವೈಮಾನಿಕ ದಾಳಿ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಶನಿವಾರ ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ಸ್ಟೇಟ್ ಮೀಡಿಯಾ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಂದು ಬೆಳಗ್ಗೆ ನಟಾಂಜ್‌ನಲ್ಲಿರುವ ಇರಾನ್‌ನ ಪ್ರಮುಖ ಯುರೇನಿಯಂ-ಪುಷ್ಟೀಕರಣ ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ವರದಿ ತಿಳಿಸಿದೆ.

ಇರಾನ್‌ನ ಅತ್ಯಂತ ಮಹತ್ವದ ಪರಮಾಣು ಸ್ಥಾವರಗಳಲ್ಲಿ ಒಂದಾದ ನಟಾಂಜ್ ಪರಮಾಣು ಸ್ಥಾವರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಸ್ನಿಮ್ ವರದಿ ಮಾಡಿದೆ.

ದಾಳಿಯ ನಂತರ ಯಾವುದೇ ವಿಕಿರಣ ಸೋರಿಕೆ ಪತ್ತೆಯಾಗಿಲ್ಲ ಮತ್ತು ಸ್ಥಾವರದ ಬಳಿ ವಾಸಿಸುವ ನಿವಾಸಿಗಳು ಅಪಾಯದಲ್ಲಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಆದಾಗ್ಯೂ ಸ್ಥಳೀಯ ನಿವಾಸಿಗಳು ವಿಕಿರಣ ಸೋರಿಕೆಯ ಆತಂಕದಲ್ಲಿದ್ದಾರೆ.

ದಾಳಿಗೆ ಒಳಗಾದ ನಟಾಂಜ್ ಪರಮಾಣು ಸ್ಥಾವರ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 220 ಕಿಮೀ ದೂರದಲ್ಲಿದೆ.

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಟಾಂಜ್ ಸೌಲಭ್ಯವನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದ್ದು, ಜೂನ್ 2025 ರ ಇಸ್ರೇಲ್-ಇರಾನ್ 12 ದಿನಗಳ ಯುದ್ಧದ ಸಮಯದಲ್ಲೂ ಇಸ್ರೇಲ್ ಪಡೆಗಳು ಇರಾನಿನ ಮಿಲಿಟರಿ ಮತ್ತು ಪರಮಾಣು ಮೂಲಸೌಕರ್ಯದ ಮೇಲೆ ಸರಣಿ ದಾಳಿ ನಡೆಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಗೆ ಬೆಂಬಲ ನೀಡಲ್ಲ- ಎಡಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್; ನಾವು ಇನ್ನೂ ನಿರ್ಧರಿಸಿಲ್ಲ- ವಿಸಿಕೆ

ವಿಜಯ್ ಸಿಎಂ ಕನಸಿಗೆ ತಣ್ಣೀರು?: ತಮಿಳುನಾಡಿನಲ್ಲಿ ರಾಜಕೀಯ ಸಂಚಲನ, DMK-AIADMK ಮೈತ್ರಿ ಸರ್ಕಾರ ರಚನೆ?

ತಮಿಳುನಾಡು: TVK ಗೆ ಬಹುಮತದ ಕೊರತೆ; ಇಕ್ಕಟ್ಟಿನಲ್ಲಿ ವಿಜಯ್; ರಾಜ್ಯಪಾಲರ ನಡೆ ಏನು?

ಸಚಿನ್, ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಿದ ವೈಭವ್ ಸೂರ್ಯವಂಶಿ: ಹೊಸ ಬ್ಯಾಟ್; ಪ್ರಾಯೋಜಕರು ಯಾರು ಗೊತ್ತಾ?

Video: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೊಲೀಸ್ ಕಮಿಷನರ್; 3 ತಾಸಿನಲ್ಲಿ 40 ಕಾಮುಕರಿಂದ ಕಿರುಕುಳ!

SCROLL FOR NEXT