ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿ ಸಾಂದರ್ಭಿಕ ಚಿತ್ರ 
ವಿದೇಶ

ಈದ್ ಉಲ್-ಫಿತರ್‌ ದಿನವೇ ಜಿರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಲ್-ಅಕ್ಸಾ ಮಸೀದಿ ಬಳಿ ಸ್ಫೋಟ! Video

ಇದೇ ಮುಲ್ಲಾಗಳ ನಿಜವಾದ ಮುಖವಾಗಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಜೆರುಸಲೇಂ: ಈದ್ ಉಲ್-ಫಿತರ್‌ ದಿನವೇ ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್-ಅಕ್ಸಾ ಮಸೀದಿಯಿಂದ ಕೇವಲ ನೂರು ಮೀಟರ್‌ಗಳಷ್ಟು ದೂರದಲ್ಲಿ ಕ್ಷಿಪಣಿ ಬಿದ್ದಿದೆ. ಇದರಿಂದಾಗಿ ನೂರಾರು ಮುಸ್ಲಿಂರು ನಗರದ ಹೊರಗೆ ಪ್ರಾರ್ಥನೆ ಸಲ್ಲಿಸುವಂತಾಯಿತು. ಸುಮಾರು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂರಿಗೆ ಮಸೀದಿ ಬಳಿಗೆ ಪ್ರವೇಶ ನಿರ್ಬಂಧಿಸಲಾಯಿತು.

ಈದ್ ಉಲ್-ಫಿತರ್ ಆಚರಣೆ ವೇಳೆಯಲ್ಲಿ ಇರಾನ್ ಜೆರುಸಲೇಂ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಮುಸ್ಲಿಂ, ಕ್ರಿಶ್ಚಿಯರನ್ನರ್ ಮತ್ತು ಯಹೋದಿಗಳ ಪ್ರಾರ್ಥನಾ ಮಂದಿರದಿಂದ ಕೆಲವೇ ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ ಎಂದು ಇಸ್ರೇಲ್ ತಿಳಿಸಿದೆ.

ಇದೇ ಮುಲ್ಲಾಗಳ ನಿಜವಾದ ಮುಖವಾಗಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ನಾಗರಿಕ ಸ್ಥಳವಾಗಲಿ ಅಥವಾ ಪ್ರಾರ್ಥನಾ ಮಂದಿರಗಳಿರುವ ಪವಿತ್ರ ತಾಣವಾಗಲೀ ಒಟ್ಟಾರೇ ಇಸ್ರೇಲ್ ರಾಷ್ಟ್ರವನ್ನು ನಾಶಪಡಿಸಬೇಕು ಎಂಬ ಇರಾನ್ ಆಡಳಿತದ ಉದ್ದೇಶಕ್ಕೆ ಈ ದಾಳಿಯೇ ಸಾಕ್ಷಿಯಾಗಿದೆ ಎಂದು IDF ಹೇಳಿಕೆಯಲ್ಲಿ ತಿಳಿಸಿದೆ.

ನೂರಾರು ಮುಸ್ಲಿಂ ಆರಾಧಕರು ಉಲ್-ಅಕ್ಸಾ ಮಸೀದಿ ಬಳಿಗೆ ತೆರಳಲು ಸಾಧ್ಯವಾಗಲಿಲ್ಲ. ಇರಾನ್‌ ಜೊತೆಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ಕಾಳಜಿಯಿಂದ ಮಸೀದಿ ಬಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!

ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆ

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

ನಿರಂತರ ಮಳೆಗೆ ಸಿಕ್ಕಿಂ ತತ್ತರ: ರಿಂಬಿ ಗ್ರಾಮದಲ್ಲಿ ಭಾರೀ ಭೂಕುಸಿತ, 30ಕ್ಕೂ ಹೆಚ್ಚು ಮನೆಗಳು ಹಾನಿ, ಸಿಎಂ ತಮಂಗ್ ಹೇಳಿದ್ದೇನು? Video