ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

US-Iran Peace Talks: ಇರಾನ್ ಪ್ರಸ್ತಾವನೆ ಸ್ವೀಕಾರಾರ್ಹವಾಗಿರುತ್ತದೆ ಎಂದೆನಿಸುತ್ತಿಲ್ಲ, ಮರುಪರಿಶೀಲಿಸುತ್ತೇನೆ; ಟ್ರಂಪ್

ಕಳೆದ 47 ವರ್ಷಗಳಲ್ಲಿ ಅವರು ಮಾನವೀಯತೆ ಮತ್ತು ಜಗತ್ತಿಗೆ ಮಾಡಿದ್ದಕ್ಕೆ ಅವರು ಇನ್ನೂ ಸಾಕಷ್ಟು ದೊಡ್ಡ ಬೆಲೆಯನ್ನು ಪಾವತಿಸಿಲ್ಲವಾದ್ದರಿಂದ ಇರಾನ್ ಪ್ರಸ್ತಾವನೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.

ವಾಷಿಂಗ್ಟನ್: ಇರಾನ್ ನೀಡಿದ ಹೊಸ ಶಾಂತಿ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ಇದೇ ವೇಳೆ ಅದರಲ್ಲಿನ ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಏರ್ ಫೋರ್ಸ್ ಒನ್‌ಗೆ ಹತ್ತುವ ಮೊದಲು ಮಾತನಾಡಿದ ಟ್ರಂಪ್ ಅವರು, ಪಾಕಿಸ್ತಾನದ ಮೂಲಕ ಇರಾನ್ ಕಳುಹಿಸಿರುವ 14 ಅಂಶಗಳ ಹೊಸ ಪ್ರಸ್ತಾವನೆಯನ್ನು ಮರು ಪರಿಶೀಲಿಸುತ್ತೇನೆಂದು ಹೇಳಿದ್ದಾರೆ.

ಇರಾನ್‌ನವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ, ಆದರೆ ಸದ್ಯಕ್ಕೆ ಅವರು ನೀಡಿರುವ ಪ್ರಸ್ತಾವನೆಯ ಬಗ್ಗೆ ನನಗೆ ತೃಪ್ತಿಯಿಲ್ಲ. ಅವರು ಕೆಲವು ಅಂತಹ ವಿಷಯಗಳನ್ನು ಕೇಳುತ್ತಿದ್ದಾರೆ, ಅವುಗಳಿಗೆ ನಾನು ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ಪ್ರಸ್ತಾವನೆಯನ್ನು ಶ್ವೇತಭವನ ಪರಿಶೀಲಿಸುತ್ತಿದ್ದು, ನನಗೆ ನಿಖರವಾದ ಪದಗಳನ್ನು ನೀಡಲಿದ್ದಾರೆ. ನಾನು ಅದರ ಬಗ್ಗೆ ನಂತರ ನಿಮಗೆ ತಿಳಿಸುತ್ತೇನೆಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಲ್ಪ ಸಮಯದ ನಂತರ, ಟ್ರಂಪ್ ಅವರು ಇರಾನ್ ಹೊಸ ಪ್ರಸ್ತಾವನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ 47 ವರ್ಷಗಳಲ್ಲಿ ಅವರು ಮಾನವೀಯತೆ ಮತ್ತು ಜಗತ್ತಿಗೆ ಮಾಡಿದ್ದಕ್ಕೆ ಅವರು ಇನ್ನೂ ಸಾಕಷ್ಟು ದೊಡ್ಡ ಬೆಲೆಯನ್ನು ಪಾವತಿಸಿಲ್ಲವಾದ್ದರಿಂದ ಇರಾನ್ ಪ್ರಸ್ತಾವನೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಈ ಹೇಳಿಕೆ ಇದು ಮಾತುಕತೆಗಳ ಬಗ್ಗೆ ಅಮೆರಿಕದ ಕಠಿಣ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪಾಕಿಸ್ತಾನ ಮಧ್ಯಸ್ಥಿಕೆ ಮೂಲಕ ಇರಾನ್ ಅಮೆರಿಕಾಕ್ಕೆ 14 ಅಂಶಗಳ ಹೊಸ ಶಾಂತಿ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ 9 ಅಂಶಗಳ ಯೋಜನೆಗಳನ್ನು ಉತ್ತರವಾಗಿ ನೀಡಿದೆ ಎನ್ನಲಾಗುತ್ತಿದೆ. ಆದರೆ ಇರಾನ್ ಸರ್ಕಾರದ ಅಧಿಕೃತ ಮಾಧ್ಯಮಗಳು ಈ ಕುರಿತು ಯಾವುದೇ ದೃಢೀಕರಣ ನೀಡಿಲ್ಲ. ಪಾಕಿಸ್ತಾನ ಹಿಂದೆಯೂ ಈ ಎರಡು ದೇಶಗಳ ನಡುವೆ ಮಾತುಕತೆಗೆ ವೇದಿಕೆ ಒದಗಿಸಿತ್ತು. ಆದರೆ, ಈ ಮಾತುಕತೆ ಯಶಸ್ವಿಯಾಗಿಲ್ಲ.

ಅಮೆರಿಕವು ಹಾರ್ಮುಜ್ ಜಲಸಂಧಿ ಕುರಿತು ಹೊಸ ಯೋಜನೆಗಳನ್ನು ಮುಂದಿಟ್ಟಿದೆ. ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಭಾಗ ಸಾಗುವ ಈ ಪ್ರಮುಖ ಮಾರ್ಗವನ್ನು ಮರುತೆರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಯುದ್ಧದ ಆರಂಭದ ನಂತರ ಈ ಪ್ರದೇಶದಲ್ಲಿ ಸಾಗಣೆ ತೀವ್ರವಾಗಿ ಅಸ್ಥಿರಗೊಂಡಿದೆ.

ಈ ನಡುವೆ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮತ್ತು ಖ್ಯಾತ ಮಾನವ ಹಕ್ಕುಗಳ ವಕೀಲೆ ನರ್ಗೆಸ್ ಮೊಹಮ್ಮದಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಹೃದಯ ಸಂಬಂಧಿತ ಸಮಸ್ಯೆಯಿಂದ ಅವರನ್ನು ಆಸ್ಪತ್ರೆ ಸೇರಿಸಲಾಗಿದೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಟೆಹ್ರಾನ್‌ಗೆ ಸ್ಥಳಾಂತರಿಸಲು ಇರಾನ್ ಗುಪ್ತಚರ ಇಲಾಖೆ ವಿರೋಧ ವ್ಯಕ್ತಪಡಿಸಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಸುದ್ದಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ನೋಬೆಲ್ ಸಮಿತಿ ಕೂಡ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕೆಂದು ಇರಾನ್ ಸರ್ಕಾರವನ್ನು ಒತ್ತಾಯಿಸಿದೆ.

ಇದರ ಜೊತೆಗೆ, ಅಮೆರಿಕವು ಇರಾನ್ ವಿರುದ್ಧ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ “ಅನಧಿಕೃತ ಪಾವತಿಗಳು” ಮಾಡಬಾರದು ಎಂದು ಶಿಪ್ಪಿಂಗ್ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಡಿಜಿಟಲ್ ಪಾವತಿ, ಮಧ್ಯವರ್ತಿ ವ್ಯವಹಾರಗಳು ಸೇರಿದಂತೆ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳಿಗೂ ನಿರ್ಬಂಧ ಹೇರಲಾಗಿದೆ.

ಅಮೆರಿಕವು ಇರಾನ್ ಬಂದರುಗಳ ಮೇಲೆ ನೌಕಾ ನಿರ್ಬಂಧವನ್ನು ಮುಂದುವರೆಸಿದ್ದು, ತೈಲ ಆದಾಯವನ್ನು ಕಡಿತಗೊಳಿಸುವ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವಾರು ಹಡಗುಗಳಿಗೆ ಹಿಂದಿರುಗಲು ಸೂಚನೆ ನೀಡಲಾಗಿದೆ.

ಈ ಮಧ್ಯೆ ಇರಾನ್‌ನಲ್ಲಿ ಗೂಢಚರ್ಯೆ ಆರೋಪದ ಮೇಲೆ ಇಬ್ಬರನ್ನು ಗಲ್ಲಿಗೇರಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ.

ನ್ಯಾಯಾಂಗದ ಸುದ್ದಿ ಸಂಸ್ಥೆಯಾದ ಮಿಜಾನ್‌ಲೈನ್, ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರಿಗೆ "ಸೂಕ್ಷ್ಮ ಮಾಹಿತಿಯನ್ನು" ಕಳುಹಿಸಿದ ಆರೋಪವನ್ನು ಹೊರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟೆಹ್ರಾನ್ ಶಾಂತಿ ಪ್ರಸ್ತಾವನೆಗೆ ಒಪ್ಪದ ಟ್ರಂಪ್: ಇರಾನ್–ಅಮೆರಿಕ ಸಂಘರ್ಷ ಪುನರಾರಂಭ ಸಾಧ್ಯತೆ, ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ

ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

IPL 2026: ಮುಂಬೈಗೆ ಮತ್ತೆ ಸೋಲು, 8 ವಿಕೆಟ್ ಗಳಿಂದ ಗೆದ್ದು ಬೀಗಿದ CSK!

ಪೊಲೀಸರ ಸಮ್ಮುಖದಲ್ಲೇ ಧಮ್ಕಿ: ಸಾರಾ ಗೋವಿಂದ್ ವಿರುದ್ಧ ಚೇತನ್ ಅಹಿಂಸಾ ದೂರು, FIR ದಾಖಲು!

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

SCROLL FOR NEXT