ಉದ್ಯಮಿಯ ತಿಂದು ತೇಗಿದ ಮೊಸಳೆ 
ವಿದೇಶ

Video: ಉದ್ಯಮಿಯ ತಿಂದು ತೇಗಿದ 15 ಅಡಿ ಉದ್ದದ ಬೃಹತ್ ಮೊಸಳೆ; ಗುಂಡೇಟು, ಏರ್ ಲಿಫ್ಟ್ ಮೂಲಕ ನೀರಿನಿಂದ ಹೊರಕ್ಕೆ!

ಮೃತ ವ್ಯಕ್ತಿಯನ್ನು 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಎಂದು ಗುರುತಿಸಲಾಗಿದೆ. ಅವರನ್ನು ಕೊಂದು ತಿಂದ ಬಳಿಕ ನೀರಿನಲ್ಲಿ ಅವಿತಿತ್ತು.

ಕೇಪ್ಟೌನ್: ಸುಮಾರು 59 ವರ್ಷದ ಉದ್ಯಮಿಯನ್ನು ತಿಂದು ತೇಗಿದ್ದ ಬರೊಬ್ಬರಿ 15 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗುಂಡಿಟ್ಟು ಕೊಂದು ನೀರಿನಿಂದ ಹೊರಕ್ಕೆ ಏರ್ ಲಿಫ್ಟ್ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಎಂದು ಗುರುತಿಸಲಾಗಿದೆ. ಅವರನ್ನು ಕೊಂದು ತಿಂದ ಬಳಿಕ ನೀರಿನಲ್ಲಿ ಅವಿತಿತ್ತು. ರಕ್ಷಣಾ ಸಿಬ್ಬಂದಿಗಳು ಅದನ್ನು ಗುಂಡಿಕ್ಕಿ ಕೊಂದು ಏರ್ ಲಿಫ್ಟ್ ಮೂಲಕ ಹೊರಗೆಳೆದು ಅದರ ಹೊಟ್ಟೆಯಲ್ಲಿದ್ದ ಮನುಷ್ಯನ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇ 2, 2026 ರಂದು ನಡೆದ ರೋಚಕ ಕಾರ್ಯಾಚರಣೆಯಲ್ಲಿ, ಪೊಲೀಸರು ಸುಮಾರು 4.5 ಮೀಟರ್ ಉದ್ದದ ಮತ್ತು ಬರೊಬ್ಬರಿ 500 ಕೆಜಿ ತೂಕದ ಬೃಹತ್ ಮೊಸಳೆಯನ್ನು ಕೋಮತಿ ನದಿಯಿಂದ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಿದರು.

ಆ ಮೊಸಳೆಯ ಹೊಟ್ಟೆಯಲ್ಲಿ ಮನುಷ್ಯನ ದೇಹದ ಭಾಗಗಳು ಪತ್ತೆಯಾಗಿವೆ. ಈ ಅವಶೇಷಗಳು ಗೌಟೆಂಗ್‌ನ ವಂಡರ್‌ಬೈಲ್‌ಪಾರ್ಕ್‌ನ 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರಿಗೆ ಸೇರಿದ್ದು ಎಂದು ಶಂಕಿಸಲಾಗಿದೆ.

ಆಗಿದ್ದೇನು?

ಇದೇ ಏಪ್ರಿಲ್ 28, 2026 ರಂದು ಸುರಿದ ಭಾರಿ ಮಳೆಯಿಂದಾಗಿ, ಕೊಮಟಿಪೂರ್ಟ್ ಬಳಿಯ ಸೇತುವೆಯ ಮೇಲೆ ಬಟಿಸ್ಟಾ ಅವರ ಕಾರು ನೀರಿನಲ್ಲಿ ಕೊಚ್ಚಿಹೋಗಿತ್ತು. ಅಂದಿನಿಂದ ಅವರು ನಾಪತ್ತೆಯಾಗಿದ್ದರು. ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾಗ, ಅಸಹಜವಾಗಿ ಉಬ್ಬಿದ ಹೊಟ್ಟೆಯನ್ನು ಹೊಂದಿದ್ದ ಈ ಬೃಹತ್ ಮೊಸಳೆ ಅಧಿಕಾರಿಗಳ ಕಣ್ಣಿಗೆ ಬಿದ್ದಿತು.

ಮೊಸಳೆಯನ್ನು ಸೆರೆಹಿಡಿದು ಗುಂಡಿಟ್ಟು ಕೊಂದ ನಂತರ, ಕ್ಯಾಪ್ಟನ್ ಜೋಹಾನ್ ಪೋಟ್ಗೈಟರ್ ಅವರು ಹೆಲಿಕಾಪ್ಟರ್‌ನಿಂದ ನದಿಗೆ ಇಳಿದು, ಹಗ್ಗಗಳ ಸಹಾಯದಿಂದ ಮೊಸಳೆಯನ್ನು ಕಟ್ಟಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಾಗಿಸಿದರು.

ಮೊಸಳೆ ಹೊಟ್ಟೆಯಲ್ಲಿ ಉದ್ಯಮಿ ದೇಹ

ಮೊಸಳೆಯ ಹೊಟ್ಟೆಯನ್ನು ಪರೀಕ್ಷಿಸಿದಾಗ ಮನುಷ್ಯನ ಪಕ್ಕೆಲುಬುಗಳು, ಎರಡು ಕೈಗಳು ಮತ್ತು ಎದೆಯ ಭಾಗದ ಮಾಂಸ ಪತ್ತೆಯಾಗಿವೆ. ಇದರೊಂದಿಗೆ ಬಟ್ಟೆ ಮತ್ತು ಒಂದು ಉಂಗುರ ಕೂಡ ಸಿಕ್ಕಿವೆ. ಈ ದೇಹದ ಭಾಗಗಳು ಬಟಿಸ್ಟಾ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಈಗ DNA ಪರೀಕ್ಷೆ ನಡೆಸಲಾಗುತ್ತಿದೆ.

ಅವರು ಬದುಕಿದ್ದಾಗಲೇ ಮೊಸಳೆ ದಾಳಿ ಮಾಡಿದೆಯೇ ಅಥವಾ ನೀರಿನಲ್ಲಿ ಮುಳುಗಿ ಮೃತಪಟ್ಟ ನಂತರ ಮೊಸಳೆ ಅವರ ದೇಹವನ್ನು ತಿಂದಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!