ಉಪೇಂದ್ರ ದ್ವಿವೇದಿ-ಆಸಿಮ್ ಮುನೀರ್ TNIE
ವಿದೇಶ

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೇ ಪಾಕಿಸ್ತಾನ ಇತಿಹಾಸ ಸೇರಬೇಕಾಗುತ್ತದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರ ಕಠಿಣ ಎಚ್ಚರಿಕೆಗೆ ಪಾಕಿಸ್ತಾನ ಕೆರಳಿದೆ.

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸದಿದ್ದರೇ ಪಾಕಿಸ್ತಾನ ಇತಿಹಾಸ ಸೇರಬೇಕಾಗುತ್ತದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರ ಕಠಿಣ ಎಚ್ಚರಿಕೆಗೆ ಪಾಕಿಸ್ತಾನ ಕೆರಳಿದೆ. ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'ಯಾಗಿದ್ದು ದಕ್ಷಿಣ ಏಷ್ಯಾವನ್ನು ಮತ್ತೊಂದು ಸಂಘರ್ಷಕ್ಕೆ ತಳ್ಳಬಹುದು. ಇದರ ಪರಿಣಾಮಗಳು ಇಡೀ ಪ್ರದೇಶಕ್ಕೆ ವಿನಾಶಕಾರಿಯಾಗಬಹುದು ಎಂದು ಪಾಕಿಸ್ತಾನ ಸೇನೆ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ (ISPR) ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಗ್ರಹಿಕೆಯ ಹೊರತಾಗಿಯೂ, ಪಾಕಿಸ್ತಾನವು ಜಾಗತಿಕವಾಗಿ ಮಹತ್ವದ ದೇಶವಾಗಿ, ಘೋಷಿತ ಪರಮಾಣು ಶಕ್ತಿಯಾಗಿ ಮತ್ತು ದಕ್ಷಿಣ ಏಷ್ಯಾದ ಭೌಗೋಳಿಕತೆ ಮತ್ತು ಇತಿಹಾಸದ ಶಾಶ್ವತ ಭಾಗವಾಗಿ ಉಳಿದಿದೆ ಎಂದು ಪಾಕ್ ಸೇನೆ ಹೇಳಿದೆ.

ಈ ಪ್ರಚೋದನೆ ದಕ್ಷಿಣ ಏಷ್ಯಾವನ್ನು ಮತ್ತೊಂದು ಸಂಘರ್ಷಕ್ಕೆ ತಳ್ಳುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೇನೆಯ ಪ್ರಕಾರ, ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ವಿನಾಶವು 'ಪರಸ್ಪರ ಮತ್ತು ವ್ಯಾಪಕವಾಗಿರುತ್ತದೆ'. ಜವಾಬ್ದಾರಿಯುತ ಪರಮಾಣು ರಾಷ್ಟ್ರಗಳು "ನಾಗರಿಕತೆಯ ಶ್ರೇಷ್ಠತೆ"ಯನ್ನು ಪ್ರತಿಪಾದಿಸುವ ಅಥವಾ ದೇಶವನ್ನು ಅಳಿಸಿಹಾಕುವ ಬೆದರಿಕೆ ಹಾಕುವ ಬದಲು ಸಂಯಮ, ಪ್ರಬುದ್ಧತೆ ಮತ್ತು ಕಾರ್ಯತಂತ್ರದ ಸಮತೋಲನವನ್ನು ಪ್ರದರ್ಶಿಸಬೇಕು ಎಂದು ISPR ಹೇಳಿದೆ.

ಭಾರತವು ಪಾಕಿಸ್ತಾನದ ಪ್ರಾಮುಖ್ಯತೆಯನ್ನು ಗುರುತಿಸಬೇಕೆಂದು ಒತ್ತಾಯಿಸಿದ್ದು ಪಾಕಿಸ್ತಾನವನ್ನು ಗುರಿಯಾಗಿಸುವ ಯಾವುದೇ ಪ್ರಯತ್ನವು "ಭೌಗೋಳಿಕ ಗಡಿಗಳನ್ನು ಮೀರುವ" ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬೆದರಿಕೆಯ ಧ್ವನಿಯಲ್ಲಿ ಪುನರುಚ್ಚರಿಸಿತು. ಈ ಹೇಳಿಕೆ ಅಸಂಬದ್ಧವಾಗಿದೆ. ತನ್ನ ಸುಳ್ಳಿನ ಕಾರ್ಖಾನೆಯ ಮೂಲಕ ನಕಲಿ ಸುದ್ದಿಗಳನ್ನು ಹರಡುವಲ್ಲಿ ಪರಿಣತಿ ಹೊಂದಿರುವ ಭಾರತವು ಅಸ್ಥಿರತೆಯನ್ನು ಹರಡುತ್ತಿದ್ದು ಅಪ್ರಚಾರದಲ್ಲಿ ತೊಡಗಿದೆ ಎಂದು ಆರೋಪ ಮಾಡಿದೆ.

ಶನಿವಾರ ನವದೆಹಲಿಯಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ, "ಆಪರೇಷನ್ ಸಿಂಧೂರ್" ನಂತಹ ಪರಿಸ್ಥಿತಿ ಮತ್ತೆ ಉದ್ಭವಿಸಿದರೆ ಭಾರತೀಯ ಸೇನೆ ಏನು ಮಾಡುತ್ತದೆ ಎಂದು ಜನರಲ್ ದ್ವಿವೇದಿ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಇದು ಹೀಗೆ ಮುಂದುವರೆದರೇ ಪಾಕಿಸ್ತಾನವು "ಭೌಗೋಳಿಕತೆಯ ಭಾಗವಾಗಿ ಉಳಿಯಬೇಕೆ ಅಥವಾ ಇತಿಹಾಸವಾಗಬೇಕೆ" ಎಂದು ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್