ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್  
ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸಲು ನೆರವು: ಓಮನ್ ಗೆ ನಿರ್ಬಂಧದ ಬೆದರಿಕೆ ಹಾಕಿದ ಅಮೆರಿಕಾ!

ಅಮೆರಿಕ ಜೊತೆಗಿನ ಸಂಭಾವ್ಯ ಒಪ್ಪಂದದ ಭಾಗವಾಗಿ ಹಾಗೆ ಮಾಡಲು ಇರಾನಿನ ಪ್ರಸ್ತಾಪಗಳನ್ನು ಉಲ್ಲೇಖಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ವ್ಯವಸ್ಥೆಯನ್ನು ವಿಧಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸಲು ನೆರವು ನೀಡಿದ್ರೆ, ಅದರ ಮಿತ್ರರಾಷ್ಟ್ರವಾದ ಓಮನ್ ನ್ನು ಟಾರ್ಗೆಟ್ ಮಾಡಲಾಗುವುದು ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗುರುವಾರ ಬೆದರಿಕೆ ಹಾಕಿದ್ದಾರೆ. ಅಂತಹ ಕ್ರಮಗಳಲ್ಲಿ ಭಾಗಿಯಾಗುವ ಎಲ್ಲಾ ರಾಷ್ಟ್ರಗಳ ವಿರುದ್ಧ ನಿರ್ಬಂಧ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಜಲಸಂಧಿಯಲ್ಲಿ ಟೋಲ್‌ ಸಂಗ್ರಹಿಸಲು ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಯಾವುದೇ ರಾಷ್ಟ್ರವನ್ನು ಗುರಿಯಾಗಿಸಲಾಗುವುದು. ಅಲ್ಲದೇ, ಮಿತ್ರ ರಾಷ್ಟ್ರವಾದರೂ ದಂಡ ವಿಧಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಒಮಾನ್ ತಿಳಿಯಬೇಕು ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ಜೊತೆಗಿನ ಸಂಭಾವ್ಯ ಒಪ್ಪಂದದ ಭಾಗವಾಗಿ ಹಾಗೆ ಮಾಡಲು ಇರಾನಿನ ಪ್ರಸ್ತಾಪಗಳನ್ನು ಉಲ್ಲೇಖಿಸಿದ್ದು, "ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ವ್ಯವಸ್ಥೆಯನ್ನು ವಿಧಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜಾಗತಿಕ ಇಂಧನ ಪೂರೈಕೆಗಳಲ್ಲಿ ಐದನೇ ಒಂದು ಭಾಗವು ಸಾಮಾನ್ಯವಾಗಿ ಹಾದುಹೋಗುವ ಪ್ರಮುಖ ಜಲಮಾರ್ಗವು ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಒಂದು ಸಂಘರ್ಷದ ಕೇಂದ್ರವಾಗಿದೆ.

ಟೆಹ್ರಾನ್‌ನ ಪ್ರತೀಕಾರದ ಕ್ರಮಗಳು ಈ ಪ್ರದೇಶವನ್ನು ಹಿಂಸಾಚಾರದಲ್ಲಿ ಮುಳುಗಿಸಿವೆ. ಇರಾನ್ ವಾಸ್ತವಿಕವಾಗಿ ಜಲಸಂಧಿಯನ್ನು ನಿರ್ಬಂಧಿಸಿದೆ. ಇದರಿಂದಾಗಿ ಜಾಗತಿಕ ಇಂಧನ ಮತ್ತು ರಸಗೊಬ್ಬರ ಬೆಲೆಗಳು ಗಗನಕ್ಕೇರಿವೆ. ಓಮಾನ್ ಯುದ್ಧದಲ್ಲಿ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಿದೆ.

ಓಮನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರವಾಗಿದ್ದು, ಇರಾನ್ ನಡುವಿನ ಸಂಘರ್ಷದಲ್ಲಿ ಮಿಸೈಲ್ ದಾಳಿಗೂ ಒಳಗಾಗಿದೆ. ಆದರೆ, ಇತ್ತೀಚಿಗೆ ಇರಾನ್ ಕಡೆ ವಾಲುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ವಿಚಾರದಲ್ಲಿ ಇರಾನ್ ಗೆ ಬೆಂಬಲ ಸೂಚಿಸಲು ಬಂದ ದೇಶಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಓಮನ್ ಗೆ ಎಚ್ಚರಿಕೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

ವೀರೇಂದ್ರ ಪಾಟೀಲರಿಗೆ ಅಪ್ಪ, ಸಿದ್ದರಾಮಯ್ಯರಿಗೆ ಮಗ ಅಪಮಾನ: ರಾಹುಲ್ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ!

SCROLL FOR NEXT