ಇರಾನ್ ಮುಖ್ಯ ಸಂಧಾನಕಾರ ಮಹಮದ್ ಬಘರ್ ಘಾಲಿಬಫ್ 
ವಿದೇಶ

'ಶತ್ರುವಿನ ಮಾತು, ಭರವಸೆ ನಂಬಲ್ಲ': ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್‌ ಸಂಧಾನಕಾರ

ಇರಾನ್‌ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮಹಮದ್ ಬಘರ್ ಘಾಲಿಬಫ್ ಭಾನುವಾರ, ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಣೆಯಾಗದೇ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟೆಹ್ರಾನ್: ಶತ್ರುವಿನ ಮಾತು, ಆಶ್ವಾಸನೆ ಮತ್ತು ಭರವಸೆಗಳನ್ನು ನಂಬುವುದಿಲ್ಲ ಎಂದು ಹೇಳಿರುವ ಇರಾನ್ ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಇರಾನ್‌ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮಹಮದ್ ಬಘರ್ ಘಾಲಿಬಫ್ (Mohammad Bagher Ghalibaf) ಅವರು ಭಾನುವಾರ, ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಣೆಯಾಗದೇ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಕಾಪಾಡಲಾಗಿದೆ ಎಂಬ ಖಚಿತತೆ ದೊರೆಯುವವರೆಗೆ ನಾವು ಯಾವುದೇ ಒಪ್ಪಂದವನ್ನು ಅನುಮೋದಿಸುವುದಿಲ್ಲ. ಶತ್ರುವಿನ ಮಾತುಗಳನ್ನಾಗಲಿ, ಅದರ ಭರವಸೆಗಳನ್ನಾಗಲಿ ನಂಬುವುದಿಲ್ಲ" ಎಂದು ಘಾಲಿಬಾಫ್ ಅವರು ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಫೆಬ್ರವರಿ 28ರಂದು ಆರಂಭಗೊಂಡು ಮಧ್ಯಪ್ರಾಚ್ಯವನ್ನು ವ್ಯಾಪಕವಾಗಿ ಆವರಿಸಿರುವ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಹಾಗೂ ಪ್ರಸ್ತಾವನೆಗಳ ವಿನಿಮಯ ಮುಂದುವರಿದಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಕಠಿಣ ಷರತ್ತುಗಳ ಹೊಸ ಪ್ರಸ್ತಾವನೆ ಕಳುಹಿಸಿದ ವರದಿ

ಶನಿವಾರ ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ಆಕ್ಸಿಯೊಸ್ ಮಾಧ್ಯಮಗಳು, ಅಮೆರಿಕ ಅಧ್ಯಕ್ಷ ಡೊನಲ್ಡ್ ಟ್ರಂಪ್ (Donald Trump) ಅವರು "ಹೆಚ್ಚು ಕಠಿಣ ಷರತ್ತುಗಳನ್ನು" ಒಳಗೊಂಡ ಹೊಸ ಒಪ್ಪಂದದ ಕರಡನ್ನು ಟೆಹ್ರಾನ್‌ಗೆ ಕಳುಹಿಸಿದ್ದಾರೆ ಎಂದು ವರದಿ ಮಾಡಿವೆ. ಆದರೆ ಆ ಕಠಿಣ ಷರತ್ತುಗಳು ಯಾವುವು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಟ್ರಂಪ್ ಆದ್ಯತೆಗಳು ಏನು?

ಇರಾನ್ ಯಾವುದೇ ರೀತಿಯ ಅಣ್ವಸ್ತ್ರ ಅಭಿವೃದ್ಧಿ ನಡೆಸದಂತೆ ತಡೆಯುವುದು ಮತ್ತು ಬಂದ್ ಆಗಿರುವ ಹಾರ್ಮುಜ್ ಜಲಸಂಧಿ ಸಾಗಣೆ ಮಾರ್ಗವನ್ನು ಪುನಃ ತೆರೆಯುವುದು ತಮ್ಮ ಪ್ರಮುಖ ಗುರಿಗಳಾಗಿವೆ ಎಂದು ಟ್ರಂಪ್ ಹೇಳಿದ್ದಾರೆ. ತಮ್ಮ ಸೊಸೆ ಲಾರಾ ಟ್ರಂಪ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು, "ನನಗೆ ಬೇಕಾದ ಏಕೈಕ ಖಾತರಿ ಎಂದರೆ ಯಾವುದೇ ಅಣ್ವಸ್ತ್ರ ಇರಬಾರದು. ಅದಕ್ಕೆ ಅವರು ಒಪ್ಪಿದ್ದಾರೆ. ಅದು ತುಂಬಾ ಆಸಕ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.

ಅಂತೆಯೇ ಈ ಹಿಂದೆ ಒಪ್ಪಂದ ಶೀಘ್ರದಲ್ಲೇ ಸಾಧ್ಯ ಎಂದು ಸೂಚಿಸಿದ್ದ ಟ್ರಂಪ್, ಈಗ ತುಸು ವಿಭಿನ್ನ ಧಾಟಿಯಲ್ಲಿ ಮಾತನಾಡಿದ್ದಾರೆ. ಫಾಕ್ಸ್ ನ್ಯೂಸ್ ನಡೆಸಿದ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ ಅವರು, "ನನಗೆ ಯಾವುದೇ ಆತುರವಿಲ್ಲ. ನಮಗೆ ಬೇಕಾದದ್ದನ್ನು ಪಡೆಯದಿದ್ದರೆ, ಈ ವಿಚಾರವು ಬೇರೆ ರೀತಿಯಲ್ಲಿ ಅಂತ್ಯಗೊಳ್ಳಲಿದೆ" ಎಂದು ಇರಾನ್ ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಈ ಹೇಳಿಕೆ, ರಾಜತಾಂತ್ರಿಕ ಮಾತುಕತೆ ವಿಫಲವಾದರೆ ಮತ್ತೊಮ್ಮೆ ಸೇನಾ ಕ್ರಮದ ಸಾಧ್ಯತೆಯನ್ನು ಸೂಚಿಸುವಂತಿದೆ. ಇದರೊಂದಿಗೆ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಮುಂದುವರಿದಿದ್ದರೂ, ನಿರ್ಬಂಧಗಳ ತೆರವು, ಅಣು ಕಾರ್ಯಕ್ರಮ, ಹಾರ್ಮುಜ್ ಜಲಸಂಧಿಯ ನಿಯಂತ್ರಣ ಮತ್ತು ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎಂಬುದನ್ನು ಸೂಚಿಸುತ್ತಿವೆ.

ಹಾಗಾದ್ರೆ ಇರಾನ್‌ನ ಪ್ರಮುಖ ಬೇಡಿಕೆಗಳೇನು?

ಅಮೆರಿಕದೊಂದಿಗೆ ಯಾವುದೇ ಒಪ್ಪಂದದಲ್ಲಿ, ತನ್ನ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು (ಸ್ಯಾಂಕ್ಷನ್‌ಗಳು) ತೆಗೆದುಹಾಕುವುದು ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿ ಸ್ಥಗಿತಗೊಂಡಿರುವ ತನ್ನ ಆಸ್ತಿಗಳನ್ನು ಬಿಡುಗಡೆ ಮಾಡುವುದು ತನ್ನ ಮೂಲಭೂತ ಹಕ್ಕುಗಳಾಗಿವೆ ಎಂದು ಇರಾನ್ ಪರಿಗಣಿಸಿದೆ.

ಯುದ್ಧ ಆರಂಭವಾದ ನಂತರ, ಜಾಗತಿಕ ಇಂಧನ ಸಾಗಣೆಗೆ ಅತ್ಯಂತ ಪ್ರಮುಖವಾದ Strait of Hormuz ಜಲಸಂಧಿಯ ಮೇಲೆ ಇರಾನ್ ಕಟ್ಟುನಿಟ್ಟಿನ ನಿಯಂತ್ರಣವನ್ನು ಕಾಯ್ದುಕೊಂಡಿದೆ. ಈ ಜಲಮಾರ್ಗದಲ್ಲಿ ಸಾಗುವ ಹಡಗುಗಳ ಮೇಲ್ವಿಚಾರಣೆ ತನ್ನ ಹಕ್ಕಿನ ಭಾಗವಾಗಿದೆ ಎಂದು ಟೆಹ್ರಾನ್ ಹೇಳಿದೆ.

ಪ್ರಸ್ತಾವನೆಯಲ್ಲಿ ಮತ್ತಷ್ಟು ಬದಲಾವಣೆಗಳಾದರೆ, ಮಧ್ಯಪ್ರಾಚ್ಯ ಯುದ್ಧವನ್ನು ಅಧಿಕೃತವಾಗಿ ಅಂತ್ಯಗೊಳಿಸುವ ಮತ್ತು ಹೋರ್ಮುಜ್ ಜಲಸಂಧಿಯನ್ನು ಪುನಃ ಸಂಪೂರ್ಣವಾಗಿ ತೆರೆಯುವ ಒಪ್ಪಂದ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಲೆಬನಾನ್ ವಿಷಯವನ್ನೂ ಒಪ್ಪಂದದಲ್ಲಿ ಸೇರಿಸಬೇಕು: ಇರಾನ್ ಪಟ್ಟು

ಮುಂದುವರಿದಿರುವ ಯುದ್ಧದ ನಡುವೆಯೂ, ಯಾವುದೇ ಒಪ್ಪಂದದಲ್ಲಿ Lebanon ಅನ್ನು ಸೇರಿಸಬೇಕು ಎಂದು ಟೆಹ್ರಾನ್ ಒತ್ತಾಯಿಸಿದೆ. ಇದೇ ವೇಳೆ, ಲೆಬನಾನ್ ಸರ್ಕಾರವು Israel ವಿರುದ್ಧ "ಸುಟ್ಟು ಬೂದಿ ಮಾಡುವ ನೀತಿ" ಅನುಸರಿಸುತ್ತಿದೆ ಎಂದು ಆರೋಪಿಸಿದ್ದು, ಇರಾನ್ ಬೆಂಬಲಿತ Hezbollah ವಿರುದ್ಧ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ.

ಭಿನ್ನಾಭಿಪ್ರಾಯ

ಆದರೆ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಟೆಹ್ರಾನ್ ಈ ಹಿಂದೆ ಅನುಮಾನ ವ್ಯಕ್ತಪಡಿಸಿದ್ದು, ಪ್ರಮುಖ ವಿಷಯಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ಅಂತರ ಇನ್ನೂ ಸಾಕಷ್ಟು ಉಳಿದಿದೆ. ಇರಾನ್ ಮಾಧ್ಯಮಗಳ ಪ್ರಕಾರ, ತನ್ನ ಅಣು ಕಾರ್ಯಕ್ರಮದ ಬಗ್ಗೆ ಅರ್ಥಪೂರ್ಣ ಮಾತುಕತೆ ನಡೆಸುವ ಮೊದಲು 12 ಬಿಲಿಯನ್ ಡಾಲರ್ ಮೌಲ್ಯದ ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ಒತ್ತಾಯಿಸಿದೆ. ಅಲ್ಲದೆ, ತನ್ನ ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂಬ ಟ್ರಂಪ್ ಅವರ ಹಿಂದಿನ ಹೇಳಿಕೆಯನ್ನು "ಆಧಾರರಹಿತ" ಎಂದು ತಳ್ಳಿಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪ್ರಮಾಣ ವಚನ ದಿನವೇ ಹೊಸ ಕಾಂಗ್ರೆಸ್ ಭವನಕ್ಕೆ ರಾಹುಲ್ ಗಾಂಧಿ ಶಂಕು ಸ್ಥಾಪನೆ; ಸ್ಥಳ ಪರಿಶೀಲಿಸಿದ ನಿಯೋಜಿತ ಸಿಎಂ

IPL 2026 Final: RCB vs GT, ಮರುಕಳಿಸುತ್ತಾ ಪಿಚ್ ನಂ 6 ಕರಾಳತೆ, ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

IPL 2026 Final: 'ಆತ 3 ಓವರ್ ಬೌಲಿಂಗ್ ಮಾಡಿದ್ರೂ RCB ಕಥೆ ಮುಗಿದಂತೆ, ಆಡಿಸಲೇಬೇಡಿ': ಫೈನಲ್ ಗೂ ಮುನ್ನ ಮಾಜಿ ಕ್ರಿಕೆಟಿಗನ ಹೊಸ ಬಾಂಬ್

ಮುಂಬೈ: ಅಂಧೇರಿ ಪೂರ್ವದಲ್ಲಿರುವ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಇಡೀ ಕಟ್ಟಡ!

ನೊಂದವರ ಗಾಯದ ಮೇಲೆ ಉಪ್ಪು ಸುರಿದಂತೆ: ಜಾಮೀನು ಸಿಕ್ಕಿದ್ದಕ್ಕೆ ಕೊಲೆ ಆರೋಪಿ ಕುಟುಂಬಸ್ಥರ ಪಾರ್ಟಿ, ನಟ ವಿಶಾಲ್ ಆಕ್ರೋಶ, Video!

SCROLL FOR NEXT