ಅಮೆರಿಕ ಚುನಾವಣಾ ಫಲಿತಾಂಶ ಕುರಿತು ಇರಾನ್ ವ್ಯಂಗ್ಯ 
ವಿದೇಶ

‘Hazardous Waste’: ಅಮೆರಿಕ ಅಧ್ಯಕ್ಷ Donald Trump ರನ್ನು ಕಸದ ಬುಟ್ಟಿಗೆ ಎಸೆದ ಇರಾನ್! ಚುನಾವಣಾ ಹಿನ್ನಡೆಗೆ ಭೀಕರ ವ್ಯಂಗ್ಯ!

ಟ್ರಂಪ್ ಅವರನ್ನು ‘Hazardous Waste’ (ಅಪಾಯಕಾರಿ ತ್ಯಾಜ್ಯ) ಎಂದು ಬಿಂಬಿಸುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಇರಾನ್, ಅಮೆರಿಕದ ಅಧ್ಯಕ್ಷರಿಗೆ ತೀಕ್ಷ್ಣ ಟಾಂಗ್ ನೀಡಿದೆ.

ಟೆಹ್ರಾನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇರಾನ್ ಭೀಕರ ವ್ಯಂಗ್ಯ ಮಾಡಿದೆ.

ಟ್ರಂಪ್ ಅವರನ್ನು ‘Hazardous Waste’ (ಅಪಾಯಕಾರಿ ತ್ಯಾಜ್ಯ) ಎಂದು ಬಿಂಬಿಸುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಇರಾನ್, ಅಮೆರಿಕದ ಅಧ್ಯಕ್ಷರಿಗೆ ತೀಕ್ಷ್ಣ ಟಾಂಗ್ ನೀಡಿದೆ. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ.

ವಿಡಿಯೊದಲ್ಲಿ ಸೂಟ್ ಧರಿಸಿದ ನಾಲ್ವರು ವ್ಯಕ್ತಿಗಳು ಟ್ರಂಪ್ ಅವರನ್ನು ಎತ್ತಿಕೊಂಡು ಹೋಗಿ, ‘Hazardous Waste’ ಎಂದು ಬರೆಯಲಾಗಿರುವ ದೊಡ್ಡ ಕಸದ ತೊಟ್ಟಿಗೆ ಎಸೆಯುವುದನ್ನು ತೋರಿಸಲಾಗಿದೆ.

ಈ ವಿಡಿಯೊಗೆ ‘ಅಮೆರಿಕದ ಮಧ್ಯಂತರ ಚುನಾವಣೆ’ ಎಂಬ ವ್ಯಂಗ್ಯಭರಿತ ಶೀರ್ಷಿಕೆಯನ್ನೂ ನೀಡಲಾಗಿದೆ. ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಎದುರಾದ ಹಿನ್ನಡೆಯನ್ನು ಗುರಿಯಾಗಿಸಿಕೊಂಡು ಇರಾನ್ ಈ ಪೋಸ್ಟ್ ಮಾಡಿದೆ.

ಅಮೆರಿಕದ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಇರಾನ್ ಮಾಡಿರುವ ಈ ಟೀಕೆ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಾಗ್ದಾಳಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಟ್ರಂಪ್ ಅವರ ರಾಜಕೀಯ ವರ್ಚಸ್ಸಿಗೆ ಚುನಾವಣಾ ಫಲಿತಾಂಶದಿಂದ ಹಿನ್ನಡೆಯಾಗಿದೆ ಎಂಬ ಸಂದೇಶವನ್ನು ವ್ಯಂಗ್ಯದ ಮೂಲಕ ರವಾನಿಸಲು ಇರಾನ್ ಪ್ರಯತ್ನಿಸಿದೆ.

ಡೆಮಾಕ್ರಟಿಕ್ ಪಕ್ಷಕ್ಕೆ ಭಾರಿ ಮುನ್ನಡೆ

ಇನ್ನು ಹಾಲಿ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ರಾಜಕೀಯವಾಗಿ ಮುನ್ನಡೆ ಪಡೆದಿದೆ. ಓಹಿಯೊದಲ್ಲಿ ಶೆರಾಡ್ ಬ್ರೌನ್, ಟೆಕ್ಸಾಸ್‌ನಲ್ಲಿ ಜೇಮ್ಸ್ ತಲಾರಿಕೊ ಹಾಗೂ ಅಯೋವಾದಲ್ಲಿ ರಾಬ್ ಸ್ಯಾಂಡ್ ಗೆಲುವು ಸಾಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು ಓಹಿಯೊ ಗವರ್ನರ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಡೆಮಾಕ್ರಟಿಕ್ ಪಕ್ಷದ ಆಮಿ ಆಕ್ಟನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಹಾಗೂ ಡೆಮಾಕ್ರಟಿಕ್ ಪಕ್ಷದೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಈಗಾಗಲೇ ಬಿಗುವಿನಿಂದ ಕೂಡಿದೆ. ಈ ನಡುವೆ ಇರಾನ್ ರಾಯಭಾರ ಕಚೇರಿಯ ವ್ಯಂಗ್ಯಭರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: 'Mr. ಪ್ರಧಾನಿ ಮೋದಿ ಎಚ್ಚರ.. ಭಾರತದಲ್ಲೂ ಇದೇ ಮರುಕಳಿಸುತ್ತೆ': ಕಾಂಗ್ರೆಸ್ ನಾಯಕಿ Shama Mohamed

ಬೆಳಗಾವಿ: ಪ್ರೇಯಸಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದ ಕಾನ್ಸ್‌ಟೇಬಲ್!

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಭಾರಿ ಅಗ್ನಿ ಅವಘಡ, ದೇವರ ದೀಪದಿಂದ ಹೊತ್ತಿದ ಬೆಂಕಿ, Video Viral

'ಹಜ್ ಯಾತ್ರೆ ಬಳಿಕ ಸಂಪೂರ್ಣ ಬದಲಾದಳು': ಪತ್ನಿ Farah Naaz ಜೊತೆಗಿನ ವಿಚ್ಚೇದನದ ಕುರಿತು ಕೊನೆಗೂ ಮೌನ ಮುರಿದ ನಟ Vindu Dara Singh!