ವಿದೇಶ

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆಯ ಕಂಪನಕ್ಕೆ ಜನಜೀವನ ಅಸ್ತವ್ಯಸ್ತ; 22 ಮಂದಿಗೆ ಗಾಯ, ಮುಂದಿನ 2-3 ದಿನಗಳಲ್ಲಿ ಪ್ರಬಲ ಕಂಪನ ಸಾಧ್ಯತೆ..!

ಭೂಕಂಪದ ತೀವ್ರತೆಗೆ ಭೀತಿಗೊಳಗಾದ ಜನರು ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದು, ಈ ವೇಳೆ ಸಂಭವಿಸಿದ ಅವಘಡಗಳಿಂದಾಗಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟೋಕಿಯೊ: ಜಪಾನ್‌ನ ಮಧ್ಯ ಭಾಗದಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.7 ರಷ್ಟು ದಾಖಲಾಗಿದೆ.

ಭೂಕಂಪದ ತೀವ್ರತೆಗೆ ಭೀತಿಗೊಳಗಾದ ಜನರು ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದು, ಈ ವೇಳೆ ಸಂಭವಿಸಿದ ಅವಘಡಗಳಿಂದಾಗಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7ರಷ್ಟಿತ್ತು. ಆದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪದ ತೀವ್ರತೆ 5.5ರಷ್ಟಿತ್ತು ಎಂದು ಹೇಳಿದೆ.

ಐಚಿ ಪ್ರಾಂತ್ಯದ ಸುತ್ತಮುತ್ತಲಿನ ವಿಶಾಲ ಪ್ರದೇಶದಲ್ಲಿ ಭೂಕಂಪದ ಪರಿಣಾಮ ಉಂಟಾಗಿದೆ. ಹಮಾಮತ್ಸು ನಗರ, ಪ್ರಾಚೀನ ರಾಜಧಾನಿಗಳಾದ ಕ್ಯೋಟೊ ಮತ್ತು ನಾರಾ ಸೇರಿದಂತೆ ಯಮನಾಶಿ ಹಾಗೂ ಗಿಫು ಪ್ರಾಂತ್ಯಗಳಲ್ಲೂ ಕಂಪನದ ಅನುಭವವಾಗಿದೆ. ಯಮನಾಶಿ ಪ್ರಾಂತ್ಯದಲ್ಲೇ ಜಪಾನ್‌ನ ಪ್ರಸಿದ್ಧ ಫ್ಯೂಜಿ ಪರ್ವತವಿದೆ.

ಜಪಾನ್‌ನ ದೂರದರ್ಶನ ವಾಹಿನಿಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಅಂಗಡಿಗಳ ಗಾಜುಗಳು ಒಡೆದು ರಸ್ತೆಗಳ ಮೇಲೆ ಚದುರಿರುವುದು ಕಂಡುಬಂದಿದೆ.

ಪುಸ್ತಕ ಮಳಿಗೆಯೊಂದರಲ್ಲಿ ಕಪಾಟುಗಳಿಂದ ಕೆಳಗೆ ಬಿದ್ದ ಪುಸ್ತಕಗಳು ರಾಶಿಯಾಗಿ ಬಿದ್ದಿದ್ದು, ಭೂಕಂಪದ ವೇಳೆ ಕಟ್ಟಡಗಳಿಂದ ಹೊರಬರಲು ಪ್ರಯತ್ನಿಸುವಾಗ ಮೆಟ್ಟಿಲುಗಳಿಂದ ಬಿದ್ದು ಕೆಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಭಾನುವಾರ ಮುಂಜಾನೆ 1.04ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಶಿಜುವೊಕಾ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿತ್ತು. ಐಚಿ ಮತ್ತು ಶಿಜುವೊಕಾ ನೆರೆಯ ಪ್ರಾಂತ್ಯಗಳಾಗಿವೆ.

ಇವು ಟೋಕಿಯೊದಿಂದ ಸಾಕಷ್ಟು ದೂರದಲ್ಲಿರುವುದರಿಂದ ರಾಜಧಾನಿಯಲ್ಲಿ ಭೂಕಂಪದ ಅನುಭವವಾಗಿಲ್ಲ. ಅಧಿಕೃತ ಭೂಕಂಪನ ಮೌಲ್ಯಮಾಪನದ ಪ್ರಕಾರ, ಐಚಿ ಪ್ರಾಂತ್ಯದಲ್ಲಿ ಅತ್ಯಂತ ಪ್ರಬಲ ಕಂಪನ ದಾಖಲಾಗಿದೆ.

ಈ ನಡುವೆ ಮುಂದಿನ ಒಂದು ವಾರದಲ್ಲಿ, ವಿಶೇಷವಾಗಿ ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ಪ್ರಬಲ ಭೂಕಂಪಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಪಾನ್ ಹವಾಮಾನ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.

ಮಣ್ಣು ಕುಸಿತ, ಬಂಡೆಗಳು ಉರುಳುವ ಸಾಧ್ಯತೆ ಹಾಗೂ ಮಳೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಸಂಸ್ಥೆಯ ಅಧಿಕಾರಿಯಾದ ಅಯತಕ ಎಬಿಟಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರೀ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿರುವ ನಂಕೈ ಟ್ರಫ್ ಭೂಫಲಕದಲ್ಲಿ ಸದ್ಯಕ್ಕೆ ಯಾವುದೇ ಸ್ಪಷ್ಟ ಬದಲಾವಣೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶಿಂಕಾನ್ಸೆನ್ ಬುಲೆಟ್ ರೈಲುಗಳ ಸಂಚಾರವನ್ನು ನಿಧಾನಗೊಳಿಸಲಾಗಿದೆ. ಭೂಕಂಪದಿಂದ ರೈಲು ಹಳಿಗಳಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಪಾನ್ ಭೂಕಂಪ ಸಂಭವಿಸುವ ಅಪಾಯ ಹೆಚ್ಚಿರುವ ಪ್ರದೇಶದಲ್ಲಿದೆ. ಹೀಗಾಗಿ ಅಲ್ಲಿನ ಅಧಿಕಾರಿಗಳು ಜನರಿಗೆ ಸದಾ ಸಿದ್ಧರಾಗಿರುವಂತೆ ಸೂಚಿಸುತ್ತಾರೆ. ಕುಡಿಯುವ ನೀರಿನ ಬಾಟಲಿಗಳು, ಆಹಾರ ಪದಾರ್ಥಗಳು ಮತ್ತು ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಭೂಕಂಪ ಸಂಭವಿಸಿದಾಗ ಮೇಜಿನ ಕೆಳಗೆ ಅಡಗಿಕೊಳ್ಳುವಂತಹ ಸುರಕ್ಷತಾ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವುದು ಹಾಗೂ ಆರಾಮದಾಯಕವಾದ ವಾಕಿಂಗ್ ಶೂಗಳನ್ನು ಹತ್ತಿರದಲ್ಲಿಟ್ಟುಕೊಳ್ಳುವಂತೆ ಆಗಾಗ್ಗೆ ಸಲಹೆ ನೀಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೋದಿ ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಅಂಬೇಡ್ಕರ್, ಗಾಂಧಿ, ನೆಹರುಗಿಂತ ದೊಡ್ಡವರಾಗಲು ಸಾಧ್ಯವಿಲ್ಲ: ದೀಪ್ಕೆ

ವೈದಿಕ ವಿರೋಧಿ ನಾಯಕನ ಮನೆಯಲ್ಲೇ ಶಾಸ್ತ್ರೋಕ್ತ ಮದುವೆ: ಸನಾತನ ಪದ್ಧತಿ ಆಚರಣೆಗೆ DMK ನಾಯಕನ ಸ್ಪಷ್ಟನೆ!

ನೌಕರರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ಕೊಟ್ಟ ಜವಳಿ ಉದ್ಯಮಿ, ಖುಷಿಯಿಂದ ಕಣ್ಣೀರು ಹಾಕಿದ ಸಿಬ್ಬಂದಿ!

ದೇಶದ ಜನತೆಗೆ ಪ್ರಧಾನಿಯಿಂದ ದೀಪಾವಳಿ ಹಬ್ಬದ ಶುಭಾಶಯ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯದ ಬಗ್ಗೆ ಹೇಳಿದ್ದಿಷ್ಟು...

'ನಿಮ್ಮ ಇಟಾಲಿಯನ್ ಕನ್ನಡಕ ತೆಗೆದು ನೋಡಿ': ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು