ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  online desk
ವಿದೇಶ

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..!

ಭಾರತವನ್ನು ನೋಡಿ. ಅಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟಿದೆ. ನಾವು ಕೂಡ ಇದೇ ರೀತಿಯ ನೀತಿ ಅನುಸರಿಸಿದರೆ ನಮ್ಮ ಜಿಡಿಪಿ ಶೇ.14, 15 ಅಥವಾ ಬಹುಶಃ ಶೇ.20ರಷ್ಟು ಬೆಳೆಯಬಹುದು. ನೀವು ಉತ್ತಮ ಸಾಧನೆ ಮಾಡುತ್ತಿದ್ದರೂ ಫೆಡ್ ಬಡ್ಡಿದರ ಹೆಚ್ಚಿಸುವುದು ನಿಜಕ್ಕೂ ಬೇಸರದ ಸಂಗತಿ.

ವಾಷಿಂಗ್ಟನ್: ಭಾರತದ ಶೇ.7ರ ಆರ್ಥಿಕ ಬೆಳವಣಿಗೆ ದರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಡಿಮೆ ಬಡ್ಡಿದರ ನೀತಿಯನ್ನು ಉಲ್ಲೇಖಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಾಗಿಯೇ ಇರಿಸಿರುವ ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ (ಫೆಡ್) ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

(ಬಡ್ಡಿದರಗಳನ್ನು ಕಡಿಮೆ ಮಾಡಿದರೆ ಅಮೆರಿಕದ ಆರ್ಥಿಕ ಬೆಳವಣಿಗೆ ಶೇ.15ರಿಂದ 20ರವರೆಗೂ ತಲುಪಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಮೆರಿಕದ ಫೆಡರಲ್ ರಿಸರ್ವ್ ಅತ್ಯಂತ ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಉತ್ತಮ ಆರ್ಥಿಕ ಅಂಕಿಅಂಶಗಳು ಪ್ರಕಟವಾದಾಗಲೆಲ್ಲ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಬದಲು ಫೆಡ್ ಬಡ್ಡಿದರಗಳನ್ನು ಹೆಚ್ಚಿಸುತ್ತದೆ ಎಂದು ದೂರಿದರು.

ಬಡ್ಡಿದರಗಳು ತುಂಬಾ ಹೆಚ್ಚಾಗಿವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಅತ್ಯಂತ ರಾಜಕೀಯ ಪ್ರೇರಿತ ಫೆಡ್. ನಾನು ಅದರ ಅಧ್ಯಕ್ಷರನ್ನು ದೂಷಿಸುತ್ತಿಲ್ಲ. ಆದರೆ, ಫೆಡ್‌ನ ಕಾರ್ಯವೈಖರಿ ರಾಜಕೀಯ ಪ್ರೇರಿತವಾಗಿದೆ. ನಾವು ಉತ್ತಮ ಆರ್ಥಿಕ ಅಂಕಿಅಂಶಗಳನ್ನು ಪ್ರಕಟಿಸಿದಾಗಲೆಲ್ಲ ಅವರು ಬಡ್ಡಿದರಗಳನ್ನು ಹೆಚ್ಚಿಸುತ್ತಾರೆ. ಅದಕ್ಕೆ ಒಂದು ಕಾರಣವಿದೆ. ಆದರೆ, ವಾಸ್ತವವಾಗಿ ಇದಕ್ಕೆ ವಿರುದ್ಧವಾಗಿ ನಡೆಯಬೇಕು ಎಂದು ಹೇಳಿದರು.

ಉತ್ತಮ ಆರ್ಥಿಕ ಸಾಧನೆ ಕಂಡುಬಂದಾಗ ಅಮೆರಿಕ ಬಡ್ಡಿದರಗಳನ್ನು ಕಡಿಮೆ ಮಾಡಬೇಕು ಎಂದು ಅವರು ವಾದಿಸಿದರು.

ಆರ್ಥಿಕ ಅಂಕಿಅಂಶಗಳು ಸುಧಾರಿಸಿದರೆ ದೇಶದ ಸಾಲ ಮರುಪಾವತಿ ಸಾಮರ್ಥ್ಯವೂ ಹೆಚ್ಚುತ್ತದೆ. ಆದರೆ, ಫೆಡರಲ್ ರಿಸರ್ವ್ ಇದಕ್ಕೆ ವಿರುದ್ಧವಾದ ನೀತಿ ಅನುಸರಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳಿಗೆ ಕಡಿವಾಣ ಹಾಕುತ್ತಿದೆ ಎಂದು ಆರೋಪಿಸಿದರು.

ನಾವು ಇದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ದೇಶವನ್ನು ನಾಶಪಡಿಸುವಂತಿದೆ. ಆರ್ಥಿಕ ಅಂಕಿಅಂಶಗಳು ಉತ್ತಮವಾಗಿರುವಾಗ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇರಬಾರದು. ಬದಲಿಗೆ ಕಡಿಮೆ ಮಾಡಬೇಕು. ಏಕೆಂದರೆ ಆಗ ನಮ್ಮ ಸಾಲ ಮರುಪಾವತಿ ಸಾಮರ್ಥ್ಯ ಹೆಚ್ಚಿರುತ್ತದೆ. ನಮ್ಮ ಜಿಡಿಪಿ ಶೇ.4ರ ಬದಲಿಗೆ ಶೇ.15 ಅಥವಾ 20ರಷ್ಟು ಬೆಳೆಯುತ್ತಿತ್ತು. ಆಗ ನಾವು ಸಾಲವನ್ನು ಬಹಳ ವೇಗವಾಗಿ ತೀರಿಸಬಹುದಿತ್ತು. ನಡೆಯಬೇಕಾದದ್ದು ಹೀಗೆ. ಆದರೆ ನಾವು ತದ್ವಿರುದ್ಧವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಗಮನ ಸೆಳೆದರು. ಇದೇ ಮಾದರಿಯನ್ನು ಅಮೆರಿಕ ಅನುಸರಿಸಿದರೆ ತನ್ನ ಆರ್ಥಿಕ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಭಾರತವನ್ನು ನೋಡಿ. ಅಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟಿದೆ. ನಾವು ಕೂಡ ಇದೇ ರೀತಿಯ ನೀತಿ ಅನುಸರಿಸಿದರೆ ನಮ್ಮ ಜಿಡಿಪಿ ಶೇ.14, 15 ಅಥವಾ ಬಹುಶಃ ಶೇ.20ರಷ್ಟು ಬೆಳೆಯಬಹುದು. ನೀವು ಉತ್ತಮ ಸಾಧನೆ ಮಾಡುತ್ತಿದ್ದರೂ ಫೆಡ್ ಬಡ್ಡಿದರ ಹೆಚ್ಚಿಸುವುದು ನಿಜಕ್ಕೂ ಬೇಸರದ ಸಂಗತಿ. ವಾಸ್ತವವಾಗಿ, ನಾವು ಈ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನಡೆದಿದ್ದೇವೆ ಎಂದು ಹೇಳಿದರು.

ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕದ ಸ್ಥಾನಮಾನ ಮತ್ತು ಇತರ ದೇಶಗಳ ಆರ್ಥಿಕ ಯಶಸ್ಸಿಗೆ ಅದು ನೀಡುತ್ತಿರುವ ಕೊಡುಗೆಯನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕದಲ್ಲೇ ವಿಶ್ವದ ಅತ್ಯಂತ ಕಡಿಮೆ ಬಡ್ಡಿದರ ಇರಬೇಕು ಎಂದು ಪ್ರತಿಪಾದಿಸಿದರು.

ಇತರ ದೇಶಗಳು ಯಶಸ್ವಿಯಾಗಲು ನೆರವಾಗುವ ದೇಶ ನಾವು. ಕೆಲವು ದೇಶಗಳನ್ನು ಆರ್ಥಿಕ ಗಣ್ಯ ರಾಷ್ಟ್ರಗಳೆಂದು ಪರಿಗಣಿಸಲಾಗುತ್ತದೆ. ಆದರೆ ಅವು ನಿಜವಾದ ಗಣ್ಯ ರಾಷ್ಟ್ರಗಳಲ್ಲ. ನಮ್ಮ ಕಾರಣದಿಂದಲೇ ಅವು ಆ ಸ್ಥಾನದಲ್ಲಿವೆ. ಹೀಗಾಗಿ ಅತ್ಯಂತ ಕಡಿಮೆ ಬಡ್ಡಿದರ ನಮ್ಮಲ್ಲೇ ಇರಬೇಕು ಎಂದು ಹೇಳಿದರು.

ಫೆಡರಲ್ ರಿಸರ್ವ್‌ನ ಹಣಕಾಸು ನೀತಿಯನ್ನು ಟ್ರಂಪ್ ನಿರಂತರವಾಗಿ ಟೀಕಿಸುತ್ತಿರುವ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಿದ್ದಿವೆ. ಇದೇ ವೇಳೆ ಅಮೆರಿಕದಲ್ಲಿ ಹಣದುಬ್ಬರವು ಫೆಡ್ ನಿಗದಿಪಡಿಸಿರುವ ಶೇ.2ರ ಗುರಿಗಿಂತ ಗಣನೀಯವಾಗಿ ಹೆಚ್ಚಾಗಿದೆ.

ವರದಿಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ವೈಯಕ್ತಿಕ ಬಳಕೆ ವೆಚ್ಚಗಳ (ಪಿಸಿಇ) ವಾರ್ಷಿಕ ಹಣದುಬ್ಬರ ದರ ಶೇ.3.6ರಷ್ಟಿತ್ತು. ಆಹಾರ ಮತ್ತು ಇಂಧನ ಬೆಲೆಗಳನ್ನು ಹೊರತುಪಡಿಸಿ ಲೆಕ್ಕ ಹಾಕುವ ಮೂಲ ಪಿಸಿಇ ಹಣದುಬ್ಬರ ದರ ಶೇ.3.1ರಷ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಿಂದೆ ದೆಹಲಿಯ ಕೆಂಪುಕೋಟೆಯಿಂದ ಬಡತನ ಬಗ್ಗೆ ಮಾತನಾಡುತ್ತಿದ್ದವರು ಕಡತಗಳನ್ನು ಸಿದ್ದಪಡಿಸುವುದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವಾಡಿಗರ ದೇಶ' ಎಂದು ಏಕೆ ಕರೆಯಲಾಗುತ್ತಿತ್ತು?

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್, ಯಾರೀ ಸ್ನಿಗ್ಧ ಸುಂದರಿ?

ಶಾಸಕರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು CM: ವಿ.ಎಸ್ ಬಾಬು ಶವಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದ ವಿಜಯ್!