ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

'ಭಾರತದಲ್ಲಿ ಎಷ್ಟು ಭಾಷೆಗಳಿವೆ?'; ಪ್ರಧಾನಿ ಮೋದಿ ಉತ್ತರ ಕೇಳಿ ಅಚ್ಚರಿಗೊಂಡ ರಷ್ಯಾ ಅಧ್ಯಕ್ಷ ಪುಟಿನ್!

ಮೋದಿ ಅವರು ಸುಮಾರು 60 ಕೋಟಿ ಜನರು ಮಾತನಾಡುತ್ತಾರೆ ಎಂದು ಉತ್ತರಿಸಿದ್ದರು. ಬಳಿಕ ಭಾರತದ ಒಟ್ಟು ಜನಸಂಖ್ಯೆ ಎಷ್ಟು ಎಂದು ಕೇಳಿದಾಗ ಸುಮಾರು 150 ಕೋಟಿ ಎಂದು ತಿಳಿಸಿದ್ದರು ಎಂದು ಪುಟಿನ್..

ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ)
Srinivasa Murthy VN
Updated On : 23 Nov 2026, 6:38 pm

ನವದೆಹಲಿ: ಭಾರತದ ಭಾಷಾ ವೈವಿಧ್ಯತೆ ಮತ್ತು ಪ್ರಾಚೀನ ನಾಗರಿಕತೆಯ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಗಳ ಕೇಳಿ ಅಚ್ಚರಿಗೊಂಡಿದ್ದಾರೆ.

ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್‌ಗೆ ನೀಡಿದ ಸಂದರ್ಶನದಲ್ಲಿ ಸರ್ಬಿಯಾದ ಚಲನಚಿತ್ರ ನಿರ್ದೇಶಕ ಎಮಿರ್ ಕುಸ್ತುರಿಕಾ ಅವರು ಪುಟಿನ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. 'ಅವರ್ ಬ್ಯಾಪ್ಟಿಸಂ' ಎಂಬ ಸಾಕ್ಷ್ಯಚಿತ್ರಕ್ಕಾಗಿ ನಡೆದ ಈ ಸಂದರ್ಶನದಲ್ಲಿ ಪುಟಿನ್ ಭಾರತದ ನಾಗರಿಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಹಿಂದಿನ ಮಾತುಕತೆಯೊಂದನ್ನು ನೆನಪಿಸಿಕೊಂಡಿರುವ ಅವರು, ಭಾರತದಲ್ಲಿ ಎಷ್ಟು ಮಂದಿ ಅಧಿಕೃತ ಭಾಷೆ ಮಾತನಾಡುತ್ತಾರೆ ಎಂಬ ತಮ್ಮ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಅಚ್ಚರಿ ಮೂಡಿಸಿತ್ತು ಎಂದು ಹೇಳಿದ್ದಾರೆ.

Advertisement

Advertisement

Also Read

ಭಾರತ ವಿರುದ್ದ ಚೀನಾ-ಬಾಂಗ್ಲಾ ಭಾಯಿಭಾಯಿ? ಕ್ಷಿಪಣಿ ತಯಾರಿಕೆ ತಂತ್ರಜ್ಞಾನವೇ ಗೊತ್ತಿಲ್ಲದ ಬಾಂಗ್ಲಾದೇಶಕ್ಕೆ 405 ಟನ್ ರಾಸಾಯನಿಕ ರವಾನೆಗೆ ಡ್ರ್ಯಾಗನ್ ಸ್ಕೆಚ್

ಭಾರತದಲ್ಲಿ ಎಷ್ಟು ಮಂದಿ ಹಿಂದಿ ಮಾತನಾಡುತ್ತಾರೆ?

"ಭಾರತ ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ. ಭಾರತದ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ ಅದರ ಬಗ್ಗೆ ನನ್ನ ಆಸಕ್ತಿ ಮತ್ತು ಕುತೂಹಲ ಹೆಚ್ಚಾಗುತ್ತಿದೆ" ಎಂದು ಪುಟಿನ್ ಹೇಳಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಂಡ ಪುಟಿನ್, ಭಾರತದಲ್ಲಿ ಎಷ್ಟು ಮಂದಿ ದೇಶದ ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ ಎಂದು ಮೋದಿಯವರನ್ನು ಕೇಳಿದ್ದಾಗಿ ತಿಳಿಸಿದ್ದಾರೆ.

ಅದಕ್ಕೆ ಮೋದಿ ಅವರು ಸುಮಾರು 60 ಕೋಟಿ ಜನರು ಮಾತನಾಡುತ್ತಾರೆ ಎಂದು ಉತ್ತರಿಸಿದ್ದರು. ಬಳಿಕ ಭಾರತದ ಒಟ್ಟು ಜನಸಂಖ್ಯೆ ಎಷ್ಟು ಎಂದು ಕೇಳಿದಾಗ ಸುಮಾರು 150 ಕೋಟಿ ಎಂದು ತಿಳಿಸಿದ್ದರು ಎಂದು ಪುಟಿನ್ ನೆನಪಿಸಿಕೊಂಡಿದ್ದಾರೆ.

ಅಂದರೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ. ಉಳಿದ ಮೂರನೇ ಎರಡರಷ್ಟು ಜನರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ ಎಂಬುದನ್ನು ಈ ಮಾತುಕತೆ ಮೂಲಕ ಅರ್ಥಮಾಡಿಕೊಂಡಿದ್ದಾಗಿ ಪುಟಿನ್ ಹೇಳಿದ್ದಾರೆ.

"ಇದು ನಿಜಕ್ಕೂ ಅದ್ಭುತವಲ್ಲವೇ? ಬಹಳ ಆಸಕ್ತಿದಾಯಕವಾಗಿದೆ" ಎಂದು ಭಾರತದ ಬಹುಭಾಷಾ ಸಂಸ್ಕೃತಿಯನ್ನು ಪುಟಿನ್ ಮೆಚ್ಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments