ಡೊನಾಲ್ಡ್ ಟ್ರಂಪ್  online desk
ವಿದೇಶ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!

ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಅವರ ಕೆಲಸವೇ ಮಾತನಾಡದು. ಆದರೆ ಆ ಮಾತುಗಳೆಲ್ಲ ಅಸಂಬದ್ಧ" ಎಂದು ಹೇಳುವ ಮೂಲಕ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್: ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಒಪ್ಪಂದಕ್ಕೆ ಬರಲು ವಿಫಲವಾದರೆ ಹೊಸ ವರ್ಷದ ಬಳಿಕ ಮತ್ತೊಮ್ಮೆ ಇರಾನ್ ಮೇಲೆ ಸೇನಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳನ್ನು ಅರ್ಥಹೀನ ಎಂದು ಟೀಕಿಸಿರುವ ಅವರು, ಇರಾನ್ ಉದ್ದೇಶಪೂರ್ವಕವಾಗಿ ಮಾತುಕತೆಗಳನ್ನು ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆಗೆ ಮೊದಲು ಇದ್ದುದಕ್ಕಿಂತ ಈಗ ಅವರು ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್‌ನ ಮಾತುಕತೆ ಪ್ರತಿನಿಧಿಗಳನ್ನು ಟೀಕಿಸಿದ ಅವರು, ಅವರನ್ನು 'ವೃತ್ತಿಪರ ಡ್ಯಾನ್ಸರ್‌ಗಳು' ಎಂದು ವ್ಯಂಗ್ಯವಾಡಿದ್ದಾರೆ.

ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ, ಅವರು ಮಾಡುವುದೆಲ್ಲವೂ ಬರೀ ಮಾತು, ಆದರೆ ಅದೆಲ್ಲವೂ ಸುಳ್ಳು" ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಇರಾನ್ ಅಧಿಕಾರಿಗಳು ಮತ್ತಷ್ಟು ಆಕ್ರಮಣಕಾರಿಯಾಗಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಅವರು ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಅವರ ಕೆಲಸವೇ ಮಾತನಾಡದು. ಆದರೆ ಆ ಮಾತುಗಳೆಲ್ಲ ಅಸಂಬದ್ಧ" ಎಂದು ಹೇಳುವ ಮೂಲಕ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಇರಾನ್ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು (Naval Blockade) ಉಲ್ಲಂಘಿಸಲು ಪ್ರಯತ್ನಿಸುವ ಯಾವುದೇ ಇರಾನ್ ಹಡಗುಗಳ ಮೇಲೆ ಅಮೆರಿಕದ ಸೇನಾಪಡೆಗಳು ಗುಂಡು ಹಾರಿಸಿ ಮುಳುಗಿಸಲಿವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ನೌಕಾಪಡೆಯ ಉಪಸ್ಥಿತಿಗೆ ಇರಾನ್ ಪಡೆಗಳು ಅಡ್ಡಿಪಡಿಸಲು ಪ್ರಯತ್ನಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಅವರು ಹಾಗೆ ಮಾಡಲಿ ಎಂದು ನಾನು ಆಶಿಸುತ್ತೇನೆ. ಅವರ ನೌಕಾಪಡೆಯ ಉಳಿದ ಹಡಗುಗಳಂತೆ ಅವುಗಳೂ ಸಮುದ್ರದ ತಳ ಸೇರುತ್ತವೆ ಎಂದು ಹೇಳಿದ್ದಾರೆ.

ಅಲ್ಲದೆ, ವಿದ್ಯುತ್ ಕಡಿತದಂತಹ ಆಂತರಿಕ ಸಮಸ್ಯೆಗಳ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸಿರುವ ಟ್ರಂಪ್, ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಹೋರಾಟ ಮುಂದುವರಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!

ಮತಪಟ್ಟಿ ಪರಿಷ್ಕರಣೆ ವಿವಾದಕ್ಕೆ ತಿರುಗೇಟು; ಕಲಬುರಗಿಯಲ್ಲಿ BJP ಪಾದಯಾತ್ರೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ..!

ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆಗೆ ಭಾರತ ಆಹ್ವಾನಿಸಲಿ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು