ಮೆಕ್ಕಾ: ಪವಿತ್ರ ನಗರವಾದ ಮೆಕ್ಕಾದಲ್ಲಿ ಅಶ್ಲೀಲ ಕೃತ್ಯ ಎಸಗಿದ ಆರೋಪದ ಮೇಲೆ ಬಾಂಗ್ಲಾದೇಶದ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ. ಬಾಂಗ್ಲಾ ಮಹಿಳೆ ನಜ್ರುಲ್ ಇಸ್ಲಾಂ ಅಬ್ದುಲ್ ಬಶೀರ್ ಮತ್ತು ಸಿಟಿ ಅಖ್ತರ್ ಮರಣದಂಡನೆಗೆ ಗುರಿಯಾದವರು. ಘಟನೆ ನಂತರ ಭದ್ರತಾ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಸಂಬಂಧಿತ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.
ನಜ್ರುಲ್ ಇಸ್ಲಾಂ ಅಬ್ದುಲ್ ಬಶೀರ್ ಮತ್ತು ಸಿಟಿ ಅಖ್ತರ್ ವಿರುದ್ಧದ ಆರೋಪಗಳು ಸಾಬೀತಾಗಿದ್ದು ನ್ಯಾಯಾಲಯವು ಮರಣದಂಡನೆ ತೀರ್ಪು ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ಈ ಮರಣದಂಡನೆ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಢಾಕಾದಲ್ಲಿರುವ ಅಧಿಕಾರಿಗಳು ಮತ್ತು ರಿಯಾದ್‌ನಲ್ಲಿರುವ ಅದರ ರಾಯಭಾರ ಕಚೇರಿಗೆ ಕಾನೂನು ಕ್ರಮಗಳ ಬಗ್ಗೆ ಮುಂಚಿತವಾಗಿ ತಿಳಿಸಲಾಗಿಲ್ಲ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ಪೂರ್ವ ಮತ್ತು ಪಶ್ಚಿಮ ಏಷ್ಯಾ ವಿಭಾಗದ ಕಾರ್ಯದರ್ಶಿ ಮೊಹಮ್ಮದ್ ನಜ್ರುಲ್ ಇಸ್ಲಾಂ ಅವರು ಸೌದಿ ರಾಯಭಾರಿ ಅಬ್ದುಲ್ಲಾ ಜಾಫರ್ ಬಿನ್ ಅಬಿಯಾ ಅವರೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶದ ನಾಗರಿಕರ ಮರಣದಂಡನೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸೀದಿಯ ಪಾವಿತ್ರ್ಯದ ಅಪವಿತ್ರತೆ ಮತ್ತು ಅದರ ಸುತ್ತಲಿನ ಸಂದರ್ಭಗಳನ್ನು ಪರಿಗಣಿಸಿ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ. ಸೌದಿ ಅಧಿಕಾರಿಗಳು "ತಜೀರ್" (ದೇಶದ್ರೋಹಕ್ಕೆ ಶಿಕ್ಷೆ) ಅಡಿಯಲ್ಲಿ ಮರಣದಂಡನೆ ವಿಧಿಸಿತ್ತು. ಅಕ್ಟೋಬರ್ 14 ರಂದು ಇಬ್ಬರು ಅಪರಾಧಿಗಳನ್ನು ಗಲ್ಲಿಗೇರಿಸಿದ ನಂತರ ಬಾಂಗ್ಲಾದೇಶಕ್ಕೆ ಅವರ ಮರಣದಂಡನೆ ಬಗ್ಗೆ ತಿಳಿಯಿತು.