ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  online desk
ವಿದೇಶ

ನಾನಿಲ್ಲದಿದ್ದರೆ ಭಾರತ-ಪಾಕ್ ನಡುವೆ ಪರಮಾಣು ಯುದ್ಧವೇ ಆಗುತ್ತಿತ್ತು: ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ ‘Operation Sindoor’ ಪ್ರಸ್ತಾಪ, Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!

ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾನು ನಿಲ್ಲಿಸಿದೆ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಹೀಗೆ ಮುಂದುವರಿದರೆ ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ.

ವಾಷಿಂಗ್ಟನ್: ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಪ್ರಚಾರ ರ‍್ಯಾಲಿಗಳಲ್ಲಿ ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ ‘ಆಪರೇಷನ್ ಸಿಂಧೂರ್’ (Operation Sindoor) ಭಾರಿ ಸದ್ದು ಮಾಡುತ್ತಿದೆ.

ತಮ್ಮ ರಾಜತಾಂತ್ರಿಕ ಮಧ್ಯಸ್ಥಿಕೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬೇಕಿದ್ದ ಮಹಾ ಪರಮಾಣು ಯುದ್ಧ ತಪ್ಪಿದೆ ಎಂದು ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಜಗತ್ತಿನಾದ್ಯಂತ 8 ಯುದ್ಧಗಳನ್ನು ಬಗೆಹರಿಸಿದ್ದರೂ ತಮಗೆ 2026ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದೆ ವಂಚಿಸಲಾಗಿದೆ ಎಂದು ನೋಬೆಲ್ ಸಮಿತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಈ ಹೇಳಿಕೆ ನೀಡಿದ್ದು, ಈ ವೇಳೆ ಭಾರತದ ‘ಆಪರೇಷನ್ ಸಿಂಧೂರ್’ ಕೂಡ ಪ್ರಸ್ತಾಪವಾಗಿದೆ.

ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಎರಡೂ ದೇಶಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾನು ನಿಲ್ಲಿಸಿದೆ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಹೀಗೆ ಮುಂದುವರಿದರೆ ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮಿಬ್ಬರ ಮೇಲೂ ಶೇ. 250ರಷ್ಟು ಭಾರಿ ಸುಂಕ ವಿಧಿಸುತ್ತೇನೆ ಎಂದು ಹೇಳಿದ್ದೆ.

ಬಳಿಕ ಎರಡೂ ದೇಶಗಳು ತೀವ್ರ ಅಸಮಾಧಾನಗೊಂಡಿದ್ದರೂ ಗುಂಡಿನ ದಾಳಿ ನಿಲ್ಲಿಸಿದವು. ಈ ವೇಳೆ 11 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ನಾನು ಈ ಎಲ್ಲ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದೊಂದು ಗೌರವದ ಸಂಗತಿ. ಈ ಪ್ರಯತ್ನದಲ್ಲಿ ವಿಶ್ವಸಂಸ್ಥೆಯ ನೆರವು ಪಡೆದಿರಲಿಲ್ಲ. ನಾನು ವಿಶ್ವಸಂಸ್ಥೆಗೆ ಒಂದೇ ಒಂದು ಕರೆ ಮಾಡಿರಲಿಲ್ಲ. ಆದರೂ ನಾವು ಈ ಎಲ್ಲ ಸಂಘರ್ಷಗಳನ್ನು ನಿಲ್ಲಿಸಿದ್ದೇವೆ. ಇನ್ನೂ ಒಂದೆರಡು ಬಾಕಿ ಇವೆ. ಚುನಾವಣೆಗೆ ಸ್ಪರ್ಧಿಸುವಾಗ ಇಷ್ಟೊಂದು ಯುದ್ಧಗಳಿವೆ ಎಂಬ ಕಲ್ಪನೆಯೂ ನನಗಿರಲಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ನಾನು ನಡೆಸಿದ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸದಿರುವುದಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಎಂಟು ಯುದ್ಧಗಳನ್ನು ಬಗೆಹರಿಸಿದ್ದೇನೆ. ನನಗೆ ನೊಬೆಲ್ ಪ್ರಶಸ್ತಿ ಸಿಕ್ಕಿತೇ? ಇಲ್ಲ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಡಿಸುವಲ್ಲಿ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ಭಾರತ ಹಲವು ಬಾರಿ ತಳ್ಳಿಹಾಕಿದೆ.

ಸೇನಾ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ಎರಡೂ ದೇಶಗಳು ನೇರವಾಗಿ ಮಾತುಕತೆ ನಡೆಸಿ ಕೈಗೊಂಡಿದ್ದವು ಎಂಬುದು ಭಾರತದ ನಿಲುವಾಗಿದೆ.

ಭಾರತವು ಪ್ರಮುಖ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಬಳಿಕ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಮೇ 10ರಂದು ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಭಾರತ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ!

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!

ಹುಬ್ಬಳ್ಳಿಯಲ್ಲಿ ಮತ್ತೆ ಮಾಂಜಾದಾರ ಹಾವಳಿ: ಯುವಕನ ಮುಖಕ್ಕೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! Video

ಚಿರತೆ ರಕ್ಷಣೆಗೆ ಹೋದ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ FIR

IPL 2027ಗೂ ಮೊದಲೇ ಭಾರಿ ಬದಲಾವಣೆ: ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಕೋಚ್ ಆಯ್ಕೆ, ಹೊಸ ಅಧ್ಯಾಯ ಎಂದ MI!