ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II ಪ್ರದಾನ ಮಾಡಿದರು. 
ವಿದೇಶ

170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತದ ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್‌ಗೆ UAEಯಿಂದ ಅತ್ಯುನ್ನತ ನಾಗರಿಕ ಗೌರವ..!

ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿತ್ತು. 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಫ್ಲೈದುಬೈ ವಿಮಾನ ಎಫ್‌ಝಡ್1073 ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದಾಗ ಸಹಪೈಲಟ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದ.

ದುಬೈ: ಮಧ್ಯ-ಆಕಾಶದಲ್ಲಿ ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದ್ದ ಸಹ-ಪೈಲಟ್‌ನ ಭೀಕರ ದಾಳಿಯನ್ನು ಯಶಸ್ವಿಯಾಗಿ ತಡೆದು, ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ಮಿತ್ ಮಚ್ಚಾರ್ ಮತ್ತು ಫ್ಲೈದುಬೈ ಸಿಬ್ಬಂದಿಗೆ 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II' (First Class Order of Zayed II) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ದುಬೈ ಯುವರಾಜ, ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಮಂಗಳವಾರ ನಡೆದ ಸಮಾರಂಭದಲ್ಲಿ ಪದಕಗಳನ್ನು ಪ್ರದಾನ ಮಾಡಿದರು.

ಸಿಬ್ಬಂದಿಯ ಧೈರ್ಯ, ಕರ್ತವ್ಯನಿಷ್ಠೆ ಮತ್ತು ಜವಾಬ್ದಾರಿಯುತ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ ಎಂದು ದುಬೈ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಧ್ಯಕ್ಷರ ಅಧಿಕೃತ ಸ್ವಾಗತ ಸಮಾರಂಭದಲ್ಲಿ ಮಚ್ಚಾರ್ ಮತ್ತು ಫ್ಲೈದುಬೈ ಸಿಬ್ಬಂದಿಗೆ ಈ ಗೌರವ ಪ್ರದಾನ ಮಾಡಲಾಯಿತು.

‘ಝಾಯೆದ್ II ಪ್ರಥಮ ದರ್ಜೆ ಪದಕ’ ಯುಎಇ ಅಧ್ಯಕ್ಷರು ಪ್ರದಾನ ಮಾಡುವ ಉನ್ನತ ಮಟ್ಟದ ನಾಗರಿಕ ಗೌರವವಾಗಿದೆ. ವಿಶಿಷ್ಟ ಸೇವೆ, ಧೈರ್ಯ ಅಥವಾ ದ್ವಿಪಕ್ಷೀಯ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳ ಬಲವರ್ಧನೆಗೆ ಕೊಡುಗೆ ನೀಡಿದ ವ್ಯಕ್ತಿಗಳು, ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ವಿಮಾನ ಸಿಬ್ಬಂದಿಯನ್ನು ಗೌರವಿಸಲು ಈ ಪದಕ ನೀಡಲಾಗುತ್ತದೆ.

ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿತ್ತು. 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಫ್ಲೈದುಬೈ ವಿಮಾನ ಎಫ್‌ಝಡ್1073 ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದಾಗ ಸಹಪೈಲಟ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದ.

ತುರ್ತು ಸಂದರ್ಭಗಳಲ್ಲಿ ಬಳಸಲು ವಿಮಾನದ ಚಾಲಕ ಕೊಠಡಿಯಲ್ಲಿ ಇರಿಸಲಾಗುವ ಅಪಘಾತ ತಡೆಯುವ ಕೊಡಲಿಯಿಂದ ಸಹಪೈಲಟ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಅವರಿಗೆ ಗಂಭೀರ ಗಾಯಗಳಾಗಿದ್ದವು. ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಸ್ರೇಲಿ ಅಧಿಕಾರಿಗಳ ಪ್ರಕಾರ, ದಾಳಿ ನಡೆಸಿದ ಸಹಪೈಲಟ್ ಓಮನ್ ದೇಶದ ಪ್ರಜೆಯಾಗಿದ್ದ. ಆತ ಮಚ್ಚಾರ್‌ ಮೇಲೆ ದಾಳಿ ನಡೆಸಿದ್ದಲ್ಲದೆ, ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ವಿಮಾನ ಸುಮಾರು 14,000 ಅಡಿ ಕೆಳಕ್ಕೆ ಕುಸಿಯುವಂತೆ ಮಾಡಿದ್ದ.

ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದ ಮಚ್ಚಾರ್, ತಮ್ಮಲ್ಲಿದ್ದ ಕೊನೆಯ ಶಕ್ತಿಯನ್ನೂ ಬಳಸಿ ಕೊಠಡಿಯ ಬಾಗಿಲಿನ ತೆರೆಯುವ ವ್ಯವಸ್ಥೆಯನ್ನು ಸಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು.

ಇದರಿಂದ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ಸಹಪೈಲಟ್‌ನನ್ನು ನಿಯಂತ್ರಿಸಲು ಸಾಧ್ಯವಾಯಿತು. ವಿಮಾನದಲ್ಲೇ ಇದ್ದ ಫ್ಲೈದುಬೈನ ಮತ್ತೊಂದು ಜೋಡಿ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು ಸೌದಿ ಅರೇಬಿಯಾದ ತಬೂಕ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.

ನಂತರ ದಾಳಿ ನಡೆಸಿದ ಸಹಪೈಲಟ್‌ನನ್ನು ವಶಕ್ಕೆ ಪಡೆಯಲಾಯಿತು. ಮಚ್ಚಾರ್‌ಗೆ ಆರಂಭದಲ್ಲಿ ಸೌದಿ ಅರೇಬಿಯಾದ ತಬೂಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಡಾನ್‌ನಲ್ಲಿ ಭೀಕರ ನರಮೇಧ: ಜನನಿಬಿಡ ಮಾರುಕಟ್ಟೆ ಮೇಲೆ ಸೇನೆಯಿಂದ ಡ್ರೋನ್ ದಾಳಿ, 100ಕ್ಕೂ ಹೆಚ್ಚು ಸಾವು!

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಭೀಕರ ಬರಕ್ಕೆ ನಲುಗಿದ ಗದಗ: ಹೊಂಬಾಳ ಗ್ರಾಮದಲ್ಲಿ ರೈತರ ಆಕ್ರಂದನ, ಬದುಕಿಗಾಗಿ ನಗರಗಳತ್ತ ಮುಖ ಮಾಡಿದ ಅನ್ನದಾತ..!

"ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ ವಿವಾದ: ನಿಂದಿಸಿಲ್ಲ, ಪ್ರಚೋದನೆಗೆ ಉತ್ತರಿಸಿದ್ದಾರೆ: ಖರ್ಗೆ ಬೆನ್ನಿಗೆ ನಿಂತ 'ಕೈ' ಪಡೆ..!

ಬೆಂಗಳೂರು ಅಭಿವೃದ್ಧಿಗೆ 10 ವರ್ಷಗಳ ಮೆಗಾ ಪ್ಲ್ಯಾನ್‌; ₹1 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಘೋಷಣೆ..!