ಸುತ್ತಮುತ್ತ ಕಟ್ಟಡಗಳು ಕೊಚ್ಚಿಹೋದರೂ ಗಟ್ಟಿಯಾಗಿ ನಿಂತ ಹಸಿರು ಮನೆ Online Desk
ವಿದೇಶ

ಇದು ನಮಗೆ ಸಿಕ್ಕ ಪುನರ್ಜನ್ಮ... ಓಂ ನಮಃ ಶಿವಾಯ, ಹನುಮಾನ್ ಚಾಲೀಸಾ ಜಪವೇ ಶ್ರೀರಕ್ಷೆ; ಪ್ರವಾಹದಲ್ಲಿ ಸುತ್ತಮುತ್ತ ಕಟ್ಟಡಗಳು ಕೊಚ್ಚಿಹೋದರೂ ಗಟ್ಟಿಯಾಗಿ ನಿಂತ ಮನೆ ಒಡತಿಯ ಮಾತು

Miracle in Nepal Floods: ನೇಪಾಳ ಜಲಪ್ರಳಯದಲ್ಲಿ ಪವಾಡ! ಓಂ ನಮಃ ಶಿವಾಯ, ಹನುಮಾನ್ ಚಾಲೀಸಾ ಜಪವೇ ನಮಗೆ ರಕ್ಷೆ; ಅಕ್ಕಪಕ್ಕದ ಮನೆಗಳು ಕೊಚ್ಚಿಹೋದ್ರೂ ಜಗ್ಗದೆ ನಿಂತ ಹಸಿರು ಮನೆಮಾಲಕಿಯ ಕಣ್ಣೀರ ಕಥೆ.

ಕಾಠ್ಮಂಡು (ನೇಪಾಳ): ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಮಹಾ ದುರಂತದಲ್ಲಿ ಸಾವಿನ ಸಂಖ್ಯೆ 1,127ಕ್ಕೆ ಏರಿಕೆಯಾಗಿದ್ದು, ನಾಪತ್ತೆಯಾಗಿರುವ 4,858 ಮಂದಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಇದರ ನಡುವೆಯೇ, ಕಳೆದ 2-3 ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ, ವಿನಾಶಕಾರಿ ಹಠಾತ್ ಪ್ರವಾಹದ ಸಂದರ್ಭದಲ್ಲಿ, ವಿಶಿಷ್ಟವಾದ ಹಸಿರು ಮನೆ (ಮಿರಕಲ್ ಗ್ರೀನ್ ಹೌಸ್) ಪ್ರವಾಹದ ತೀವ್ರತೆಗೆ ಸಿಲುಕದೆ ಸುರಕ್ಷಿತವಾಗಿ ಉಳಿದುಕೊಂಡಿತ್ತು. ಈ ಬಗ್ಗೆ ಆ ಹಸಿರು ಬಣ್ಣದ ಮನೆಯ ಒಡತಿ ಲಕ್ಷ್ಮೀ ಪಾಂಡೆ ಮಾತಾನಾಡಿ, "ಆ ವೇಳೆ, ನಿರಂತರವಾಗಿ "ಓಂ ನಮಃ ಶಿವಾಯ" ಮಂತ್ರವನ್ನು ಹಾಗೂ ಹನುಮಾನ್ ಚಾಲೀಸಾವನ್ನು ಜಪಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇದು ನಮಗೆ ಸಿಕ್ಕ ಪುನರ್ಜನ್ಮ...

ಪ್ರವಾಹದ ನೀರು ಭೀಕರ ವೇಗದಲ್ಲಿ ಬಂದು ಇಡೀ ಮನೆಯನ್ನು ಆವರಿಸಿದಾಗ, ಲಕ್ಷ್ಮೀ ಮತ್ತು ಅವರ ಕುಟುಂಬಸ್ಥರು ಜೀವ ಉಳಿಸಿಕೊಳ್ಳಲು ಮನೆಯ ಮೇಲಿನ ಮಹಡಿಗೆ ಓಡಿದರು. ಆ ತಲ್ಲಣದ ಕ್ಷಣಗಳಲ್ಲಿ ತಾವು ಬದುಕುಳಿಯುತ್ತೇವೆ ಎಂಬ ಆಸೆಯನ್ನೇ ಅವರು ಬಿಟ್ಟಿದ್ದರು. ಆದರೆ, ಆ ಪ್ರವಾಹದ ವೇಳೆ ಓಂ ನಮಃ ಶಿವಾಯ ಮಂತ್ರ ಹಾಗೂ ಹನುಮಾನ್ ಚಾಲೀಸಾವನ್ನು ಜಪಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು ಎಂದು ಮನೆಯ ಒಡತಿ ಲಕ್ಷ್ಮೀ ಪಾಂಡೆ ತಿಳಿಸಿದ್ದಾರೆ. ಇದೇ ವೇಳೆ ತಾವು ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದಾರೆ.

ಮುಂದುವರೆದು,  ಸುತ್ತಮುತ್ತಲಿನ ಕಟ್ಟಡಗಳು ಮತ್ತು ಆಸ್ತಿಪಾಸ್ತಿಗಳು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದರೂ, ಇವರ ಮನೆ ಮಾತ್ರ ಅಚ್ಚರಿ ಎಂಬಂತೆ ಗಟ್ಟಿಯಾಗಿ ನಿಂತಿತ್ತು. "ನಮ್ಮ ಮನೆ ಈ ರೀತಿ ಸುರಕ್ಷಿತವಾಗಿ ಉಳಿದಿರುವುದು ಮತ್ತು ನಾವು ಜೀವಂತವಾಗಿರುವುದು ಶಿವ ಹಾಗೂ ಹನುಮಂತನ ಅಪಾರ ಕೃಪೆ. ಇದು ನಮಗೆ ಸಿಕ್ಕ ಪುನರ್ಜನ್ಮ" ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಈ ಮನೆಯ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದ್ದು, ಅನೇಕರು ಇದನ್ನು ತಾಂತ್ರಿಕ ಇಂಜಿನಿಯರಿಂಗ್ ಚಮತ್ಕಾರ ಎಂದರೆ, ಇನ್ನೂ ಕೆಲವರು ಈ ಕುಟುಂಬದ ಅದಮ್ಯ ನಂಬಿಕೆ ಮತ್ತು ದೈವಿಕ ರಕ್ಷಣೆ ಎಂದು ಶ್ಲಾಘಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಸ್ತುತ ಲಕ್ಷ್ಮೀ ಪಾಂಡೆ ಅವರ ಕುಟುಂಬವನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!