ವಿಯೆಟ್ನಾಂ: ವಿಯೆಟ್ನಾಂನ ನಾ ಟ್ರಾಂಗ್‌ನಲ್ಲಿ ಶನಿವಾರ ನಡೆದ ಭವ್ಯ ಸಮಾರೋಪ ಸಮಾರಂಭದಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ ಅಂತಿಮ ಆರು ಸ್ಪರ್ಧಿಗಳನ್ನು ಸೋಲಿಸುವ ಮೂಲಕ ಡೊಮಿನಿಕನ್ ರಿಪಬ್ಲಿಕ್‌ನ ಜೋಹೈರಿ ಮೋಲಾ ಪ್ರತಿಷ್ಠಿತ 'ಮಿಸ್ ವರ್ಲ್ಡ್ 2026' ಕಿರೀಟವನ್ನು ಮುಡಿಗೇರಿಸಿಕೊಂಡರು. ಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ವಿಯೆಟ್ನಾಂ ಮತ್ತು ಎರಿಟ್ರಿಯಾದ ಪ್ರತಿನಿಧಿಗಳನ್ನು ಹಿಂದಿಕ್ಕಿ ಮೋಲಾ ಈ ಗೌರವಕ್ಕೆ ಪಾತ್ರರಾದರು.
ಮಲೇಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ವಿಯೆಟ್ನಾಂ ಮತ್ತು ಎರಿಟ್ರಿಯಾದ ಸ್ಪರ್ಧಿಗಳೊಂದಿಗೆ ಅಂತಿಮ ಹಂತ ತಲುಪಿದ ಮೋಲಾ, ಕೊನೆಗೆ ಅವರೆಲ್ಲರನ್ನು ಸೋಲಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡರು. ಕಿರೀಟ ಮುಡಿಗೇರಿಸಿಕೊಂಡ ಈ ಕ್ಷಣದಲ್ಲಿ, ಥೈಲ್ಯಾಂಡ್‌ನ ಹಾಲಿ ಮಿಸ್ ವರ್ಲ್ಡ್ ಓಪಾಲ್ ಸುಚಾಟಾ ಚುವಾಂಗ್‌ಸ್ರಿ ಕೂಡ ಗಮನ ಸೆಳೆದರು.
ಸಮಾರೋಪ ಸಮಾರಂಭದಲ್ಲಿ ಅವರು, ತಮ್ಮ ಉತ್ತರಾಧಿಕಾರಿಗೆ ಕಿರೀಟ ಧಾರಣೆ ಮೂಲಕ ಅಧಿಕೃತವಾಗಿ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಸ್ಪೇನ್‌ನ ಎಲಿಸಬೆತ್ ರೇನ್ಸ್ ಅಲಬರ್ನ್ ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದರೆ, ಅಂತಿಮ ಸುತ್ತುಗಳ ನಂತರ ಮಲೇಷ್ಯಾದ ತಾನುಸಿಯಾ ಚೆಟ್ಟಿ ದ್ವಿತೀಯ ರನ್ನರ್-ಅಪ್ ಆಗಿ ಆಯ್ಕೆಯಾದರು. 73ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ನಿಕಿತಾ ಪೋರ್ವಾಲ್ ಅವರು ಅಗ್ರ 40 ಸ್ಪರ್ಧಿಗಳ ಹಂತದಲ್ಲಿ ಸ್ಪರ್ಧೆಯಿಂದ ಹೊರಬೀಳುವುದರೊಂದಿಗೆ ಅಂತ್ಯಗೊಂಡಿತು.
ಅವರ ಪ್ರಯಾಣದ ಬಗ್ಗೆ ಅಧಿಕೃತ ಮಿಸ್ ಇಂಡಿಯಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್, ಪ್ರತಿಕ್ರಿಯಿಸಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಪೋರ್ವಾಲ್ ಅವರನ್ನು ಸಂಸ್ಥೆಯು ಶ್ಲಾಘಿಸಿದೆ.