ನೇಪಾಳ ಪ್ರವಾಹದ ಹೊಸ ವಿಡಿಯೋ 
ವಿದೇಶ

Nepal floods: 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ರುದ್ರನರ್ತನ, ಸಾವಿನ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ಇನ್ನೂ ನಾಪತ್ತೆ, ಹೊಸ Video ವೈರಲ್!

ದುರಂತದ ಭೀಕರತೆಯನ್ನು ತೋರಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಹದ ರೌದ್ರರೂಪ ಹಾಗೂ ವ್ಯಾಪಕ ನಾಶದ ದೃಶ್ಯಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

ಕಠ್ಮಂಡು: ಸಾವಿರಾರು ಜನರ ದಾರುಣ ಸಾವಿಗೆ ಕಾರಣವಾದ ನೇಪಾಳದ ಪ್ರವಾಹದ ರುದ್ರನರ್ತನದ ಮತ್ತೊಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ನೀರು ಹರಿಯುನ ಭೀಕರ ದೃಶ್ಯ ಸೆರೆಯಾಗಿದೆ.

ಹೌದು.. ದುರಂತದ ಭೀಕರತೆಯನ್ನು ತೋರಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಹದ ರೌದ್ರರೂಪ ಹಾಗೂ ವ್ಯಾಪಕ ನಾಶದ ದೃಶ್ಯಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

Nepal7 ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್ಲೋಡ್ ಆಗಿರುವ ಹೊಸ ವಿಡಿಯೋದಲ್ಲಿ ಯುವಕರ ತಂಡವೊಂದು ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ದೊಡ್ಡ ಶಬ್ದದೊಂದಿಗೆ ಪಕ್ಕದ ನದಿಯಲ್ಲಿ ಧುಮ್ಮಿಕ್ಕಿ ಹರಿಯುವುದು ವಿಡಿಯೋದಲ್ಲಿ ದಾಖಲಾಗಿದೆ. ನೀರಿನ ಶಬ್ದ ಕೇಳುತ್ತವೇ ಯುವಕರು ಮೈದಾನದಿಂದ ಓಡುತ್ತಾರೆ.

ಈ ವೇಳೆ ನದಿಯ ನೀರು ಏಕಾಏಕಿ ಆಗಸದೆತ್ತರದಲ್ಲಿ ಹರಿಯವುದು ಕಾಣುತ್ತದೆ. ನೋಡುತ್ತಲೇ ನೀರು ಅಲ್ಲಿನ 4 ಅಂತಸ್ತಿನ ಕಟ್ಟಡದ ಮೇಲಿಂದ ಹರಿಯುನ ರುದ್ರರಮಣೀಯ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ಮೇಲಂತಸ್ತಿಗೆ ಓಡಿದ ಜನ

ಅತ್ತ ಪ್ರವಾಹದ ನೀರು ನುಗ್ಗುತ್ತಲೇ ಇತ್ತ ಕ್ಯಾಮೆರಾದಲ್ಲಿ ಅದನ್ನು ಸೆರೆ ಹಿಡಿಯುತ್ತಿದ್ದ ವ್ಯಕ್ತಿ ನೀರು ತಮ್ಮ ಕಟ್ಟಡದತ್ತ ನುಗ್ಗುವುದನ್ನು ಗಮನಿಸಿದ್ದಾರೆ. ಈ ವೇಳೆ ಕೂಡಲೇ ಸಮೀಪದಲ್ಲಿದ್ದವರಿಗೆ ಕೂಗಿ ಮೇಲಂತಸ್ತಿಗೆ ಓಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದಾದ ಕೆಲವೇ ಸೆಕೆಂಡ್ ಗಳಲ್ಲಿ ಭೀಕರ ಪ್ರವಾಹದ ನೀರು ಅವರಿದ್ದ ಕಟ್ಟಡಕ್ಕೂ ಹೊಡೆಯುತ್ತದೆ.

ಸಾವಿನ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ಇನ್ನೂ ನಾಪತ್ತೆ

ಇನ್ನು ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಪರಿಣಾಮ ಸಾವಿನ ಸಂಖ್ಯೆ 1,365ಕ್ಕೆ ಏರಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇನ್ನಷ್ಟು ಮೃತದೇಹಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇದೇ ವೇಳೆ ನಾಪತ್ತೆಯಾಗಿರುವ 5,326 ಮಂದಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ನಾಪತ್ತೆಯಾದವರಲ್ಲಿ ಕನಿಷ್ಠ 589 ಮಂದಿ ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂದು ನೇಪಾಳ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಸುದ್ದಿಪ್ರಕಟಣೆ ತಿಳಿಸಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಚಿತ್ವಾನ್ ಜಿಲ್ಲೆಯಲ್ಲಿ 363 ಮೃತದೇಹಗಳು, ನಾವಲ್‌ಪರಾಸಿ ಈಸ್ಟ್‌ನಲ್ಲಿ 226, ನಾವಲ್‌ಪರಾಸಿ ವೆಸ್ಟ್‌ನಲ್ಲಿ 222 ಹಾಗೂ ನುವಾಕೋಟ್‌ನಲ್ಲಿ 197 ಮೃತದೇಹಗಳು ಪತ್ತೆಯಾಗಿವೆ. ಅದೇ ರೀತಿ ರಸುವಾ ಜಿಲ್ಲೆಯಲ್ಲಿ 174, ಗೋರ್ಖಾದಲ್ಲಿ 75, ಧಾದಿಂಗ್‌ನಲ್ಲಿ 70 ಹಾಗೂ ತನುಹುದಲ್ಲಿ 38 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.

ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈವರೆಗೆ 102 ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುತು ಪತ್ತೆಯಾಗದ 1,147 ಮೃತದೇಹಗಳನ್ನು ಭದ್ರತಾ ಸಿಬ್ಬಂದಿ ನಿಗದಿತ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿ ಭೂಗತವಾಗಿ ಸಂರಕ್ಷಿಸಿದ್ದಾರೆ. ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಮಾದರಿಗಳನ್ನೂ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 26ರಂದು ನೇಪಾಳ–ಟಿಬೆಟ್ ಗಡಿ ಸಮೀಪ ಸಂಭವಿಸಿದ ಹಿಮ–ಬಂಡೆಗಳ ಭಾರೀ ಕುಸಿತದಿಂದ ಉಂಟಾದ ಹಠಾತ್ ಪ್ರವಾಹವು ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳಿಗೆ ಭಾರೀ ಹಾನಿ ಉಂಟುಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

West Asia Conflict ಎಫೆಕ್ಟ್: ಗಗನಕ್ಕೇರುತ್ತಿದೆ ಜಾಗತಿಕ ತೈಲ ದರ, $100 ತಲುಪಿದ ಕಚ್ಚಾ ತೈಲ ಬೆಲೆ..!

'ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ, ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ': ವಿಜಯ್ ಮಲ್ಯ